ನಿಡ್ಪಳ್ಳಿ; ಇಲ್ಲಿಯ ಕರ್ನಪ್ಪಾಡಿ ನಿವೃತ್ತ ಶಿಕ್ಷಕ ದಿ.ಸಂಕಪ್ಪ ಪೂಜಾರಿಯವರ ಪುತ್ರ ನಿವೃತ್ತ ಶಿಕ್ಷಕ ಕಿನ್ನಿಂಗಾರು ನಿವಾಸಿ ಸಿ.ಸಂಜೀವ ಮಾಸ್ಟರ್ ಚಿಪ್ಲುಕೋಟೆ (77 ವ) ಎಂಬವರು ಅಲ್ಪಕಾಲದ ಅಸೌಖ್ಯದಿಂದ ಪುತ್ತೂರು ಖಾಸಗಿ ಆಸ್ಪತ್ರೆಯೊಂದರಲ್ಲಿ ಅ.14ರಂದು ನಿಧನರಾದರು.
ಇವರು ಹಲವು ವರ್ಷಗಳಿಂದ ನಿಡ್ಪಳ್ಳಿ ಕರ್ನಪ್ಪಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಸೇವಾ ಸಮಿತಿಯ ಉಪಾಧ್ಯಕ್ಷರಾಗಿದ್ದರು. ಮೃತರು ಪತ್ನಿ ಹೇಮಲತಾ, ಪುತ್ರ ನವೀನ್, ಪುತ್ರಿಯರಾದ ನಂದಶ್ರೀ, ನವ್ಯಶ್ರೀ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
