ಪುತ್ತೂರು: ಅತೀ ಹೆಚ್ಚು ಅಡಿಕೆ ಖರೀದಿ ಮಾಡಿದ ಸಾಧನೆಗಾಗಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸವಣೂರು ಗೆ ಮಂಗಳೂರು ಬೈಕಂಪಾಡಿಯಲ್ಲಿ, ಸೀತಾರಾಮ ರೈ ಸವಣೂರು ರವರ ಅಧ್ಯಕ್ಷತೆಯಲ್ಲಿ ಜರುಗಿದ ಮಾಸ್ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಗೌರವಾರ್ಪಣೆ ಮಾಡಲಾಯಿತು.
ಸವಣೂರು ಮಾಸ್ ಅಡಿಕೆ ಖರೀದಿ ಕೇಂದ್ರಕ್ಕೆ ಅಡಿಕೆ ಮಾರಾಟ ಮಾಡಿ ಈ ಸಾಧನೆಗೆ ಕಾರಣಕರ್ತರಾಗಿರುವ ಅಡಿಕೆ ಬೆಳೆಗಾರರ ಪರವಾಗಿ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ರವರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಚೇತನ್ ಕೋಡಿಬೈಲು, ನಿರ್ದೇಶಕ ಅಶ್ವಿನ್ ಎಲ್ ಶೆಟ್ಟಿ, ಸವಣೂರು ಮಾಸ್ ಶಾಖೆ ಅಡಿಕೆ ಖರೀದಿ ಕೇಂದ್ರದ ಶಾಖಾ ಮೇನೇಜರ್ ಯತೀಶ್ ಉಪಸ್ಥಿತರಿದ್ದರು.