ಅಧ್ಯಕ್ಷರಾಗಿ ರವಿರಾಜ್ ಶೆಟ್ಟಿ ಅಣಿಲೆ ಆಯ್ಕೆ
ಬಡಗನ್ನೂರು : ಉಳ್ಳಾಕುಲು ದೈವಗಳ ಮೂಲ ಕ್ಷೇತ್ರವಾದ ಆದಿ ಪಡುಮಲೆ ಎಂಬ ಐತಿಹಾಸಿಕ ಹಿನ್ನಲೆಯಿರುವ ಪಡುವನ್ನೂರು ಗ್ರಾಮದ ಪಡುಮಲೆಯ ಬದಿನಾರು ಪೂಮಾಣಿ-ಕಿನ್ನಿಮಾಣಿ (ಉಳ್ಳಾಕುಲು), ವ್ಯಾಘ್ರ ಚಾಮುಂಡಿ (ರಾಜನ್) ದೈವಸ್ಥಾನಕ್ಕೆ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ವ್ಯವಸ್ಥಾಪನಾ ಸಮಿತಿ ರಚನೆಯಾಗಿದೆ. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ರವಿರಾಜ್ ಶೆಟ್ಟಿ ಅಣಿಲೆ ಅವರನ್ನು ಆಯ್ಕೆ ಮಾಡಲಾಗಿದೆ.
ದೈವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಸಾಮಾನ್ಯ ವರ್ಗದಿಂದ ರವಿರಾಜ್ ಶೆಟ್ಟಿ ಅಣಿಲೆ, ರವಿರಾಜ ರೈ ಸಜಂಕಾಡಿ, ಶಶಿಧರ್ ರೈ ಕುತ್ಯಾಳ, ಅನಿಲ್ ಕುಮಾರ್ ಕನ್ನಡ್ಕ ಮತ್ತು ರೋಹಿತ್ ಕುಮಾರ್ ಮುಡಿಪಿನಡ್ಕ, ಮಹಿಳಾ ಸ್ಥಾನದಿಂದ ದಯಾ.ವಿ.ರೈ ಬೆಳ್ಳಿಪ್ಪಾಡಿ ಮತ್ತು ಯಮುನಾ ಪೈರುಪುಣಿ, ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದಿಂದ ಎನ್.ಶ್ರೀಧರ್ ನಾಯ್ಕ ಪಲ್ಲತ್ತಾರು (ನೇರ್ಲಂಪಾಡಿ) ಹಾಗೂ ಅರ್ಚಕ ವರ್ಗದಿಂದ ಗಣೇಶ್ ಭಟ್ ಈಶಮೂಲೆ ಅವರನ್ನು ನೇಮಕಗೊಳಿಸಿ ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಆದೇಶ ಮಾಡಿದ್ದಾರೆ.
ಅಧ್ಯಕ್ಷರ ಆಯ್ಕೆ:
ದೈವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಪ್ರಥಮ ಸಭೆಯು ಡಿ. 15ರಂದು ಬದಿನಾರು ದೈವಸ್ಥಾನದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ರವಿರಾಜ್ ಶೆಟ್ಟಿ ಅಣಿಲೆ ರವರನ್ನು ಆಯ್ಕೆ ಮಾಡಲಾಯಿತು. ರವಿರಾಜ್ ಶೆಟ್ಟಿ ಅಣಿಲೆ ಅವರು ಇದೀಗ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ರವಿರಾಜ ರೈ ಸಜಂಕಾಡಿ, ದಯಾ.ವಿ.ರೈ, ಶಶಿಧರ್ ರೈ ಕುತ್ಯಾಳ, ಶ್ರೀಧರ ನೇರ್ಲಂಪಾಡಿ ಅವರು ಎರಡನೇ ಬಾರಿಗೆ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.