ಪುತ್ತೂರು: ಕೆಲ ತಿಂಗಳ ಹಿಂದೆ ಪೆರ್ನೆಯ ಮನೆಯೊಂದರ ಕೊಟ್ಟಿಗೆಯಲ್ಲಿ ಕಟ್ಟಿದ್ದ ದನವನ್ನು ಕದ್ದು, ಬಳಿಕ ಹತ್ಯೆಗೈದ ಪ್ರಕರಣದಲ್ಲಿ ದನ ಕಳೆದುಕೊಂಡ ಮನೆ ಮಾಲಕಿ ಸುಮತಿಯವರಿಗೆ ಶಾಸಕ ಅಶೋಕ್ ರೈ ಅವರು ದನ ಖರೀದಿಸಲು ಹತ್ತು ಸಾವಿರ ರೂ. ನೆರವು ನೀಡಿದರು.
ಪೆರ್ನೆ ಗ್ರಾಮದ ಕೊಡಂಬು ಎಂಬಲ್ಲಿ ಈ ಘಟನೆ ನಡೆದಿತ್ತು. ದನವನ್ನು ಕದ್ದ ದುಷ್ಕರ್ಮಿಗಳು ಮನೆ ಪಕ್ಕದ ತೋಟದಲ್ಲೇ ಹತ್ಯೆಗೈದಿದ್ದರು. ಘಟನೆ ನಡೆದ ಸುಮತಿಯವರ ಮನೆಗೆ ಶಾಸಕರು ಭೇಟಿ ನೀಡಿ ಸಾಂತ್ವನ ಹೇಳಿದ್ದರು. ದನ ಖರೀದಿಸಲು ಆರ್ಥಿಕ ನೆರವು ನೀಡುವುದಾಗಿಯೂ ಭರವಸೆ ನೀಡಿದ್ದರು.
ಪುತ್ತೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಉಪಸ್ಥಿತರಿದ್ದರು.
