ನ.25-26 : ಪಂಚಮಿ,ಚಂಪಾ ಷಷ್ಠೀ ಮಹೋತ್ಸವ, ಜಾತ್ರೋತ್ಸವ
ಪುತ್ತೂರು : ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಕಾರಣಿಕ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.25-26ರಂದು ನಡೆಯಲಿರುವ ಪಂಚಮಿ,ಚಂಪಾ ಷಷ್ಠಿ ಮಹೋತ್ಸವ ,ಜಾತ್ರೋತ್ಸವದಪೂರ್ವಭಾವಿಯಾಗಿ ಗೊನೆ ಮುಹೂರ್ತ ನ.18ರಂದು ನಡೆಯಿತು.

ದೇವಸ್ಥಾನದ ಅರ್ಚಕರಾದ ಪ್ರವೀಣ್ ಶಂಕರ್ ಅವರು ವಿಧಿ ವಿಧಾನ ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸಂತೋಷ್ ಕುಮಾರ್ ರೈ ನಳೀಲು, ಮೊಕ್ತೇಸರರಾದ ಮೋಹನ್ ದಾಸ್ ರೈ ನಳೀಲು, ಅರುಣ್ ಕುಮಾರ್ ರೈ ನಳೀಲು, ಸತೀಶ್ ರೈ ನಳೀಲು, ಪ್ರವೀಣ್ ಕುಮಾರ್ ರೈ ನಳೀಲು,ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಸುರೇಶ್ ಚಂದ್ರ ರೈ ನಳೀಲು, ಜಾತ್ರೋತ್ಸವ ಸಮಿತಿ ಉಪಾಧ್ಯಕ್ಷ ಸುಬ್ರಾಯ ಗೌಡ ಪಾಲ್ತಾಡಿ,ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ,ಸಮಿತಿ ಸದಸ್ಯರಾದ ವಿಠಲ ಶೆಟ್ಟಿ ಪಾಲ್ತಾಡಿ ಗುತ್ತಿನಮನೆ, ಜತ್ತಪ್ಪ ಪೂಜಾರಿ,ವಿಶ್ವನಾಥ ರೈ ನಡುಕೂಟೇಲು,ಜಯರಾಮ ರೈ ಬರೆ,ಸೃಜನ್ ಆಚಾರ್ಯ ನಳೀಲು, ಬಾಲಕೃಷ್ಣ ಗೌಡ ಪೂಜಾರಿಮನೆ,ಶಿಲ್ಪಾ ಪ್ರವೀಣ್ ಶಂಕರ್, ಲೀಲಾ ಮಾಧವ,ಸುಬ್ಬಿ,ಸತ್ಯ,ದೈವಗಳ ಪರಿಚಾರಕರಾದ ಕೇಪು ಗೌಡ,ಹರೀಶ್ ಮಡಿವಾಳ,ಕೋಟಿ ಪರವ ಮಾಡಾವು,ತಿಮ್ಮಪ್ಪ ಪರವ ಮಾಡಾವು ಮೊದಲಾದವರಿದ್ದರು.
ನ.25-26 : ಪಂಚಮಿ, ಚಂಪಾ ಷಷ್ಠೀ ಮಹೋತ್ಸವ, ಜಾತ್ರೋತ್ಸವ
ಉತ್ಸವದ ಅಂಗವಾಗಿ ನ.24ರಂದು ಸಂಜೆ ಊರವರಿಂದ ಹಸಿರು ಹೊರೆಕಾಣಿಕೆ,ಭಜನಾ ಕಾರ್ಯಕ್ರಮ ನಡೆಯಲಿದೆ. ನ.25ರಂದು ಬೆಳಿಗ್ಗೆ 9 ರಿಂದ ಭಜನಾ ಕಾರ್ಯಕ್ರಮ,ಬೆಳಿಗ್ಗೆ 9.30ರಿಂದ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ,ನವಕ ಕಲಶಪೂಜೆ,ಆಶ್ಲೇಷ ಬಲಿ,ಶ್ರೀ ಸುಬ್ರಹ್ಮಣ್ಯ ದೇವರಿಗೆ ಪಂಚಾಮೃತ ಅಭಿಷೇಕ,ಪಂಚ ಗವ್ಯಾಭಿಷೇಕ,ನವಕ ಕಲಶಾಭಿಷೇಕ,ದೈವಗಳಿಗೆ ತಂಬಿಲ,ನಾಗದೇವರಿಗೆ ಪಂಚಾಮೃತ ಅಭಿಷೇಕ,ತಂಬಿಲ ಸೇವೆ ನಡೆದು ಮಧ್ಯಾಹ್ನ ಮಹಾಪೂಜೆ,ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ರಿಂದ ಅಭಿನವ ಯಕ್ಷಕಲಾ ಕೇಂದ್ರ ಮಾಡಾವು ಇದರ ವಿದ್ಯಾರ್ಥಿಗಳಿಂದ ವಾಸುದೇವ ರೈ ಬೆಳ್ಳಾರೆ ಇವರ ನೇತೃತ್ವದಲ್ಲಿ ವೀರ ಅಭಿಮನ್ಯು ಯಕ್ಷಗಾನ ನಡೆಯಲಿದೆ. ಬಳಿಕ ದೈವಗಳ ಭಂಡಾರ ತೆಗೆದು ಶ್ರೀ ದೇವರಿಗೆ ರಂಗಪೂಜೆ,ಶ್ರೀ ದೇವರ ಬಲಿಹೊರಟು ಶ್ರೀ ಭೂತಬಲಿ ಮಹೋತ್ಸವ, ವಸಂತ ಕಟ್ಟೆ ಪೂಜೆ ನಡೆಯಲಿದೆ. ರಾತ್ರಿ ಅಮ್ಮ ಕಲಾವಿದರು ಕುಡ್ಲ ಇವರಿಂದ ಆನ್ ಮಗೆ ತುಳು ನಾಟಕ ಪ್ರದರ್ಶನ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ನ.26ರಂದು ಬೆಳಿಗ್ಗೆ ಭಜನಾ ಕಾರ್ಯಕ್ರಮ, ಬೆಳಿಗ್ಗೆ9 ರಿಂದ ದೇವರ ಬಲಿ ಹೊರಟು ಚಂಪಾ ಷಷ್ಠೀ ಮಹೋತ್ಸವ,ದರ್ಶನ ಬಲಿ,ಬಟ್ಟಲು ಕಾಣಿಕೆ, ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ವ್ಯಾಘ್ರ ಚಾಮುಂಡಿ ನೇಮೋತ್ಸವ, ರುದ್ರ ಚಾಮುಂಡಿ ನೇಮೋತ್ಸವ ನಡೆಯಲಿದೆ.