ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡು, ಇಚ್ಲಂಪಾಡಿ ಗ್ರಾಮ, ದೇರ್ಲ, ಪುತ್ತೂರು-574 229, ಮೊ: 9740730405
ಹಿಂದಿನ ಕಾಲದಲ್ಲಿ ಇಚ್ಲಂಪಾಡಿ, ನೂಜಿಬಾಳ್ತಿಲ, ರೆಂಜಿಲಾಡಿ ಮತ್ತು ಬಲ್ಯ ಎಂಬ ನಾಲ್ಕು ಗ್ರಾಮಗಳ ಗ್ರಾಮಸ್ಥರಿಗೆ ಕೇಂದ್ರ ಸ್ಥಾನವಾಗಿರುವ ಇಚಿಲಂಪಾಡಿ ಬೀಡಿನ ಅರಸರ ಮನದಾಸೆಯಂತೆ, ಈ ಕ್ಷೇತ್ರದ ದೈವಗಳ ಸಂಕಲ್ಪದಂತೆ ಸುಮಾರು ೩೦೦ ವರ್ಷಗಳ ಹಿಂದೆ ಅರಸರಾಗಿದ್ದ ಶ್ರೀ ಉದ್ಯಾಪ ಅರಸರು, ತಾನು ವೈಭವೋಪೇತ ದರ್ಬಾರಲ್ಲಿ ಮೆರೆಯುತ್ತಿದ್ದ ಇಚ್ಲಂಪಾಡಿ ಬೀಡಿನ ಬಲಪಾರ್ಶ್ವದಲ್ಲಿ ಪೂರ್ವಭಾಗಕ್ಕೆ ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ಲಿಂಗರೂಪಿಣಿಯಾಗಿ ಪ್ರತಿಷ್ಠಾಪಿಸಿ, ದೇವಿ ಸನ್ನಿಧಿಯನ್ನು ನಿರ್ಮಾಣ ಮಾಡಿ, ಬೀಡು ಮನೆತನಕ್ಕೆ ಒಳಪಟ್ಟ ನಾಲ್ಕು ಗ್ರಾಮಗಳ ಭಕ್ತಾದಿಗಳಿಗೆ ಸೀಮೆ ದೇವರಾಗಿ ಆರಾಧಿಸಿಕೊಂಡು ಬರಲು ಅವಕಾಶ ಕಲ್ಪಿಸಿದರು ಎಂಬುದು ಚರಿತ್ರೆಯಿಂದ ತಿಳಿದು ಬರುತ್ತದೆ.
ಈ ವೇಳೆ ಇಚ್ಲಂಪಾಡಿ ಬೀಡಲ್ಲಿ ಉದ್ಯಾಪ ಅರಸರು ಸತ್ಯ ಧರ್ಮ, ನಿಷ್ಠೆಯಿಂದ ರಾಜ್ಯಭಾರ ಮಾಡುತ್ತಿದ್ದರು. ಇವರ ಕಾಲದಲ್ಲಿ ಮೂರುದಿನಗಳ ಕಾಲ ವಿಜೃಂಭಣೆಯಿಂದ ನೇಮೋತ್ಸವವು ನಡೆಯುತ್ತಿತ್ತು. ಉಳ್ಳಾಕ್ಲು ದೈವಗಳು ಘಟ್ಟವಿಳಿದು ತುಳುನಾಡಿಗೆ ಬರುವಾಗ ತಮ್ಮ ತಂಗಿ ಪೂವಲಂಕಮ್ಮ ದೇವಿಗೆ ಅಭಯ ನೀಡಿದ ಪ್ರಕಾರವೊ ಎಂಬಂತೆ ಇಚ್ಲಂಪಾಡಿ ಬೀಡಿನ ಹೆಗ್ಗಡೆ ಮನೆತನದವರಿಗೆ ತಮ್ಮ ಬೀಡಿನ ಬಳಿಯಲ್ಲಿ ಒಂದು ದೇವಸ್ಥಾನ ನಿರ್ಮಿಸಬೇಕೆಂಬ
ಬಯಕೆ ಮೂಡಿತು. ನೂರಾರು ವರ್ಷಗಳ ಹಿಂದೆಯೇ ಈ ಕ್ಷೇತ್ರದ ದೈವಗಳಿಗೆ ಅವಿನಾಭಾವ ಸಂಬಂಧವಿರುವ ಲಿಂಗರೂಪಿಣಿಯಾದ ‘ಶ್ರೀ ದುರ್ಗಾಪರಮೇಶ್ವರೀ ದೇವಿ’ಯು ಇಲ್ಲಿ ಅವತಾರವೆತ್ತಿದಳು ಎಂಬುದನ್ನು ದೈವಿಕ ಚರಿತ್ರೆಯು ಸಾರಿ ಹೇಳುತ್ತಿದೆ. ಕಾಲ ಉರುಳಿದಂತೆ ಅಧಿಕಾರ ಮರಳಿ ಹಲವು ಹೆಗ್ಗಡೆಯವರ ರಾಜ್ಯಭಾರವನ್ನು ಕಂಡ ಈ ಇಚ್ಲಂಪಾಡಿ ಬೀಡು, ಪದ್ಮರಾಜ ಹೆಗ್ಗಡೆಯವರ ಕಾಲದವರೆಗೂ ಶ್ರೀಮಂತ ಬೂಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ನಂತರದ ದಿನಗಳಲ್ಲಿ ಉಳುವವನೇ ಹೊಲದೊಡೆಯ ಎಂಬ ಭೂ ಮಸೂದೆ ಕಾಯ್ದೆ ಬಂದು ಇಲ್ಲಿ ಹೆಗ್ಗಡೆ ಪಟ್ಟ ವೇರಿದ ಕುಂಞಣ್ಣ ಹೆಗ್ಗಡೆಯವರ ಕಾಲದಲ್ಲಿ ಇಲ್ಲಿ ನಡೆಯುತ್ತಿದ್ದ ಕಟ್ಟು ಕಟ್ಟಲೆಗಳು ನೇಪಥ್ಯಕ್ಕೆ ಸರಿಯಲ್ಪಟ್ಟವು. ಸುಮಾರು ೩೫ ವರ್ಷಗಳ ಹಿಂದೆಯೇ ದೈವಾಧೀನರಾದ ಕುಂಞಣ್ಣ ಹೆಗ್ಗಡೆಯವರ ನಂತರ ದೇವಸ್ಥಾನದ ಅಧೀನಕ್ಕೊಳಪಟ್ಟ ಸುಮಾರು ೧೨ ಎಕ್ರೆ ಸ್ಥಳಗಳನ್ನು ಸಂರಕ್ಷಿಸಿ ಶ್ರೀ ದುರ್ಗಾ ಪರಮೇಶ್ವರಿ ದೇವಿಗೆ ದಿನಕ್ಕೊಂದು ಪೂಜೆ ನಡೆಸುವ ಜವಾಬ್ದಾರಿಯನ್ನು ಗುತ್ತಿನ ಮನೆಯಲ್ಲಿರುವ ಶ್ರೀ ಯುವರಾಜ ಬಲ್ಲಾಳ್ ವಹಿಸಿಕೊಂಡರು.
ಜೀರ್ಣಾವಸ್ಥೆಯಲ್ಲಿದ್ದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ನವೀಣಕರಣಗೊಂಡು ೨೦೦೮ರ ಜ.೫ರಿಂದ ೧೦ರ ತನಕ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ನಡೆದಿತ್ತು. ಮಲ್ಲಿಕಾರ್ಜುನ ಸ್ವಾಮಿ, ಶ್ರೀ ಉಳ್ಳಾಕ್ಲು ದೈವಗಳ ಸಾನಿಧ್ಯಗಳ ನವೀಕರಣ ಕಾರ್ಯ ನಡೆದಿದೆ. ಶುಭಕರ ಜೈನ್ ಇವರಿಗೆ ಹೆಗ್ಗಡೆ ಪಟ್ಟಾಭಿಷೇಕ ಕಾರ್ಯಕ್ರಮವೂ ನಡೆದಿದೆ.
ಆಡಳಿತ ಮೊಕ್ತೇಸರರು: ಶುಭಕರ ಹೆಗ್ಗಡೆ, ಆಡಳಿತ ಸಮಿತಿ ಅಧ್ಯಕ್ಷರು: ಶ್ರೀನಿವಾಸ ಪೂಜಾರಿ ನಿಡ್ಯಡ್ಕ, ಉಪಾಧ್ಯಕ್ಷರು: ಜಯರಾಜ್ ಕೊರಮೇರು, ಕಾರ್ಯದರ್ಶಿ: ಶಾಂತರಾಮ ಕುಡಲ, ಜೊತೆ ಕಾರ್ಯದರ್ಶಿ: ಕೇಶವ ಅಲೆಕ್ಕಿ, ಕೋಶಾಧಿಕಾರಿ: ಚಂದ್ರಶೇಖರ ಕಲಮೆತ್ತಡ್ಕ.
ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ಗಂಗಾಧರೇಶ್ವರ ದೇವಸ್ಥಾನ ನೆಕ್ಕಿಲ, ಇಚ್ಲಂಪಾಡಿ, ನೇರ್ಲ ಅಂಚೆ, ಪುತ್ತೂರು-574229. 259044
* ಶ್ರೀ ಮಲ್ಲಿಕಾರ್ಜುನ ಸ್ವಾಮಿ ಶ್ರೀ ಉಳ್ಳಾಕ್ಲು ಪರಿವಾರ ದೈವಗಳ ಚಾವಡಿ
* ಶ್ರೀ ರಾಜನ್ ದೈವಸ್ಥಾನ ಒಡ್ಯೆತ್ತಡ್ಕ 9740936844
* ಆರಿಗೂ ಮೂಡಾಯೂರು ದೈವಸ್ಥಾನ ಇಚ್ಲಂಪಾಡಿ
* ಪೆರಣಬೈಲು ಶ್ರೀ ಶಿರಾಡಿ ದೈವ ಗೋಳಿತೊಟ್ಟು
* ಶ್ರೀ ಸಿದ್ದಿವಿನಾಯಕ ಭಜನಾ ಮಂದಿರ ಇಚ್ಲಂಪಾಡಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಬೀಡು- ಇಚ್ಲಂಪಾಡಿ ಪುತ್ತೂರು-574229. 9632661733, 9964172077