ರಾಜ್ಯಮಟ್ಟದ ಜ್ಞಾನ ಚಿಗುರು ಕವಚ ಪ್ರಶಸ್ತಿಗೆ ಪೂರ್ಣಿಮಾ ಪೆರ್ಲಂಪಾಡಿ ಆಯ್ಕೆ

0

ಪುತ್ತೂರು: ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ-2 ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ ಪೆರ್ಲಂಪಾಡಿಯವರು ರಾಜ್ಯಮಟ್ಟದ “ಜ್ಞಾನ ಚಿಗುರು ಕವಚ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಡಿ.21ರಂದು ಹಾಸನದಲ್ಲಿ ನಡೆಯುವ ಶಿಕ್ಷಣ ಜ್ಞಾನ ರಾಜ್ಯಮಟ್ಟದ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇವರು ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಸಸ್ತಿಗೆ ಆಯ್ಕೆಯಾದ ಏಕೈಕ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ.

ಅಂತರಾಷ್ಟ್ರೀಯ ಸಂಸ್ಥೆಯ ಬೆಳ್ಳಾರೆ ಜೇಸಿಸ್‌ನ 2026ರ ನಿಯೋಜಿತ ಅಧ್ಯಕ್ಷೆಯಾಗಿರುವ ಇವರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಹೋಬಳಿ ಘಟಕದ ಮಹಿಳಾ ಪ್ರತಿನಿಧಿಯಾಗಿ ಹಾಗೂ ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಇವರಿಗೆ 18ಕ್ಕಿಂತಲೂ ಹೆಚ್ಚು ಗೌರವ ಹಾಗೂ ಪ್ರಶಸ್ತಿಗಳು ಲಭಿಸಿದೆ.

LEAVE A REPLY

Please enter your comment!
Please enter your name here