ಕೆದಂಬಾಡಿ ಗ್ರಾಮ ಪಂಚಾಯತ್ ನಲ್ಲಿ ವೈಜ್ಞಾನಿಕ ತೆಂಗು ಕೃಷಿ ಕುರಿತು ತರಬೇತಿ

0

ಪುತ್ತೂರು: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,ಭಾರತೀಯ ಕೃಷಿ ಸಂಶೋಧನಾ ಮಂಡಳಿ-ಕೇಂದ್ರೀಯ ತೋಟ ಬೆಳೆಗಳ ಸಂಶೋಧನಾ ಸಂಸ್ಥೆ ಕಾಸರಗೋಡು,ಕೃಷಿ ವಿಜ್ಞಾನ ಕೇಂದ್ರ ದಕ್ಷಿಣ ಕನ್ನಡ,ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ‌ಅಭಿಯಾನ ಯೋಜನೆ-ಸಂಜೀವಿನಿ ಸಹಭಾಗಿತ್ವದಲ್ಲಿ ಗ್ರಾಮ ಪಂಚಾಯತ್ ಕೆದಂಬಾಡಿ ಹಾಗೂ ಆಸರೆ ಸಂಜೀವಿನಿ ಒಕ್ಕೂಟ ಕೆದಂಬಾಡಿ ಇವರ ಆಶ್ರಯದಲ್ಲಿ ಕೆದಂಬಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪರಿಶಿಷ್ಟ ಜಾತಿಯ ರೈತ ಭಾಂದವರಿಗೆ SCSP ಯೋಜನೆಯ ಅಡಿಯಲ್ಲಿ ವೈಜ್ಞಾನಿಕ ತೆಂಗು ಕೃಷಿ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು.

ಕಾಸರಗೋಡು ICAR CPCRI ಹಿರಿಯ ವಿಜ್ಞಾನಿ ಡಾ. ಮಣಿಕಂಠ ಇವರು ತರಬೇತಿ ನೀಡಿದರು. ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷೆ ಸುಜಾತಾ ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಜಯಲಕ್ಷ್ಮ , ಒಕ್ಕೂಟದ ಅಧ್ಯಕ್ಷೆ ವಿದ್ಯಾವತಿ ರೈ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ. ಕೆ ,ತಾಲೂಕು ವ್ಯವಸ್ಥಾಪಕ ಮೋಹನ್ , ಪಂಚಾಯತ್ ಕಾರ್ಯದರ್ಶಿ ಸುರೇಂದ್ರ ರೈ ಇ ,ಒಕ್ಕೂಟದ ಪಧಾಧಿಕಾರಿಗಳು,ಸಿಬ್ಬಂದಿಗಳು, ಕೆಯ್ಯೂರು,ಮುಂಡೂರು,ಕೆದಂಬಾಡಿ ಕೃಷಿ ಸಖಿಗಳು ,ಕೆದಂಬಾಡಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು, ಪರಿಶಿಷ್ಟ ಜಾತಿ ಫಲಾನುಭವಿ ಗಳಿಗೆ ತೆಂಗಿನ ಸಸಿ ವಿತರಿಸಲಾಯಿತು.

LEAVE A REPLY

Please enter your comment!
Please enter your name here