ಪುತ್ತೂರು: ಅಪಘಾತದಲ್ಲಿ ಗಾಯಗೊಂಡಿರುವ ಅರಿಯಡ್ಕ ಗ್ರಾಮದ ಪಾಪೆಮಜಲು ನಿವಾಸಿ ರಾಜೇಶ್ ಎಂಬವರಿಗೆ ಚಿಕಿತ್ಸಾ ವೆಚ್ಚಕ್ಕೆ ಅರಿಯಡ್ಕ ವಲಯ ಕಾಂಗ್ರೆಸ್ ವತಿಯಿಂದ ರೂ.10 ಸಾವಿರ ಧನ ಸಹಾಯ ನೀಡಲಾಯಿತು.
ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ಉಪಾಧ್ಯಕ್ಷ ವನತರಾಜ್, ಬೂತ್ ಅಧ್ಯಕ್ಷ ಚಂದ್ರಶೇಖರ್ ಮಣಿಯಾಣಿ, ಕಾರ್ಯಕರ್ತ ಲೋಕೇಶ್ ಶೆಟ್ಟಿ ಪಾಪೆಮಜಲು ಉಪಸ್ಥಿತರಿದ್ದರು.
