ಪುತ್ತೂರು: ಎಪಿಎಂಸಿ ರಸ್ತೆಯ ಲಿಲ್ಲಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ವೀರ ಮಾಚಿದೇವ ವಿವಿಧೋದ್ದೇಶ ಸಹಕಾರ ಸಂಘವು 2024-24ನೇ ಸಾಲಿನಲ್ಲಿ ರೂ.37.65. ಕೋಟಿ ವ್ಯವಹಾರ ನಡೆಸಿ ರೂ.9,78,224.23 ಲಾಭಗಳಿದ್ದು ಸದಸ್ಯರಿಗೆ ಶೇ.9 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಇಂದುಶೇಖರ್ ಪಿ.ಬಿ ಮಹಾಸಭೆಯಲ್ಲಿ ಘೋಷಣೆ ಮಾಡಿದರು.

ಸಭೆಯು ಸೆ.14ರಂದು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಸಹಕಾರ ಜ್ಯೋತಿ ಸಭಾ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ವರ್ಷಾಂತ್ಯಕ್ಕೆ 5546 ಸದಸ್ಯರಿಂದ ರೂ.46,58,450 ಪಾಲು ಬಂಡವಾಳ, ರೂ.8,21,67,108.66 ವಿವಿಧ ಠೇವಣಿ,ರೂ.1,93,15,553.39ನ್ನು ವಿವಿಧ ಸಹಕಾರ ಸಂಘಗಳಲ್ಲಿ ಧನ ವಿನಿಯೋಗಿಸಲಾಗಿದೆ. ರೂ.7,42,15,437ನ್ನು ಸದಸ್ಯರಿಗೆ ವಿವಿಧ ರೂಪದಲ್ಲಿ ಸಾಲ ವಿತರಿಸಲಾಗಿದೆ. ಶೇ.85 ಸಾಲ ವಸೂಲಾತಿ ಮಾಡಲಾಗಿದೆ. ರೂ.9.70 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು ಎ ಶ್ರೇಣಿ ಪಡೆದುಕೊಂಡಿದೆ. ಲಾಭಾಂಶವನ್ನು ಉಪನಿಬಂಧನೆಯಂತೆ ವಿಂಗಡಿಸಲಾಗಿದೆ.
ಪಾವತಿಯಾದೇ ಉಳಿದ ಡಿವಿಡೆಂಡ್‌ನ್ನು ಮೀಸಲು ನಿಧಿಗೆ ವರ್ಗಾವಣೆ:
ಸದಸ್ಯರಿಗೆ ಡಿವಿಡೆಂಡ್‌ನ ಮೊತ್ತವನ್ನು ಸಂಘದ ಸದಸ್ಯರ ಸಂಚಯ ಖಾತೆಗೆ ಜಮೆ ಮಾಡಲಾಗುತ್ತಿದೆ. ಸಂಚಯ ಖಾತೆ ಹೊಂದಿರದ ಸದಸ್ಯರ ಡಿವಿಡೆಂಡ್ ಮೊತ್ತವು ಪಾವತಿಯಾಗದೆ ಬಾಕಿ ಉಳಿದಿರುವ ಮೊತ್ತದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅಂತಿಮವಾಗಿ ಸದಸ್ಯರಿಗೆ ನೊಟೀಸ್ ನೀಡಿ ಮನವರಿಕೆ ಮಾಡಲಾಗುವುದು. ಆ ಬಳಿಕವೂ ಅವರು ಪಡೆದುಕೊಳ್ಳದಿದ್ದರೆ ಉಳಿಕೆಯಾದ ಡಿವಿಡೆಂಡ್‌ನ ಮೊತ್ತವನ್ನು ಮೀಸಲು ನಿಧಿಗೆ ವರ್ಗಾವಣೆ ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರ:
2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಪದವಿ ಹಾಗೂ ಉನ್ನತ ವಿದ್ಯಾಭ್ಯಾಸ ಪಡೆಯುತ್ತಿರುವ ಸಮಾಜದ ಪ್ರತಿಭಾವಂತ 23 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷ ಪಿ.ಎನ್ ಸುಭಾಶ್ಚಂದ್ರ, ನಿರ್ದೇಶಕರಾದ ಸುಬ್ಬಣ್ಣ ನೂಜಿ, ಬಾಬು ಎಚ್., ರಘುನಾಥ ನೆಲ್ಯಾಡಿ, ಜಯಂತ ಮುಂಡಾಜೆ, ಸುರೇಶ್ ಬೈಂದೂರು, ಶೋಭಾ ಸೀತಾರಾಮ, ಯಾದವಿ ಜಯಕುಮಾರ್, ಜಯಂತ ಬೇಕಲ್, ಈಶ್ವರ ಡಿ. ವಿಟ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಥಮ್ ಪಿ.ಎಚ್. ಪ್ರಾರ್ಥಿಸಿದರು. ಅಧ್ಯಕ್ಷ ಇಂದುಶೇಖರ್ ಸ್ವಾಗತಿಸಿದರು. ಪ್ರಭಾರ ಕಾರ್ಯದರ್ಶಿ ನಿಶಾಂತ್ ಡಿ. ವರದಿ ಹಾಗೂ ಆಯವ್ಯಗಳನ್ನು ಮಂಡಿಸಿದರು. ಉಜಿರೆ ಶಾಖಾ ವ್ಯವಸ್ಥಾಪಕ ಯೊಗೀಶ್ ಕಾರ್ಯಕ್ರಮ ನಿರೂಪಿಸಿದರು. ಕಲ್ಲಡ್ಕ ಶಾಖಾ ಸಿಬ್ಬಂದಿ ದೀಕ್ಷಿತಾ ಪಿ. ವಂದಿಸಿದರು.
ಶೀಘ್ರದಲ್ಲೇ ಸ್ವಂತ ಕಟ್ಟಡಕ್ಕೆ ಸ್ಥಳಾಂತರ:
ಸಂಘದ ಕೇಂದ್ರ ಕಚೇರಿಗೆ ಸ್ಥಳಾಂತರ ಪ್ರಕ್ರಿಯೆಗಳು ಬಹುತೇಕ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಆದರ್ಶ ಆಸ್ಪತ್ರೆಯ ಮುಂಭಾಗದ ವಿಶಾಲವಾದ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಸಂಘವು ಹಂತ ಹಂತವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಸಮಾಜ ಬಾಂಧವರು ಸಂಘದ ಮುಖಾಂತರವೇ ವ್ಯವಹಾರ ನಡೆಸಿ ಸಂಘದ ಬೆಳವಣಿಗೆಯಲ್ಲಿ ಸಹಕರಿಸಬೇಕು. ತಮ್ಮ ಭಾಗದಲ್ಲಿ ಶಾಖೆಗಳನ್ನು ಪ್ರಾರಂಭಿಸಬೇಕಿದ್ದರೆ ಸದಸ್ಯರು ಸಲಹೆ ನೀಡಬೇಕು.
ಇಂದುಶೇಖರ್ ಪಿ.ಬಿ., ಅಧ್ಯಕ್ಷರು