ಅಜ್ಜಿಕಲ್ಲು ಒಕ್ಕೂಟದ ತ್ರೈಮಾಸಿಕ ಸಭೆ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಣಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಇದರ ಬೆಟ್ಟಂಪಾಡಿ ವಲಯದ ಅಜ್ಜಿಕಲ್ಲು ಒಕ್ಕೂಟದ ತ್ರೈಮಾಸಿಕ ಸಭೆಯು ಒಕ್ಕೂಟದ ಅಧ್ಯಕ್ಷೆ ಸರೋಜಾರವರು ಅಧ್ಯಕ್ಷತೆಯಲ್ಲಿ ಅಜ್ಜಿಕಲ್ಲು ಶಾಲಾ ಸಭಾಂಗಣದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಇಂಚರ ಪೌಂಡೇಶನ್ ಇದರ ಕೌನ್ಸಿಲರ್ ಸೌಮ್ಯರವರು ಮಾನಸಿಕ ಆರೋಗ್ಯ, ಒತ್ತಡ ನಿವಾರಣೆಯ ಬಗ್ಗೆ ಮಾಹಿತಿ ನೀಡಿದರು. ದೇಹದ ಆರೋಗ್ಯದೊಂದಿಗೆ ಮನಸ್ಸಿನ ಆರೋಗ್ಯವು ಮುಖ್ಯವಾಗಿದ್ದು ನನ್ನಿಂದ ಸಾಧ್ಯ ಎಂದು ಭಾವಿಸಿದರೆ ಎಲ್ಲವೂ ಆಗುತ್ತದೆ ಅಸಾಧ್ಯ ಎಂದರೆ ಯಾವದೂ ಸಾಧ್ಯವಾಗುವುದಿಲ್ಲ ಇದನ್ನು ನಾವು ತಿಳಿದುಕೊಳ್ಳಬೇಕು ಎಂದರು.

ಮಕ್ಕಳಿಗೆ ಹದಿ ಹರೆಯದವರಿಗೆ ಮೊಬೈಲ್ ಕೊಡುವುದರಿಂದ ಮಾನಸಿಕ ಆರೋಗ್ಯ ಕೆಡುತ್ತದೆ ಎಂಬ ಮಾತನ್ನು ಈ ಸಂದರ್ಭದಲ್ಲಿ ತಿಳಿಸಿದರು. ವಲಯ ಮೇಲ್ವಿಚಾರಕರಾದ ಸೋಹಾನ್ ಜಿ.ರವರು ಯೋಜನೆಯ ಸೌಲಭ್ಯಗಳೊಂದಾದ ಸುಜ್ಞಾನ ನಿಧಿ, ವಿದ್ಯಾರ್ಥಿ ವೇತನ ಬಗ್ಗೆ ಮಾಹಿತಿ ನೀಡಿದರು. ವೃತ್ತಿಪರ ಶಿಕ್ಷಣ ಪಡೆಯುತ್ತಿರುವವರು ಅರ್ಜಿ ಸಲ್ಲಿಸುವಂತೆ ತಿಳಿಸಿದರು. ಸಂಘದ ಸದಸ್ಯರಿಗೆ ಪಾನ್ ಕಾರ್ಡ್ ಕಡ್ಡಾಯವಾಗಿದ್ದು ಪ್ರತಿಯೊಬ್ಬರು ಮಾಡಿಸಿಕೊಳ್ಳುವಂತೆ ತಿಳಿಸಿ ಯೋಜನೆಯ ನಿಯಮಗಳನ್ನು ಪಾಲಿಸುವಂತೆ ತಿಳಿಸಿ, ಸಾಲದ ಕಂತು ಬಾಕಿ ಮಾಡದೆ ಎಲ್ಲಾ ಸಂದರ್ಭಗಳಲ್ಲೂ ಅಜ್ಜಿಕಲ್ಲು ಒಕ್ಕೂಟವು ಯೋಜನೆಯೊಂದಿಗೆ ಸ್ಥಿರವಾಗಿ ನಿಂತಿದ್ದು ಮುಂದಿನ ದಿನಗಳಲ್ಲೂ ಇದೇ ರೀತಿ ಸಹಕಾರ ಇರಲಿ ಎಂದು ಹೇಳಿ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷೆ ಸರೋಜಾರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಸೇವಾ ಪ್ರತಿನಿಧಿ ತ್ರಿವೇಣಿ ಪಲ್ಲತ್ತಾರುರವರು ಸಂಘದ ಸದಸ್ಯರಿಗೆ ವಿವಿಧ ಮಾಹಿತಿಯೊಂದಿಗೆ ನಿರಂತರ ಪತ್ರಿಕೆಗೆ ಚಂದಾ ಮಾಡಿಸುವ ಬಗ್ಗೆ, ನಿಯಾಮಾನುಸಾರ ಸಭೆ ನಡೆಸುವಂತೆ, ಎಲ್ಲಾ ಸದಸ್ಯರುಗಳು ಸಭೆಗೆ ಹಾಜರಾಗುವ ಬಗ್ಗೆ ಮಾಹಿತಿ ನೀಡಿದರು. ಉಷಾ ಕೃಷ್ಣಪ್ರಸಾದ್ ಅಜ್ಜಿಕಲ್ಲುರವರು ವರದಿ ವಾಚಿಸಿದರು. ಮೋಹನ್‌ಚಂದ್ರ ಅಜ್ಜಿಕಲ್ಲು ಸ್ವಾಗತಿಸಿದರು.ಸುನಿತಾ ಯಾನೆ ವೇದಾವತಿ ವಂದಿಸಿದರು.

LEAVE A REPLY

Please enter your comment!
Please enter your name here