
ಪುತ್ತೂರು:ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಿಂದ ಎಪಿಎಂಸಿ ರಸ್ತೆಯ ಸಿಟಿ ಆಸ್ಪತ್ರೆ ಮುಂಭಾಗಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆಯ ಒಂದು ಭಾಗದಲ್ಲಿ ಚರಂಡಿ ನಿರ್ಮಾಣಕ್ಕೆ ರಸ್ತೆ ಅಂಚಿನ ತನಕ ಮಣ್ಣು ಅಗೆದು ಹಾಕಲಾಗಿದೆ.ಮಣ್ಣು ಅಗೆದು ಹಾಕಿ ಹಲವು ದಿನ ಕಳೆದರೂ ಚರಂಡಿ ಕಾಮಗಾರಿ ಮಾತ್ರ ಇನ್ನೂ ಪ್ರಾರಂಭಿಸಿಲ್ಲ.ರಸ್ತೆ ಅಂಚಿನ ತನಕ ಅಗೆದು ಹಾಕಿರುವುರಿಂದಾಗಿ ವಾಹನ ಸವಾರರು ಭಯದಲ್ಲಿಯೇ ಸಂಚರಿಸುವಂತಾಗಿದೆ.ಪಾದಚಾರಿಗಳಿಗೂ ನಡೆದಾಡಲು ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಚರಂಡಿಯ ಮಣ್ಣು ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಚರಂಡಿ ಬಂದ್ ಆಗಿ ಮಳೆ ನೀರು ರಸ್ತೆಯಲ್ಲಿ ಹರಿದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.ಮಣ್ಣು ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ರಸ್ತೆಯ ಕಾಂಕ್ರೀಟ್ ಅಡಿ ಭಾಗದ ತನಕ ಮಣ್ಣು ಕೊಚ್ಚಿಹೋಗಿದೆ.ಕಾಂಕ್ರಿಟ್ ರಸ್ತೆಯ ಅಡಿ ಭಾಗದಲ್ಲಿ ಬಾಯಿ ತೆರೆದು ನಿಂತಿದ್ದು ಅಧಿಕ ಭಾರದ ಘನ ವಾಹನಗಳು ರಸ್ತೆಯಲ್ಲಿ ಸಂಚರಿಸಿದರೆ ಕಾಂಕ್ರೀಟ್ ರಸ್ತೆ ಕುಸಿದು ಹೋಗುವ ಸಾಧ್ಯತೆಗಳಿವೆ.ಅಲ್ಲದೆ ಮಣ್ಣು ಅಗೆದ ಭಾಗದಲ್ಲಿ ವಿದ್ಯುತ್ ಕಂಬಗಳಿದ್ದು ಅವುಗಳು ಅಪಾಯದ ಸ್ಥಿತಿಯಲಿದ್ದು ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.