ಪುತ್ತೂರು: ಬೆಳಕು ಸಂಸ್ಥೆಯ ವತಿಯಿಂದ ಸಾಹಿತ್ಯ – ಸಾಂಸ್ಕೃತಿಕ, ಸಂಗೀತ , ಕವಿಗೋಷ್ಠಿ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ರಾಷ್ಟ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನ.30ರಂದು ಅಕ್ಕಮಹಾದೇವಿ ಸಭಾಂಗಣ ಚಾಮರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ ಆವರಣ ಬೆಂಗಳೂರು ಇಲ್ಲಿ ನಡೆಯಲಿದೆ.
121ನೇ ಕಾರ್ಯಕ್ರಮ ರಾಷ್ಟ್ರಮಟ್ಟದ ಬೆಳಕು ಸಂಭ್ರಮದಲ್ಲಿ ಗಿರೀಶ್ ಪೆರಿಯಡ್ಕ ಅವರು ರಾಷ್ಟ್ರ ಮಟ್ಟದ ದ. ರಾ ಬೇಂದ್ರೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಸಂಸ್ಥೆ ವತಿಯಿಂದ ನಡೆದ ಕವನ ರಚನೆ ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆಗೊಂಡಿದ್ದು, ಹಾಗೂ ಕವಿತೆ ʼಬೆಳಕಿನ ಬುತ್ತಿʼ ಸಂಪಾದಿತ ಕವನ ಸಂಕಲನದಲ್ಲಿ ಆಯ್ಕೆಯಾದ ಕಾರಣ ಈ ಪ್ರಶಸ್ತಿ ಲಭಿಸಿದೆ.
