ಪುತ್ತೂರು: ಬುರೂಜ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಮೂಡುಬಿದಿರೆ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆದ ಸೋರಿನ್ ರಿಯು ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ವಿಕಾಸ್ ಕುಮಿಟೆ ವಿಭಾಗದಲ್ಲಿ ಪ್ರಥಮ, ಕಟಾ ತೃತೀಯ. ಯಶ್ವಿತ್, ಮೊಹಮ್ಮದ್ ಸೈಫುದ್ದೀನ್ ಕುಮಿಟೆಯಲ್ಲಿ ಪ್ರಥಮ, ಭವಿಷ್ ಪಿ, ಮೊಹಮ್ಮದ್ ಅರ್ಮನ್, ಮಾನ್ವಿ ಶೆಟ್ಟಿ ಕುಮಿಟೆ ದ್ವಿತೀಯ. ಸ್ಪೂರ್ತಿ ಮತ್ತು ಸ್ಪೂರ್ತಿ ಎಂ. ಜಾದರ್ ಕಟಾ ದ್ವಿತೀಯ, ಕುಮಿಟೆ ತೃತೀಯ. ಆತ್ಮಿ ಶೆಟ್ಟಿ, ಮೊಹಮ್ಮದ್ ರಫಾನ್, ಮೊಹಮ್ಮದ್ ಹುಸೈನ್, ಧೃತಿ ಮುಹಮ್ಮದ್ ರುವೈಫ್, ಸಹನಾ ಶಂಶುನ್ ,ಅಮನ್, ಮೊಹಮ್ಮದ್ ಸಾಬಿಕ್, ಹೇಮಂತ್ ಕುಮಿಟೆಯಲ್ಲಿ ತೃತೀಯ, ಮೊಹಮ್ಮದ್ ಶಹಾನ್ ಕಟಾ ದ್ವಿತೀಯ,ಅಫ್ರಾ ರಿಂಷಾ ಕುಮಿಟೆ ಮತ್ತು ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
