ಪುತ್ತೂರು: ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಕೌಂಟೆಂಟ್ ವತ್ಸಲಾ ಎಸ್ ಅವರು ಅ.31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ಕಳೆದ 38 ವರ್ಷಗಳಿಂದ ಸಂಘದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿರುವ ವತ್ಸಲಾ ಎಸ್ ಅವರು ಪ್ರಾಮಾಣಿಕ ಸೇವೆಯ ಮೂಲಕ ಸಂಘದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಪ್ರಸ್ತುತ ಅಕೌಂಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಪತಿ ಆನಂದ ಬಂಗೇರ ಬಲ್ನಾಡು ಹಾಗೂ ಪುತ್ರಿ ಪೂಜಾಶ್ರೀ ಜೊತೆ ಮುಂಡೂರಿನಲ್ಲಿ ವಾಸವಾಗಿದ್ದಾರೆ.
