ಡಿ.23- ಡಿ.25: ಧರ್ಮನಗರ ಮಲರಾಯ ಜೇರದಲ್ಲಿ ಶ್ರೀ ದೈವಗಳ ಸಾನ್ನಿಧ್ಯವೃದ್ಧಿ ವಾರ್ಷಿಕ ಮಹಾಪರ್ವ ಮತ್ತು ನೇಮೋತ್ಸವ

0

ಪತ್ರಿಕಾಗೋಷ್ಠಿಯಲ್ಲಿ ಸೇವಾ ಸಮಿತಿಯ ಕಾರ್ಯಾಧ್ಯಕ್ಷ ವಸಂತ ಕುಮಾರ್‌ ಅಮೈ

ವಿಟ್ಲ: ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನ (ರಿ.) ಮಲರಾಯ ಜೇರದಲ್ಲಿ ಡಿ. 23, 24, 25 ರಂದು ಬ್ರಹ್ಮಶ್ರೀ ವೇದಮೂರ್ತಿ ಪದ್ಮನಾಭ ತಂತ್ರಿಗಳು ಆಲಂಪಾಡಿ- ನೀಲೇಶ್ವರ ಇವರ ದಿವ್ಯಹಸ್ತದಿಂದ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ಸಾನ್ನಿಧ್ಯವೃದ್ಧಿ ವಾರ್ಷಿಕ ಮಹಾಪರ್ವ ಮತ್ತು ನೇಮೊತ್ಸವ ನಡೆಯಲಿದೆ ಎಂದು ಸೇವಾ ಸಮಿತಿಯ ಕಾರ್ಯಾಧ್ಯಕ್ಷ ವಸಂತ ಕುಮಾರ್‌ ಅಮೈರವರು ಹೇಳಿದರು.

ಅವರು ವಿಟ್ಲದ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಡಿ. 17ರಂದು ಗೊನೆ ಮುಹೂರ್ತ ನಡೆಯಲಿದೆ. ಡಿ. 21 ರಂದು ಬೆಳಗ್ಗೆ ಉರಿಮಜಲು, ಪಾಂಡೇಲು, ಕುಂಡಡ್ಕ ದೇವಸ್ಥಾನ, ಬೇರಿಕೆ, ಕುಂಡಡ್ಕ ಶೆಡ್ಡು, ಮರುವಾಳ, ಅಮೈ ಮೇಲಿನ ಭಾಗ, ಅರ್ಕೆಚ್ಚಾರು, ರಜತಾದ್ರಿ ಮುಂಡ್ರಬೈಲು, ಸೂರ್‍ಯ, ಕೋಲ್ಪೆ ದೇವಸ್ಥಾನ, ಮಿತ್ತೂರು, ಕಬಕ, ಅಶೋಕ ನಗರ, ಉರಿಮಜಲು ಧರ್ಮನಗರದ ಮೂಲಕ ಹೊರಕಾಣಿಕೆ ಸಾಗಿ ಬರಲಿದೆ.
ಡಿ. 23 ರಂದು ಬೆಳಗ್ಗೆ 8 ಗಂಟೆಗೆ ಗಣಪತಿ ಹವನ, 9.30 ಕ್ಕೆ ಪುಣ್ಯಾಹ, ಮಹಾಪರ್ವ ಸೇವೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಡಿ. 24ರಂದು ಮಧ್ಯಾಹ್ನ 2.30 ಕ್ಕೆ ಡೆಚ್ಚಾರಿನಲ್ಲಿ ದೈವಗಳಿಗೆ ತಂಬಿಲ ಸೇವೆ ನಡೆದ ಬಳಿಕ ಭಂಢಾರ ಹೊರಡುವುದು. ಅಪರಾಹ್ನ 3.30 ಕ್ಕೆ ಜೈನರಕೋಡಿಯಲ್ಲಿ ತಂಬಿಲ ಸೇವೆ, ಪಟ್ಟಿ ವಿತರಣೆ, 5.30 ಕ್ಕೆ ಕುಳಗುತ್ತುವಿನಲ್ಲಿ ದೈವಗಳಿಗೆ ತಂಬಿಲ ಸೇವೆ ನಡೆದು ವೈದ್ಯನಾಥ ದೈವದ ಭಂಡಾರ ಹೊರಡಲಿದೆ. ಸಂಜೆ 6.30 ಕ್ಕೆ ಉರಿಮಜಲು ನಡುಸಾದಿಯಲ್ಲಿ ದೈವಗಳ ಸಮಾಗಮ ನುಡಿ, ಅನಂತರ ಭಂಡಾರ ಜೇರಕ್ಕೆ ತೆರಳುವುದು. ರಾತ್ರಿ 7.30 ಕ್ಕೆ ಕಲಾತಪಸ್ವಿ ಸಾಂಸ್ಕೃತಿಕ ಕಲಾತಂಡ ಧರ್ಮನಗರ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9.30ಕ್ಕೆ ವೈದ್ಯನಾಥ ದೈವದ ನೇಮೋತ್ಸವ, ದೈವದ ಕೆರೆ ಆಯನ, ಸುಡುಮದ್ದು ಪ್ರದರ್ಶನ ನಡೆಯಲಿದೆ.

ಡಿ. 25ರಂದು ಬೆಳಗ್ಗೆ 11 ಗಂಟೆಗೆ ಮಲರಾಯ ದೈವದ ನೇಮೋತ್ಸವ, ರಾತ್ರಿ 8.30 ಕ್ಕೆ ಕೊರತ್ತಿ ದೈವದ ನೇಮೋತ್ಸವ, ರಾತ್ರಿ 10.30 ಕ್ಕೆ ಗುಳಿಗ ದೈವದ ನೇಮೋತ್ಸವ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸೇವಾಸಮಿತಿಯ ಅಧ್ಯಕ್ಷರಾದ ಸತೀಶ್‌ ಶೆಟ್ಟಿ ಮೂಡೈಮಾರ್‌, ಪ್ರಧಾನ ಕಾರ್ಯದರ್ಶಿ ಈಶ್ವರ ನಾಯ್ಕ ಎಸ್‌, ಕೋಶಾಧಿಕಾರಿ ಸುರೇಂದ್ರ ಸುವರ್ಣ, ಸಂಘಟನಾ ಕಾರ್ಯದರ್ಶಿ ಕಾರ್ತಿಕ್‌ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here