ರಾಮಕುಂಜ: ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ರಾಮಕುಂಜ ಮತ್ತು ಹಳೆನೇರೆಂಕಿ ವಲಯ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ರಾಮಕುಂಜ ಗ್ರಾಮದ ಹಲ್ಯಾರ ನಿವಾಸಿ ಅಝೀಝ್‌ರವರ ಮನೆಯಲ್ಲಿ ಅ.25ರಂದು ಬೆಳಿಗ್ಗೆ ನಡೆಯಿತು.

ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ., ಪ್ರಧಾನ ಕಾರ್ಯದರ್ಶಿ ಸತೀಶ್ ನಾಯಕ್ ಭೂಮಿಕಾರವರು ಪಕ್ಷ ಬಲವರ್ಧನೆ ಕುರಿತಂತೆ ಚರ್ಚೆ ನಡೆಸಿದರು.
ವಲಯ ಅಧ್ಯಕ್ಷ ಯತೀಶ್ ಬಾನಡ್ಕ, ಗ್ರಾಮ ಸಮಿತಿ ಅಧ್ಯಕ್ಷ ಕರುಣಾಕರ ಗೌಡ ದೊಡ್ಡಉರ್ಕ, ರಾಮಕುಂಜ ಗ್ರಾ.ಪಂ.ಸದಸ್ಯ ಅಬ್ದುಲ್ ರಹಿಮಾನ್, ಬೂತ್ ಸಮಿತಿ ಅಧ್ಯಕ್ಷರಾದ ಎನ್.ಸಿದ್ದಿಕ್, ಇರ್ಫಾನ್ ಕುಂಡಾಜೆ, ಆದಂ ಹಳೆನೇರೆಂಕಿ, ಫಾರೂಕ್ ಅಮೈ, ಸಂಕಪ್ಪ ಗೌಡ ಹಳೆನೇರೆಂಕಿ, ಕಾಂಗ್ರೆಸ್ ಹಿರಿಯ ಮುಖಂಡರಾದ ದೇವಿಪ್ರಸಾದ್ ನೀರಾಜೆ, ಕೃಷ್ಣಪ್ಪ ಭಂಡಾರಿ, ರಜಾಕ್ ಹಾಜಿ, ವೆಂಕಪ್ಪ ಗೌಡ ಸಂಪ್ಯಾಡಿ, ಜಗದೀಶ್ ಶೆಟ್ಟಿ ಅಂಬಾ, ಅಝೀಝ್ ಹಲ್ಯಾರ, ಗುರುಪ್ರಸಾದ್ ಕುಂಡಾಜೆ, ರತನ್ ಭಂಡಾರಿ, ಜಾಫರ್, ಶಂಶಿರ್, ಶಫೀಕ್, ಲತೀಫ್ ರಾಮಕುಂಜ, ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ. ರನ್ನು ಸನ್ಮಾನಿಸಲಾಯಿತು.