ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಶಾಂತಿಮೊಗರು, ಕುದ್ಮಾರು ಪುತ್ತೂರು ದ.ಕ. ಫೋನ್ :೦೮೨೫೧-೨೮೨೭೧೯
ಪುತ್ತೂರು-ಸವಣೂರು-ಕಾಣಿಯೂರು ರಸ್ತೆಯಲ್ಲಿ 19 ಕಿ.ಮೀ. ಕ್ರಮಿಸಿ ಬರೆಪ್ಪಾಡಿ ಎಂಬಲ್ಲಿಂದ ೧ ಕಿ.ಮೀ. ದೂರ ಎಡಕ್ಕೆ ಚಲಿಸಿದಾಗ ಕುಮಾರಾಧಾರ ನದಿಯ ದಂಡೆಗೆ ಮುಟ್ಟುತ್ತೇವೆ. ನದಿಯ ದಂಡೆಯ ಮೇಲೆ ಎತ್ತರವಾದ ದಿನ್ನೆಯಲ್ಲಿ ಕಾಣಿಸುವ ದೇವಾಲಯವೇ ಕುದ್ಮಾರು ಗ್ರಾಮಕ್ಕೆ ಸೇರಿದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ.
ಪುರಾತನ ಕಾಲದಲ್ಲಿ ಧೌಮ್ಯ ಋಷಿಗಳಿಂದ ಶಾಂತಿಮೊಗರಿನಲ್ಲಿ ಪ್ರತಿಷ್ಠಾಪನೆ ಗೊಂಡಿತ್ತೆನ್ನಲಾದ ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯವು ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಾಲಯದಷ್ಟೇ ಪುಣ್ಯ ಕ್ಷೇತ್ರವಾಗಿತ್ತೆಂದು ಪ್ರತೀತಿ ಇದೆ. ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಸರ್ಪ ಸಂಸ್ಕಾರ, ನಾಗಪ್ರತಿಷ್ಠೆ ಇತ್ಯಾದಿ ಸೇವೆಗಳು ಶಾಂತಿಮೊಗರಿನಲ್ಲಿಯೂ ನಡೆಯುತ್ತದೆ. ಈಗ ಸುಬ್ರಹ್ಮಣ್ಯದಲ್ಲಿ ನಡೆಯುವಂತೆಯೇ ಹಿಂದೆಯೇ ಶಾಂತಿಮೊಗರಿನಲ್ಲಿ ಜಾನುವಾರು ಜಾತ್ರೆ ನಡೆಯುತ್ತಿತ್ತು ಎಂಬ ಇತಿಹಾಸವಿದೆ.
ಪ್ರಸ್ತುತ ಶಾಂತಿಮೊಗರು ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವವು ಅದ್ದೂರಿಯಾಗಿ ನಡೆಯುತ್ತಿದೆ ಹಾಗೂ ಸುಬ್ರಹ್ಮಣ್ಯದಂತೆಯೇ ಶ್ರೀ ಸುಬ್ರಹ್ಮಣ್ಯ ಲಿಂಗಸ್ವರೂಪಿಯಾಗಿದ್ದು ಗಣಪತಿಯೂ ಲಿಂಗ ಸ್ವರೂಪಿಯಾಗಿರುವ ಕ್ಷೇತ್ರ ಇದಾಗಿದೆ. ಇಲ್ಲಿ ಪ್ರಾರ್ಥನೆ ಮಾಡಿದರೆ ಅವರ ಇಚ್ಛೆ ನೆರವೇರುತ್ತದೆ ಎಂಬ ಭಾವನೆಯೂ ಭಕ್ತಾದಿಗಳಿಂದ ತಿಳಿದುಬರುತ್ತದೆ. ಇಲ್ಲಿ ಪ್ರಾರ್ಥಿಸಿದ ಭಕ್ತರಿಗೆ ಕಂಕಣಭಾಗ್ಯ ಕೂಡಿಬಂದ ಪ್ರತೀತಿ ಕೂಡಾ ಇದೆ.
ಬಿ.ರತ್ನವರ್ಮ ಅಜ್ರಿ ಕುದ್ಮಾರುಗುತ್ತು, ಎನ್.ಹರೀಶ್ ಆಚಾರ್ಯ ನಗ್ರಿಗುತ್ತು, ಕೆ.ಪ್ರವೀಣ್ ಕುಮಾರ್ ಕೆಡೆಂಜಿಗುತ್ತು (ಅನುವಂಶೀಯ ಮೊಕ್ತೇಸರರು), ಸತೀಶ್ ಕುಮಾರ್ ಕೆಡೆಂಜಿ (ಆಡಳಿತ ಸಮಿತಿ ಅಧ್ಯಕ್ಷರು), ಡಾ. ಸುಬ್ರಹ್ಮಣ್ಯ ಭಟ್ ಬರೆಪ್ಪಾಡಿ-ಉಪಾಧ್ಯಕ್ಷರು, ಎಸ್.ಮದನ ಪೂಜಾರಿ ಕುದ್ಮಾರು-ಪ್ರಧಾನ ಕಾರ್ಯದರ್ಶಿ, ಕೆ.ನಿಟ್ಟೋಣಿ ಕೆಡೆಂಜಿ – ಜೊತೆ ಕಾರ್ಯದರ್ಶಿ, ಎನ್.ಮಹಾಲಿಂಗೇಶ್ವರ ಶರ್ಮಕಜೆ, ಕೆ.ಸೀತಾರಾಮ ರೈ ಸವಣೂರು, ಬಿ.ಶೂರಪ್ಪ ಗೌಡ ಪಟ್ಟೆತ್ತಾನ, ಶ್ರೀಮತಿ ಮೋಹಿನಿ ಪಿ.ಶೇನವ ಶಾಂತಿಮೊಗರು, ಎನ್.ಬಿ.ರಾಮಯ್ಯ ಗೌಡ ನೂಜಿ (ಸದಸ್ಯರು) ಖಾಯಂ ಆಹ್ವಾನಿತರು- ಚೆನ್ನಪ್ಪ ಗೌಡ ನೂಜಿ, ವೆಂಕಟೇಶ್ ಭಟ್ ಕೊಯಕ್ಕುಡೆ, ಐತ್ತಪ್ಪ ಗೌಡ ಕೂವೆತ್ತೋಡಿ, ಶ್ರೀಮತಿ ಜಾನಕಿ ನೂಜಿ, ಸುಂದರ ರೈ ಸವಣೂರು, ಸುರೇಶ್ ಕಾಪಿನಕಾಡು, ಎಂ.ಕೆ. ಜತ್ತಪ್ಪ ರೈ ಬರೆಪ್ಪಾಡಿ, ತಾರಾನಾಥ ರೈ ನಗ್ರಿಗುತ್ತು. ಟಿ. ರಮಾನಂದ ಆಸ್ರಣ್ಣ (ಅರ್ಚಕ), ಸೇಸಪ್ಪ ಗೌಡ ನೂಜಿ ಗುಮಾಸ್ತರಾಗಿ ಹಾಗೂ ಅನ್ಯಾಡಿ ವಿಮಲ ಸಿಬ್ಬಂದಿಯಾಗಿದ್ದಾರೆ.
ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಸ್ಥಾನ, ಕುದ್ಮಾರು ಪುತ್ತೂರು ದ.ಕ.
ಶ್ರೀ ಕೃಷ್ಣನ ಪರಮಭಕ್ತರಾದ ಪಾಂಡವರು ವನವಾಸದ ವೇಳೆಯಲ್ಲಿ ಈ ಊರಿಗೆ ಬಂದಾಗ ತಮ್ಮ ನಿತ್ಯಾರಾಧನೆಗೆ ಈ ಐದು ಲಿಂಗಗಳ ದೇವಾಲಯವನ್ನು ಸ್ಥಾಪಿಸಿದರು. ಈ ದೇವಾಲಯದ ಒಂದೇ ಅಂಗಣದಲ್ಲಿ ಎರಡು ದೇವಾಲಯಗಳು ಇವೆ. ಒಂದು ಪಂಚಲಿಂಗೇಶ್ವರ ದೇವಾಲಯ, ಇನ್ನೊಂದು ಕೇಪುಳೇಶ್ವರ ದೇವಾಲಯ. ಕೇಪುಳೇಶ್ವರ ದೇವಾಲಯದ ಮುಂದುಗಡೆ ದೇವಾಲಯದ ಬಾವಿಯಿದೆ. ಈ ಬಾವಿಯನ್ನು ಭೀಮಸೇನ ತನ್ನ ಕಿರು ಬೆರಳೂರಿ ನಿರ್ಮಿಸಿದನೆಂದು ಪ್ರತೀತಿ. ಈ ಬಾವಿಯ ತೀರ್ಥ ಸ್ನಾನ ಮಾಡಿದರೆ ಕುದಿಜ್ವರ, ಕೆಡುಗಳು ಗುಣವಾಗುವುದೆಂದೂ ಪ್ರಸಿದ್ದಿ ಇದೆ. ಮಕ್ಕಳಿಲ್ಲದವರು ರಂಗಪೂಜೆ ಹರಕೆ ಹೇಳಿ ಸಂತಾನ ಪ್ರಾಪ್ತಿಯಾದ ನಿದರ್ಶನಗಳಿವೆ. ಇದು ಕುದುಮಾರು ಗ್ರಾಮದ ಗ್ರಾಮ ದೇವಸ್ಥಾನವಾಗಿದೆ. ಜನೇಶ್ ಭಟ್ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿ. ಪುರಂದರ ಭಟ್, ಅನಂತ ಕೃಷ್ಣ ಭಟ್ ಮೊಕ್ತೇಸರರಾಗಿದ್ದಾರೆ.
ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕೆಲೆಂಬಿರಿ ಕುದ್ಮಾರು