ಪುತ್ತೂರು: ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಷಷ್ಠಿ ಪ್ರಯುಕ್ತ ನಾಗತಂಬಿಲ, ಕಾರ್ತಿಕಪೂಜೆ , ಪವಮಾನ ಕಲಶಾಭಿಷೇಕ ಹಾಗೂ ಜ.4 ಮತ್ತು 5ರಂದು ನಡೆಯುವ ಕುರಿಯ ಜಾತ್ರೆ, ಪ್ರತಿಷ್ಠಾ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಶ್ರೀ ಕ್ಷೇತ್ರದಲ್ಲಿ ನಡೆಯಿತು. ಪವಮಾನ ಕಲಶಾಭಿಷೇಕ ಹಾಗೂ ಅನ್ನಸಂತರ್ಪಣೆಯು ವಿಶ್ವನಾಥ್ ಪೂಜಾರಿ ಮತ್ತು ಮಕ್ಕಳು ವಿಶ್ವರಂಜಿನಿ ಮಾಪಲ ಇವರ ಸೇವಾರ್ಥವಾಗಿ ನಡೆಯಿತು. ಈ ಸಂದರ್ಭದಲ್ಲಿ ಅರ್ಚಕರು , ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷರು, ಅಧ್ಯಕ್ಷರು, ಸದಸ್ಯರು, ಪ್ರಧಾನ ಸಂಚಾಲಕರುಗಳು, ಗೌರವಸಲಹೆಗಾರರು , ವಿವಿಧ ಸಮಿತಿಯ ಸಂಚಾಲಕರುಗಳು, ಉಪಾಧ್ಯಕ್ಷರುಗಳು ಹಾಗೂ ಸದಸ್ಯರು, ಮತ್ತು ಊರಿನ ಭಗವದ್ಭಕ್ತರು ಉಪಸ್ಥಿತರಿದ್ದರು.
