ಕುಂಬ್ರ ಕೆ.ಐ.ಸಿಯಲ್ಲಿ ಸಮಸ್ತ 100ನೇ ವಾರ್ಷಿಕ ಸಮ್ಮೇಳನದ ಪ್ರಚಾರ ಸಭೆ-ಸ್ವಾಗತ ಸಮಿತಿ ರಚನೆ

0

ಪುತ್ತೂರು: ಸಮಸ್ತ 100ನೇ ವಾರ್ಷಿಕ ಸಮ್ಮೇಳನದ ಪ್ರಚಾರ ಸಭೆ ಡಿ.10ರಂದು ಕುಂಬ್ರ ಕೆಐಸಿಯಲ್ಲಿ ನಡೆಯಲಿದ್ದು ಇದರಲ್ಲಿ ಸಮಸ್ತ ಮುಶಾವರ ಸದಸ್ಯರಾದ ಅಬ್ದುಸ್ಸಲಾಂ ಬಾಖವಿ ಹಾಗೂ ಖ್ಯಾತ ಪ್ರಭಾಷಣಗಾರ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ನಿಟ್ಟಿನಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ಸ್ವಾಗತ ಸಮಿತಿಯ ಗೌರವ ಸಲಹೆಗಾರರಾಗಿ ಅನೀಸ್ ಕೌಸರಿ, ಅಬ್ದುಸ್ಸತ್ತಾರ್ ಕೌಸರಿ, ಇಸ್ಮಾಯಿಲ್ ಫೈಝಿ, ಇಬ್ರಾಹಿಂ ಹಾಜಿ ಹಾಗೂ ಬಶೀರ್ ಕೌಡಿಚ್ಚಾರ್ ಅವರನ್ನು ಆಯ್ಕೆ ಮಾಡಲಾಯಿತು.

ಚೇರ್‌ಮೆನ್ ಆಗಿ ರಫೀಕ್ ಡಿಂಬ್ರಿ, ವರ್ಕಿಂಗ್ ಚೇರ್‌ಮೆನ್ ಆಗಿ ಅಶ್ರಫ್ ಸಾರೆಪುಣಿ, ಕನ್ವೀನರ್ ಆಗಿ ಸಿದ್ದೀಕ್ ಸುಲ್ತಾನ್, ವರ್ಕಿಂಗ್ ಕನ್ವೀನರ್ ಆಗಿ ಆಚಿ ಕುಂಬ್ರ, ಖಜಾಂಜಿಯಾಗಿ ಆಬಿದ್ ಲಕ್ಷ್ಮೇಶ್ವರ ಅವರನ್ನು ಆಯ್ಕೆ ಮಾಡಲಾಯಿತು. ವೈಸ್ ಚೇರ್‌ಮೆನ್‌ಗಳಾಗಿ ಸ್ವಾದಿಕ್ ಮಗಿರೆ, ಲತೀಫ್ ಬೊಳ್ಳಾಡಿ, ರಝಾಕ್ ಸೊರಕೆ, ಯೂಸುಫ್ ಡಿಂಬ್ರಿ, ಶಾಫಿ ಕುಂಬ್ರ ಅವರನ್ನು ಆಯ್ಕೆ ಮಾಡಲಾಯಿತು.

ಫೈನಾನ್ಸ್ ಸಮಿತಿ ಚೇರ್‌ಮೆನ್ ಆಗಿ ಶರೀಫ್ ಹಾಜಿ ಪರ್ಪುಂಜ, ವರ್ಕಿಂಗ್ ಚೇರ್‌ಮೆನ್ ಆಗಿ ಸಲಾಂ ಮೇನಾಲ, ಕನ್ವೀನರ್ ಆಗಿ ಫಾರೂಕ್ ಮಗಿರೆ, ವರ್ಕಿಂಗ್ ಕನ್ವೀನರ್ ಆಗಿ ಫಾರೂಕ್ ಸಂಟ್ಯಾರ್ ಅವರನ್ನು ಆಯ್ಕೆ ಮಾಡಲಾಯಿತು. ಪ್ರಚಾರ ಸಮಿತಿ ಚೇರ್‌ಮೆನ್ ಆಗಿ ಎಂ.ಎಂ ಶರಫುದ್ದೀನ್, ವರ್ಕಿಂಗ್ ಚೇರ್‌ಮೆನ್ ಆಗಿ ಅಶ್ರಫ್ ಮುಲಾರ್, ಕನ್ವೀನರ್ ಆಗಿ ಬಶೀರ್ ಗಟ್ಟಮನೆ, ವರ್ಕಿಂಗ್ ಕನ್ವೀನರ್ ಆಗಿ ಮನ್ಸೂರ್ ಅಸ್ಲಮಿ ಇಅವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here