ಉಪ್ಪಿನಂಗಡಿ: ರಾ ಹೆ 75 ರ ಶಿರಾಡಿ ಘಾಟ್ ಬಳಿಯ ಕೆಂಪುಹೊಳೆ ಎಂಬಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಗೂಡ್ಸ್ ಟೆಂಪೊ ವೊಂದು ಪಲ್ಟಿ ಹೊಡೆದು ಹೆದ್ದ್ದಾರಿಯ ಇನ್ನೊಂದು ಪಾರ್ಶ್ವದಲ್ಲಿ ಬರುತ್ತಿದ್ದ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ಸಂಭವಿಸಿದೆ.
ಘಟನೆಯಿಂದ ಟೆಂಪೊ ಚಾಲಕ ಗಾಯಗೊಂಡಿದ್ದು, ಬಸ್ಸಿನ ಮುಂಭಾಗ ಜಖಂ ಗೊಂಡಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
