ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ ಆಚರಣೆಯನ್ನು ನಡೆಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಶ್ರೀ ಪ್ರಕಾಶ್ ಬಿ ಮಾತನಾಡಿ, ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರುತ್ತಾ, ನಾಡ ಗೀತೆ ಇಡೀ ಕರ್ನಾಟಕದ ಇತಿಹಾಸ ಮತ್ತು ವೈಭವವನ್ನು ಧ್ವನಿಸುತ್ತದೆ.

ನಾಡಗೀತೆ ಜನರಲ್ಲಿ ರಾಜ್ಯದ ಬಗ್ಗೆ ಪ್ರೀತಿ, ಅಭಿಮಾನ ಮತ್ತು ಸ್ಪೂರ್ತಿಯನ್ನು ಮೂಡಿಸುತ್ತದೆ. ಕರ್ನಾಟಕ ರಚನೆಗೆ ಹಲವಾರು ಶ್ರಮಿಸಿದ್ದಾರೆ. ತಾಯಿ ಭುವನೇಶ್ವರಿಯನ್ನು ಆರಾಧಿಸಿ ಜೀವನಶೈಲಿಯನ್ನು ಒಂದುಗೂಡಿಸಿದರು.
ಕನ್ನಡ ಭಾಷೆಯ ಪರಂಪರೆಯನ್ನು ನಾವು ತಿಳಿದುಕೊಳ್ಳಲೇಬೇಕು. ಕನ್ನಡಿಗರಾದ ನಮಗೆ ಕನ್ನಡದ ಮೇಲೆ ಗೌರವ ಇರಬೇಕು. ಕನ್ನಡ ಭಾಷೆ ಇಂದಿನ ದಿನಗಳಲ್ಲಿ ಕಲುಷಿತಗೊಳ್ಳುತಿದೆ. ಆದುದರಿಂದ ಅದನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಕನ್ನಡವನ್ನು ಸ್ಪಷ್ಟವಾಗಿ ಮಾತಾಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಕನ್ನಡವನ್ನು ಉಳಿಸಿ, ಬೆಳೆಸುವ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಕನ್ನಡವು ಕೇವಲ ಒಂದು ಭಾಷೆಯಲ್ಲ, ಅದು ಕನ್ನಡಿಗರ ಅಸ್ಮಿತೆ. ನಾವು ಮಾತಾಡುವ ಭಾಷೆ ನಮ್ಮ ವ್ಯಕಿತ್ವ ವನ್ನು ತಿಳಿಸುತ್ತದೆ. ಹಾಗೂ ರೂಪಿಸುತ್ತದೆ. ಕರ್ನಾಟಕ ವಿವಿಧ ಕ್ಷೇತ್ರದಲ್ಲಿ ಮುಂದೆ ಇದೆ. ಕರ್ನಾಟಕದ ಸಾಧನೆ ವಿಶೇಷ ವಾಗಿದೆ. ಕರ್ನಾಟಕವು ವಿವಿಧ ಪರಂಪರೆ ಆಚರಣೆಯನ್ನು ಒಳಗೊಂಡಿದೆ. ಕರ್ನಾಟಕ ಹಾಗೂ ಕನ್ನಡದ ವೈಭವ ವಿಶೇಷವಾದುದು ಎಂದು ಕನ್ನಡದ ಮಹತ್ವವನ್ನು ತಿಳಿಸಿದರು.
ವೇದಿಕೆಯಲ್ಲಿ ಕನ್ನಡ ಸಂಘದ ನಿರ್ದೇಶಕರಾದ ಉಷಾ ಎ ಹಾಗೂ ಉಪನ್ಯಾಸಕರಾದ ರಾಮ್ ನಾಯ್ಕ್ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಕನ್ನಡದ ಗೀತೆಗಳನ್ನು ಹಾಡಿದರು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿಗಳಾದ ಸಾನು ಸಂತೋಷ್ ಸ್ವಾಗತಿಸಿ, ಹಸ್ತ ವಂದಿಸಿ, ತನ್ವಿ ಕಾರ್ಯಕ್ರಮವನ್ನು ನಿರೂಪಿಸಿದರು.