ಪುತ್ತೂರು, ಸುಳ್ಯ, ಬೆಳ್ತಂಗಡಿಯನ್ನು ಡಿಜಿಟಲ್ ತಾಲೂಕನ್ನಾಗಿ ಮಾಡುವ ಪ್ರಯತ್ನಕ್ಕೆ ಕೈ ಜೋಡಿಸಲು ಮನವಿ

0

40 ವರ್ಷಗಳ ಹಿಂದೆ ಸುಳ್ಯದಲ್ಲಿ, 39 ವರ್ಷಗಳ ಹಿಂದೆ ಬೆಳ್ತಂಗಡಿಯಲ್ಲಿ, 38 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಸುದ್ದಿ ಬಿಡುಗಡೆ ಪತ್ರಿಕೆ ಪ್ರಾರಂಭಿಸಿ ನಂತರ ಇ ಪೇಪರ್, ಸುದ್ದಿ ವೆಬ್‌ಸೈಟ್, ಸುದ್ದಿ ಚಾನೆಲ್ ಮಾಡುವ ಮೂಲಕ ಸುಳ್ಯ, ಪುತ್ತೂರು ಹಾಗೂ ಬೆಳ್ತಂಗಡಿಯನ್ನು ಸಂಪೂರ್ಣ ಮಾಹಿತಿ ಮತ್ತು ಮಾಧಮ ತಾಲೂಕನ್ನಾಗಿ ಮಾಡಿ ಜಗತ್ತಿಗೆ ಸಂಪರ್ಕ ಮಾಡುವ ಪ್ರಯತ್ನದಲ್ಲಿ ಯಶಸ್ವಿಯಾಗಿರುವ ನಾವು ಇದೀಗ ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿಯ ಗ್ರಾಮ ಗ್ರಾಮಗಳನ್ನು ಡಿಜಿಟಲೈಸ್ ಮಾಡುವ ಮೂಲಕ ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕನ್ನು ಸಂಪೂರ್ಣ ಡಿಜಿಟಲ್ ತಾಲೂಕನ್ನಾಗಿ ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದೇವೆ. ಅದಕ್ಕೆ ಪೂರಕ ವ್ಯವಸ್ಥೆ ಒದಗಿ ಬಂದಿದೆ. ಅದರ ವಿವರಗಳನ್ನು ಮುಂದಿನ ವಾರದಿಂದ ನಿರಂತರ ನೀಡಲಾಗುವುದು. ಡಿಜಿಟಲೈಸ್ ಆಗುವ ಮೂಲಕ ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿಯ ಜನತೆಗೆ, ಉದ್ಯಮಕ್ಕೆ, ಉತ್ಪನ್ನಗಳಿಗೆ ,ಕಸುಬಿಗೆ ಜಾಗತಿಕ ಮಟ್ಟದಲ್ಲಿ ತೆರೆದು ಕೊಳ್ಳುವ, ಕನೆಕ್ಟ್ ಆಗುವ ಅವಕಾಶ ಇರುವುದರಿಂದ ಜನತೆ ಮುಂದೆ ಬಂದು ಸುದ್ದಿ ಅರಿವು ಕೇಂದ್ರದಿಂದ ಸಂಗ್ರಹಿಸಲಾಗುವ ಮಾಹಿತಿಗೆ ಸಂಪೂರ್ಣ ಸಹಕಾರ ನೀಡಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.
ಡಾ.ಯು.ಪಿ. ಶಿವಾನಂದ

LEAVE A REPLY

Please enter your comment!
Please enter your name here