ಸಂತ ಫಿಲೋಮಿನಾ ವಿದ್ಯಾಸಂಸ್ಥೆಗಳ 1984-1989ರ ಬ್ಯಾಚ್‌ನ ವಿದ್ಯಾರ್ಥಿಗಳ ಪುನರ್ಮಿಲನ

0

ಪುತ್ತೂರು: 1984-1986ರ ಪದವಿ ಪೂರ್ವ ಮತ್ತು ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ 1986-1989ರ ಬಿ.ಕಾಂ ಬ್ಯಾಚ್‌ನ ಹಿರಿಯ ವಿದ್ಯಾರ್ಥಿಗಳು ಸುಮಾರು ಮೂರೂವರೆ ದಶಕಗಳ ನಂತರ ತಮ್ಮ ಕಾಲೇಜಿನಲ್ಲಿ ಪ್ರೀತಿಯಿಂದ ಮತ್ತೆ ಒಂದಾಗಿದ್ದರು. ಕಾರ್ಯಕ್ರಮ ಸಂತ ಫಿಲೋಮಿನಾ ಕಾಲೇಜಿನ ಪಿಜಿ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ವಿಜಯ ಕುಮಾರ್ ಮೊಳೆಯಾರ್ ಮಾತನಾಡಿ ಹಿರಿಯ ವಿದ್ಯಾರ್ಥಿಗಳು ತಮ್ಮ ಕಾಲೇಜು ಕಡೆಗೆ ಬರುತ್ತಾ ಇರಬೇಕು ಮತ್ತು ಒಂದು ಉತ್ತಮ ಭಾಂದವ್ಯವನ್ನು ಬೆಳೆಸಬೇಕು ತಾವು ಕಲಿತ ಕಾಲೇಜನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.
ಹಿರಿಯ ವಿದ್ಯಾರ್ಥಿಗಳ ವೃತ್ತಿಜೀವನವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಶಿಕ್ಷಕರಿಗೆ ಗೌರವ ಸಲ್ಲಿಸಲಾಯಿತು. ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಎಸ್.ಐ. ಭಟ್, ಪ್ರೊ. ಹರಿನಾರಾಯಣ ಮಾಡಾವು, ಪ್ರೊ. ಕೆ. ವಸಂತಿ ಸೀತಾರಾಮ್ ಗೌಡ, ಪ್ರೊ. ಜನಾರ್ದನ ಹೆರ್ಲೆ, ಮತ್ತು ಪ್ರೊ. ವಿಷ್ಣು ಭಟ್‌ರವರ ಅಮೂಲ್ಯ ಕೊಡುಗೆಗಳಿಗಾಗಿ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ವಿದ್ಯಾರ್ಥಿಗಳಾದ ಕರ್ನಲ್ ಮನೋಜ್ ಕುಮಾರ್ ಆರ್., ಬಿ.ಎಸ್. ಭಟ್, ಇಸ್ಮಾಯಿಲ್ ಎಂ., ಎಂ.ಎಸ್. ಕೃಷ್ಣಯ್ಯ, ಅನಂತ ನಾರಾಯಣ ಬಿ., ಮೀರಾ ಜಗದೀಶ್, ಮೋಹನ ದಾಸ್ ರೈ, ರೋನಾಲ್ಡ್ ಪಿಂಟೋ, ಮತ್ತು ಇತರರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉಪಪ್ರಾಂಶುಪಾಲರಾದ ಡಾ. ವಿಜಯ ಕುಮಾರ್ ಮೊಳೆಯರ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ತೇಜಸ್ವಿ ಭಟ್, ಮತ್ತು ಶೈಕ್ಷಣಿಕ ಉಪಕುಲಸಚಿವರಾದ ವಿಪಿನ್ ನಾಯಕ್ ಉಪಸ್ಥಿತರಿದ್ದರು. ಸುಮಾರು 62 ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here