ಪುತ್ತೂರು: ಪ್ರತಿಷ್ಠಿತ ವಸತಿಯುತ ವಿದ್ಯಾಸಂಸ್ಥೆಯಾಗಿರುವ ಸುದಾನ ಶಿಕ್ಷಣ ಸಂಸ್ಥೆಯಲ್ಲಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ,ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಇದರ ಆರು ದಿನಗಳ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಹಾಗೂ ಪುತ್ತೂರು ಸ್ಥಳೀಯ ಸಂಸ್ಥೆಯ ವತಿಯಿಂದ ಜಿಲ್ಲಾ ಮಟ್ಟದ ಕಬ್ ಮಾಸ್ಟರ್, ಫ್ಲಾಕ್ ಲೀಡರ್, ಸ್ಕೌಟ್ ಮಾಸ್ಟರ್, ಗೈಡ್ ಕ್ಯಾಪ್ಟನ್ ಗಳ ಪ್ರಾಥಮಿಕ ತರಬೇತಿ ಶಿಬಿರವು, ಸೆಪ್ಟೆಂಬರ್ 22 ರಿಂದ 29 ರವರೆಗೆ ನಡೆಯಲಿದ್ದು, ಇದರ ಉದ್ಘಾಟನಾ ಸಮಾರಂಭವು ಸೆ.22 ರಂದು ಸುದಾನ ವಸತಿಯುತ ಶಾಲೆ ಪುತ್ತೂರಿನಲ್ಲಿ ನಡೆಯಿತು.
ಪುತ್ತೂರು ಸ್ಥಳೀಯ ಸುದಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿಜಯ ಹಾರ್ವಿನ್ ರವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್, ಹರಿ ಪ್ರಸಾದ್ BRP, ಜಿಲ್ಲಾ ಸ್ಕೌಟ್ ಆಯುಕ್ತ ಬಿ.ಎಂ. ತುಂಬೆ, ಸ್ಥಳೀಯ ಸಂಸ್ಥೆಯ ಕಾರ್ಯಾಧ್ಯಕ್ಷ ಶ್ರೀಧರ್ ರೈ, ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆ ಬುಡೋಳಿ, ಗಡಿಯಾರ ಇಲ್ಲಿನ ಸಂಚಾಲಕ ಅಬ್ದುಲ್ ಖಾದರ್ ಕುಕ್ಕಾಜೆ, ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ವಿದ್ಯಾ ಆರ್ ಗೌರಿ, ಶಿಬಿರ ನಾಯಕಿ ಸುನೀತಾ, ಶಿಬಿರ ಸಹಾಯಕರಾದ ಫೆಲ್ಸಿ ಫೆರ್ನಾಂಡಿಸ್, ಅಕ್ಕಮ್ಮ, ಮೋಹನ್, ಚಂದ್ರಕ್ಷ , ಮೇಬಲ್ ಡಿ ಸೋಜಾ, ಅನುರಾಧ, ಗೀತಾ ಆಚಾರ್, ಶೈನಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಕಬ್ ವಿಭಾಗದಲ್ಲಿ 16, ಬುಲ್ ಬುಲ್ ವಿಭಾಗದಲ್ಲಿ 17, ಸ್ಕೌಟ್ ವಿಭಾಗದಲ್ಲಿ 21, ಗೈಡ್ ವಿಭಾಗದಲ್ಲಿ 24 ಒಟ್ಟು 78 ಶಿಕ್ಷಕರು ಭಾಗವಹಿಸುತ್ತಿದ್ದಾರೆ.