ಲಯನ್ಸ್ ಪುತ್ತೂರು ಕ್ರೌನ್ ನಿಂದ ಶಿಕ್ಷಕರ ದಿನಾಚರಣೆ

0

ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ನಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

ಇತ್ತೀಚೆಗೆ ನಿವೃತ್ತಿ ಹೊಂದಿದ ಉಪ್ಪಿನಂಗಡಿ ಪುಳಿತ್ತಡಿ ಮಠ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜ್ಯುಲಿಯಾನ ವಾಸ್ ಹಾಗೂ ಲಯನ್ಸ್ ಕ್ರೌನ್ ಸದಸ್ಯೆ, ಕ್ಲಬ್ ಅಧ್ಯಕ್ಷ ಅಂತೋನಿ ಒಲಿವೆರಾರವರ ಪತ್ನಿ ಬೊಳ್ವಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮೋನಿಕಾ ಪಿ.ಮಾಡ್ತಾರವರುಗಳಿಗೆ ಕ್ಲಬ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಸನ್ಮಾನಿತ ಶಿಕ್ಷಕರ ಪರಿಚಯವನ್ನು ಸದಸ್ಯೆ ಲೀನಾ ರೇಗೊ, ಸದಸ್ಯ ಐವನ್ ಫೆರ್ನಾಂಡೀಸ್ ರವರು ನೀಡಿದರು. ಕ್ಲಬ್ ಕಾರ್ಯದರ್ಶಿ ಲೀನಾ ಮಚಾದೋ, ಕೋಶಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜ, ಗೈಡಿಂಗ್ ಲಯನ್ ಲ್ಯಾನ್ಸಿ ಮಸ್ಕರೇನ್ಹಸ್, ಅನಿತಾ ಡಿ’ಸೋಜರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here