ಕಾವು: ಮಂಗಳೂರಿನ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಇತ್ತೀಚೆಗೆ ಜರುಗಿದ ರಾಜ್ಯಮಟ್ಟದ 10-11ರ ವಯೋಮಾನದ ದೋಜೊ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯ ಕಟಾ ವಿಭಾಗದಲ್ಲಿ ಚಿಂತನಕೃಷ್ಣ ಪಟ್ಟಾಜೆಯವರು ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿರುತ್ತಾರೆ.

ಮಾಡ್ನೂರು ಗ್ರಾಮದ ಕಾವು ಪಟ್ಟಾಜೆ ನಿವಾಸಿ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿ ಮತ್ತು ಅಶ್ವಿನಿಮೂರ್ತಿ ದಂಪತಿಗಳ ಪುತ್ರನಾಗಿರುವ ಚಿಂತನಕೃಷ್ಣರವರು ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಕ್ಯೋಶಿ ಯಂ. ಸುರೇಶರವರಿಂದ ತರಬೇತಿ ಪಡೆದಿರುತ್ತಾರೆ.