ಪುತ್ತೂರು : ಪುರುಷರಕಟ್ಟೆಯ ಸರಸ್ವತಿ ವಿದ್ಯಾ ಮಂದಿರದ ವಾರ್ಷಿಕ ಕ್ರೀಡಾಕೂಟವು ಡಿ. 16ರಂದು ಜರುಗಿತು. ಶಾಲಾ ಸಂಚಾಲಕರಾದ ಅವಿನಾಶ್ ಕೊಡಂಕಿರಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.
ಮುಖ್ಯ ಅತಿಥಿಗಳಾದ ರಾಜೇಂದ್ರ ಭಟ್ ಮಣಿಯ ಧ್ವಜ ವಂದನೆ ಸ್ವೀಕಾರ ಮಾಡಿದರು. ವೇದಿಕೆಯಲ್ಲಿ ಶಾಲಾ ಆಡಳಿತಾಧಿಕಾರಿ ಶುಭಾ ಅವಿನಾಶ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ತೀರ್ಥರಾಮ ಸವಣೂರು, ವಿದ್ಯಾರ್ಥಿ ಸುರಕ್ಷತಾ ಸಮಿತಿ ಅಧ್ಯಕ್ಷರಾದ ಸಚಿನ್ ಕಂಪ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಸುರೇಶ್ ಭಟ್ ಸೂರ್ಡೇಲು ಮತ್ತು ವಿಶ್ವನಾಥ ಬಲ್ಯಾಯ, ಕ್ಯಾಂಪಸ್ ಮೆನೇಜರ್ ಕೃಷ್ಣಪ್ಪ ಬಿ ಕೆ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಸ್ಕೌಟ್ ಮತ್ತು ಗೈಡ್ಸ್ ಘಟಕದ ಮತ್ತು ಕಬ್ ಮತ್ತು ಬುಲ್ ಬುಲ್ ಘಟಕದ ಕವಾಯತು, ಕ್ರೀಡಾ ಜ್ಯೋತಿಯ ಆಗಮನ ಗಮನ ಸೆಳೆಯಿತು. ಮುಖ್ಯ ಗುರುಗಳಾದ ಅಖಿಲಾ ಕೆ ಬಿ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ ಎಂ ವಂದಿಸಿದರು. ಕ್ರೀಡಾ ಕಾರ್ಯದರ್ಶಿ ಜೋಹನ್ ಎ ಜೆ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಶಾಲಾ ಉಪ ಮುಖ್ಯ ಶಿಕ್ಷಕರಾದ ದಿವ್ಯ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ-ಶಿಕ್ಷಕೇತರ ವರ್ಗದವರು ಸಹಕರಿಸಿದರು.
