ಪುತ್ತೂರು, ಕಡಬದಲ್ಲಿ 13 ಹೆಕ್ಟೇರ್‌ಗೂ ಅಧಿಕ ತೋಟಗಾರಿಕಾ ಬೆಳೆಹಾನಿ

0

124 ರೈತರಿಂದ ಅರ್ಜಿ, ಇಲಾಖೆಯಿಂದ ಪರಿಹಾರಕ್ಕೆ ಶಿಫಾರಸ್ಸು

ಪುತ್ತೂರು:ಈ ಬಾರಿಯ ಮುಂಗಾರು ಪೂರ್ವ ಹಾಗೂ ಬಳಿಕದ ಮಳೆಯಿಂದ ತೋಟಗಾರಿಕಾ ಬೆಳೆಗಳ ಮೇಲೆ ಪರಿಣಾಮ ಬೀರಿ ರೈತರಿಗೆ ನಷ್ಟವುಂಟಾಗಿದೆ.ಕಳೆದ ಮೇ ತಿಂಗಳಿನಿಂದ ಅಕ್ಟೋಬರ್ ಅಂತ್ಯದವರೆಗೆ ಸುರಿದ ಮಳೆಯಿಂದ ಪುತ್ತೂರು ಹಾಗೂ ಕಡಬ ತಾಲೂಕು ಸೇರಿದಂತೆ ದ.ಕ.ಜಿಲ್ಲೆಯಲ್ಲಿ 33.050 ಹೆಕ್ಟೇರ್‌ನಷ್ಟು ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿದೆ ಎಂದು ಇಲಾಖಾ ಮಾಹಿತಿ ಲಭ್ಯವಾಗಿದೆ.


ಪುತ್ತೂರು ತಾಲೂಕಿನಲ್ಲಿ 4.8724 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ.54 ಮದಿ ರೈತರ ಬೆಳೆಗಳು ಹಾನಿಯಾಗಿದ್ದು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.ಕಡಬ ತಾಲೂಕಿನಲ್ಲಿ 9.344 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ.ಇದರಲ್ಲಿ 70 ಮಂದಿ ರೈತರ ಬೆಳೆಗಳು ಹಾನಿಯಾಗಿದ್ದು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.ಹಾನಿಯಾದ ಪ್ರದೇಶಗಳಿಗೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ.ಕಂದಾಯ ಇಲಾಖೆಯಿಂದ ಹಾನಿಯಾದ ಪ್ರದೇಶದಲ್ಲಿ ಸ್ಥಳ ಮಹಜರು ನಡೆಸಲಾಗಿದೆ.


ಪುತ್ತೂರು ತಾಲೂಕಿನಲ್ಲಿ ಬೆಳೆ ಹಾನಿಗೆ 1,49,258 ರೂ. ಹಾಗೂ ಕಡಬ ತಾಲೂಕಿನಲ್ಲಿ 2,48,190 ರೂ. ಪರಿಹಾರ ದೊರಕಿಸಲು ಇಲಾಖೆಯಿಂದ ಸರಕಾರಕ್ಕೆ ಶಿ-ರಸ್ಸು ಮಾಡಲಾಗಿದೆ.

ಈ ತಿಂಗಳ ಕೊನೆಯಲ್ಲಿ ಬೆಳೆ ವಿಮಾ ಪರಿಹಾರ ಮೊತ್ತ
ಹವಾಮಾನ ಬದಲಾವಣೆಯಿಂದ ಆದ ಬೆಳೆನಷ್ಟಕ್ಕೆ ಸರಕಾರದಿಂದ ದೊರೆಯುವ ಬೆಳೆ ವಿಮಾ ಪರಿಹಾರ ಮೊತ್ತ ಪಾವತಿ ಈ ಬಾರಿ ವಿಳಂಬವಾಗುತ್ತಿದ್ದು ನವೆಂಬರ್ ತಿಂಗಳ ಕೊನೆಯಲ್ಲಿ ರೈತರಿಗೆ ಸಿಗುವ ಭರವಸೆ ಇದೆ.ಪ್ರತೀ ವರ್ಷ ನವೆಂಬರ್ 15ರ ಮೊದಲೇ ರೈತರ ಖಾತೆಗೆ ಜಮೆಯಾಗುತ್ತಿದ್ದ ವಿಮಾ ಪರಿಹಾರ ಮೊತ್ತ ಈ ಸಾಲಿನಲ್ಲಿ ಸುರಿದ ವಿಪರೀತ ಮಳೆಯ ಪರಿಣಾಮ ಹಾಗೂ ವಿಮಾ ಕಂತು ಕಟ್ಟಲು ಅವಽ ವಿಸ್ತರಣೆಯಾಗಿರುವುದು ಪರಿಹಾರ ಮೊತ್ತ ಜಮೆ ವಿಳಂಬವಾಗಲು ಕಾರಣವಾಗಿದೆ ಎಂದು ತೋಟಗಾರಿಕಾ ಇಲಾಖಾಽಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here