ಪುತ್ತೂರು: ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ವಲಯ ಮಟ್ಟದ ಕ್ರೀಡಾ ಸಮಿತಿ ವತಿಯಿಂದ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪುತ್ತೂರು ವಲಯ ಮಟ್ಟದ ಕ್ರೀಡಾಕೂಟದ 17ರ ವಯೋಮಾನದ ವಿಭಾಗದಲ್ಲಿ 9ನೇ ತರಗತಿಯ ಲಾವಣ್ಯಾ ನಾಯಕ್ ಮುಂಡೂರಿನ ಲವಕುಮಾರ್ ಮತ್ತು ನಳಿನಾಕ್ಷಿ ನಾಯಕ್ ರವರ ಪುತ್ರಿ ಉದ್ದಜಿಗಿತದಲ್ಲಿ ಪ್ರಥಮ ಸ್ಥಾನ, ವೈಷ್ಣವಿ ಬನ್ನೂರಿನ ಯಶವಂತ ಗೌಡ ಮತ್ತು ಉಮಾವತಿ ಯವರ ಪುತ್ರಿ 800 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಹಾಗೂ 10ನೇ ತರಗತಿ ಕುಶಿತ್ ಪಿ ರೈ ಒಳಮೊಗ್ರುವಿನ ರಾಧಾಕೃಷ್ಣ ರೈ ಮತ್ತು ಸುನೀತಾ ರೈವರ ಪುತ್ರ ಈಟಿ ಎಸೆತದಲ್ಲಿ ತೃತೀಯ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಅಜಿತ್ ರವರು ತರಬೇತಿ ನೀಡಿರುತ್ತಾರೆ ಎಂದು ಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಹಾಗೂ ಪ್ರಭಾರ ಮುಖ್ಯೋಪಾಧ್ಯಾಯಿನಿಯಾದ ಗಾಯತ್ರಿ ಎಸ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
