ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶ ವಿರೇಂದ್ರ ಗೌಡ ಅವರು ಕುಟುಂಬ ಸಮೇತರಾಗಿ ಅ.21ರಂದು ಸಂಜೆ ಭೇಟಿ ನೀಡಿದರು.
ದೇವಳಕ್ಕೆ ಭೇಟಿ ನೀಡಿದ ನ್ಯಾಯಾಧೀಶ ವಿರೇಂದ್ರ ಗೌಡ ಅವರು ತುಪ್ಪದ ದೀಪ ಬೆಳಗಿಸಿ, ವಿಶೇಷ ಪ್ರಾರ್ಥನೆ ಮಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ನ್ಯಾಯಾಧೀಶರಿಗೆ ಶಲ್ಯ ಹೊದಿಸಿ ಗೌರವಿಸಿದರು. ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಪ್ರಸಾದ ವಿತರಿಸಿದರು. ಈ ಸಂದರ್ಭ ನ್ಯಾಯವಾದಿ ಮಹೇಶ್ ಕಜೆ ಜೊತೆಗಿದ್ದರು.