ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಜಿಎಲ್ ಸ್ವರ್ಣ ಹಬ್ಬ

0

ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ಉಡುಗೊರೆಗಳ ಸುರಿಮಳೆ

ಪುತ್ತೂರು: ಬೆಳಕಿನ ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಸಂಪತ್ತಿನ ಅಧಿದೇವತೆ ಧನಕ್ಷ್ಮೀಯನ್ನು ಪೂಜಿಸುವ ಪದ್ಧತಿ ಸನಾತನ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದಲೂ ಪ್ರಚಲಿತದಲ್ಲಿದೆ. ಹೀಗಾಗಿ ‘ಯಾ ದೇವಿ ಸರ್ವಭೂತೇಶು ಲಕ್ಷ್ಮೀ ರೂಪೇಣ ಸಂಸ್ಥಿತಾ’ ಎನ್ನುವ ಮಂತ್ರದಂತೆ ದೀಪಾವಳಿ ಸಂದರ್ಭದಲ್ಲಿ ಆಭರಣಗಳನ್ನು ಖರೀದಿಸುವುದರಿಂದ ಆ ಸ್ವರ್ಣ ಸಂಪುತ್ತು ನಮ್ಮ ಮನೆ-ಮನಗಳು ಬೆಳಗುತ್ತವೆ ಎಂಬುದು ನಂಬಿಕೆ.


ಇದೇ ಕಾರಣಕ್ಕೆ ಪ್ರತಿ ಹಬ್ಬ ಅಥವಾ ವಿಶೇಷ ಆಚರಣೆಗಳ ಸಂದರ್ಭದಲ್ಲಿ ತನ್ನ ಚಿನ್ನದ ಮಳಿಗೆಯಲ್ಲಿ ಬಂಗಾರದಂತಹ ಗ್ರಾಹಕರಿಗೆ ನಾಡಿನ ಹೆಸರಾಂತ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ವಿಶೇಷ ಆಫರ್‌ಗಳನ್ನು ನೀಡುತ್ತಾ ಬರುತ್ತಿದೆ. ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಈ ಚಿನ್ನದ ಮಳಿಗೆಯಲ್ಲಿ ಹೊಸವಿನ್ಯಾಸದ ನೆಕ್ಲೇಸ್‌ಗಳು, ವೆಡ್ಡಿಂಗ್ ಕಲೆಕ್ಷನ್, ಲೈಟ್ ವೈಟ್ ಆಭರಣಗಳು, ಆಧುನಿಕ ಶೈಲಿಯ ಚಿನ್ನದ ತಾಳಿ, ಸಾಂಪ್ರದಾಯಿಕ ಕರಿಮಣಿ ಸರಗಳು, ಚಿನ್ನದ ಅಪರೂಪದ ಕಲಾತ್ಮಕ ಕಿವಿಯೋಲೆಗಳ ಅಪೂರ್ವ ಸಂಗ್ರಹ ಇಲ್ಲಿದೆ.


ಕಳೆದ 67 ವರ್ಷಗಳಿಂದ ಸ್ವರ್ಣೋದ್ಯಮದಲ್ಲಿ ವಿಶ್ವಾಸ, ಪರಿಶುದ್ಧತೆ, ಪರಂಪರೆ, ನವನವೀನ ವಿನ್ಯಾಸ ಹಾಗೂ ಗ್ರಾಹಕರಿಗೆ ನಗುಮೊಗದ ಸೇವೆ ನೀಡುತ್ತಾ ಬರುತ್ತಿರುವ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ಈ ಬಾರಿಯ ದೀಪಾವಳಿ ಹಬ್ಬದ ಪ್ರಯುಕ್ತ ಜಿಎಲ್ ಸ್ವರ್ಣ ಹಬ್ಬ ಆಚರಿಸುತ್ತಿದೆ. ಅದರಂತೆ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದ್ದು, 50 ಸಾವಿರ ರೂ. ಮೇಲ್ಪಟ್ಟ ಖರೀದಿಗೆ ಉಡುಗೊರೆಯ ಕೂಪನ್ ಪಡೆಯಬಹುದಾಗಿದೆ. ಮಾಹಿತಿಗಾಗಿ 8748877360 ಸಂಪರ್ಕಿಸಬಹುದು. ಈ ಆಫರ್‌ಗಳು ಸುಳ್ಯ, ಮೂಡುಬಿದ್ರೆ, ಹಾಸನ ಹಾಗೂ ಕುಶಾಲನಗರದಲ್ಲಿರುವ ತನ್ನ ಮಳಿಗೆಯಲ್ಲಿಯೂ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


916 ಅಥವಾ ಬೇರೆ ಯಾವುದೇ ಶುದ್ಧತೆಯ ಆಭರಣವನ್ನು ವಿನಿಮಯ ಮಾಡಿಕೊಳ್ಳುವಾಗ, ಚಿನ್ನದ ದರ ಏರಿಕೆಯ ಲಾಭವನ್ನು ಪಡೆಯಿರಿ ಹಾಗೂ ಚಿನ್ನದ ಬೆಲೆ ಏರಿಕೆಯ ಪರಿಣಾಮವನ್ನು ಈ ಆಫರ್ ಮೂಲಕ ಕಡಿಮೆ ಮಾಡಿಕೊಳ್ಳಲು ಇದು ಒಂದು ಸುವರ್ಣಾವಕಾಶ. ದಿನದಿಂದ ದಿನಕ್ಕೆ ಏರುವ ಚಿನ್ನದ ದರವನ್ನು ಸರಾಸರಿ ಮಾಡುವ ಸ್ವರ್ಣಧಾರ ಚಿನ್ನದ ಹೂಡಿಕೆ ಯೋಜನೆಯಲ್ಲಿ ಈಗ ಸೇರಿದವರಿಗೆ ಬರುವ ವಿಜಯದಶಮಿ ಅಥವಾ ದೀಪಾವಳಿ ಸಮಯದಲ್ಲಿ ತಮ್ಮ ನೆಚ್ಚಿನ ಆಭರಣಗಳನ್ನು ಖರೀದಿಸಲು ಈ ಯೋಜನೆಯು ಒಂದು ಉತ್ತಮ ಆಯ್ಕೆಯಾಗಿದೆ.

ದೀಪಾವಳಿ ವಿಶೇಷ ರಿಯಾಯಿತಿ
ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ಚಿನ್ನಾಭರಣಗಳ ಮೇಲೆ ಪ್ರತಿ ಗ್ರಾಂ.ಗೆ 400 ರೂ. ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್‌ಗೆ 7 ಸಾವಿರ ರೂ. ವರೆಗೆ ರಿಯಾಯಿತಿ ಹಾಗೂ ಬೆಳ್ಳಿ ಆಭರಣಗಳ ಮೇಲೆ ಪ್ರತಿ ಕೆ.ಜಿ.ಗೆ 3 ಸಾವಿರ ಫ್ಲ್ಯಾಟ್ ಡಿಸ್ಕೌಂಟ್ ನೀಡಲಾಗುತ್ತಿದೆ. ಈ ಆಫರ್ ಅ.18 ರಿಂದ ಅ.22ರ ವರೆಗೆ ಮಾತ್ರ ಇರಲಿದೆ.

LEAVE A REPLY

Please enter your comment!
Please enter your name here