ಪುತ್ತೂರು:ಮುಂಡೂರು ಗ್ರಾಮದ ನೈತ್ತಾಡಿ ನಿವಾಸಿ, ಪುತ್ತೂರು ನ್ಯಾಯಾಲಯದ ನಿವೃತ್ತ ಪ್ರಥಮ ದರ್ಜೆ ಗುಮಾಸ್ತ ಅಟ್ಲಾರು ಗಿರಿಯಪ್ಪ ಪೂಜಾರಿ ನೈತ್ತಾಡಿ(78ವ.)ರವರು ಡಿ.17ರಂದು ಸಂಜೆ ನೈತ್ತಾಡಿ ಸ್ವಗೃಹದಲ್ಲಿ ನಿಧನರಾದರು.
ಬಲ್ನಾಡು ಅಟ್ಲಾರು ಮೂಲದವರಾಗಿದ್ದ ಗಿರಿಯಪ್ಪ ಪೂಜಾರಿಯವರು ನ್ಯಾಯಾಲಯದಲ್ಲಿನ ವೃತ್ತಿಯಿಂದ ನಿವೃತ್ತರಾದ ಬಳಿಕ ನೈತ್ತಾಡಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.ತಾಲೂಕು ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿಯಾಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿಯೂ ಅವರು ಸೇವೆ ಸಲ್ಲಿಸಿದ್ದರು.
ಮೃತರು ಆರೋಗ್ಯ ಇಲಾಖೆಯ ನಿವೃತ್ತ ಸಹಾಯಕಿಯಾಗಿರುವ ಪತ್ನಿ ಸರೋಜ ಎನ್.ಕೆ.,ಕೃಷಿಕರಾಗಿರುವ ಪುತ್ರ ಯಶವಂತ ಎ.,ಪುತ್ರಿ ಸುನೀತಾ, ಸೊಸೆ ನಿಶ್ಮಿತಾ, ಹುಬ್ಬಳ್ಳಿಯಲ್ಲಿ ರೈಲ್ವೇ ಇಲಾಖೆಯಲ್ಲಿ ಸೇವೆಯಲ್ಲಿರುವ ಅಳಿಯ ಪದ್ಮನಾಭ ಪೂಜಾರಿ ಹಾಗೂ ನಾಲ್ಕು ಮಂದಿ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಡಿ.18ರಂದು ಅಂತ್ಯಕ್ರಿಯೆ:
ಮೃತರ ಅಂತ್ಯಕ್ರಿಯೆ ಕಾರ್ಯಕ್ರಮ ಡಿ.18ರಂದು ಬೆಳಿಗ್ಗೆ ಚಿಕ್ಕಪುತ್ತೂರು ಮಡಿವಾಳಕಟ್ಟೆ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಮೃತರ ಪುತ್ರ ತಿಳಿಸಿದ್ದಾರೆ.
