ವಿಟ್ಲ ಪಟ್ಟಣ ಪಂಚಾಯತ್ ಅಕ್ರಮ-ಸಕ್ರಮ ಮಂಜೂರು !

0


ಪುತ್ತೂರು: ವಿಟ್ಲದ ಪಟ್ಟಣ ಪಂಚಾಯತ್‌ನಲ್ಲಿ 10 ಸಾವಿರದಷ್ಟು ಅಕ್ರಮ ಸಕ್ರಮ ಫೈಲ್ ಪೆಂಡಿಂಗ್ ಇದೆ. 2015ರಲ್ಲಿ ಪಟ್ಟಣ ಪಂಚಾಯತ್ ಆಗಿರುವುದು. 2015ರ ಮುಂಚೆ ಎಷ್ಟೋ ಜನ ಅಕ್ರಮಸಕ್ರಮಕ್ಕೆ ಅರ್ಜಿ ಹಾಕಿದ್ದರು. ಆದರೆ ಅದನ್ನು ಸಕ್ರಮ ಮಾಡಿಲ್ಲ. ಇದು ಯಾರ ತಪ್ಪು. ಆಗಿದ್ದ ಶಾಸಕರು, ಸಮಿತಿ, ಸರಕಾರದ್ದು ತಪ್ಪು. ಈ ಕುರಿತು ಸರಕಾರದಲ್ಲಿ ಚರ್ಚಿಸಿದರೆ ಕಾನೂನು ಎಂದು ಹೇಳುತ್ತಾರೆ. ಆ ಭಾಗದಲ್ಲಿ ಗೌಡ್ರುಗಳೇ ಇರುವುದು. ನಮಗೆ ಅಲ್ಲಿ ಅತ್ಯಂತ ಕಡಿಮೆ ಓಟ್ ಸಿಗುವ ಜಾಗ. ಆದರೂ ಕೂಡಾ ಪರ್ಸನಲ್ ಇನ್‌ಟ್ರೆಸ್ಟ್ ತೆಗೆದುಕೊಂಡು ವಕೀಲರನ್ನು ನೇಮಕ ಮಾಡಿ ಇಬ್ಬರು ವ್ಯಕ್ತಿಗಳ ಮೂಲಕ ಕೋರ್ಟ್‌ಗೆ ಹಾಕಿದೆ. ಇದೀಗ ಕೋರ್ಟ್ 2015ರ ಒಳಗೆ ಅರ್ಜಿ ಹಾಕಿದವರಿಗೆ ಅಕ್ರಮ ಸಕ್ರಮ ಮಂಜೂರು ಮಾಡುವಂತೆ ನಿರ್ದೇಶ ನೀಡಿದೆ. ಹಾಗಾಗಿ ಅದನ್ನು ಮಾಡುತ್ತೇನೆ. ಮುಂದೆ ಯಾರ‍್ಯಾರು ಕೋರ್ಟ್‌ಗೆ ಹೋಗುತ್ತಾರೋ ಅವರಿಗೂ ಮಂಜೂರು ಮಾಡಿಸಿಕೊಡುತ್ತೇನೆ. ಇಲ್ಲಿನ ಯಾವ ಎಮ್.ಎಲ್‌ಎ ಮಾಡದ ಕೆಲಸ ಆಗಿದೆ. ಇವತ್ತಿನ ತನಕ ಅದರ ಬಗ್ಗೆ ಯಾರೂ ಕಾಳಜಿ ವಹಿಸಿಲ್ಲ. ಮುಂದಿನ ಅಕ್ರಮ ಸಕ್ರಮ ಸಮಿತಿ ಸಭೆಯಲ್ಲಿ ಮಂಜೂರ ಮಾಡುತ್ತೇವೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.

LEAVE A REPLY

Please enter your comment!
Please enter your name here