ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಕುರಿಯ ಗ್ರಾಮ ಮತ್ತು ಅಂಚೆ, ಪುತ್ತೂರು-574 210. ಮೊ: 9686328337, 9448725985
ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಾಲಯವು ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿದೆ. ಆ ಕಾಲದಲ್ಲಿ ಈ ನಾಡನ್ನಾಳಿದ ಬಲ್ಲಾಳರು ಈ ದೇವಾಲಯವನ್ನು ಕಟ್ಟಿಸಿದರು.
ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವರು ಕುರಿಯ ಗ್ರಾಮದ ದೇವರಾಗಿದ್ದರೂ ಪಕ್ಕದ ಗ್ರಾಮಗಳಾದ ಕೆದಂಬಾಡಿ, ಒಳಮೊಗ್ರು ಗ್ರಾಮಗಳಲ್ಲಿ ಕೂಡ ಅಪಾರ ಭಕ್ತವೃಂದವನ್ನು ಹೊಂದಿದೆ. ಕೆಮ್ಮಿಂಜೆ ಗ್ರಾಮದ ಗಡಿಯಿಂದ ದೇವಾಲಯ ದವರೆಗೆ ಹರಡಿದ್ದ ಫಲವತ್ತಾದ ಭೂ ಪ್ರದೇಶವನ್ನು ದೇವಾಲಯಕ್ಕೆ ಬಿಟ್ಟು ಕೊಡಲಾಗಿತ್ತು. ಈ ಪ್ರದೇಶದ ಆದಾಯದಿಂದ ದೇವರ ನಿತ್ಯಪೂಜೆ, ದಾನ, ಧರ್ಮ ನಡೆಯಿತು.
ಕಾಲವಶದಿಂದ ಈ ಪ್ರದೇಶದಲ್ಲಿ ಬಲ್ಲಾಳ ಮನೆತನದ ಆಳ್ವಿಕೆ ಕೊನೆಗೊಂಡ ಪರಿಣಾಮವಾಗಿ ದೇವಾಲಯವೂ ಅವನತಿಯ ಹಾದಿ ಹಿಡಿಯಿತು. ಆ ಕಾಲದಲ್ಲಿ ಈ ಗ್ರಾಮದಲ್ಲಿದ್ದ ಭಕ್ತಾದಿಗಳ ಮನೆತನಗಳು ದೇವಳದ ಪುನರುದ್ಧಾರಕ್ಕೆ ಟೊಂಕ ಕಟ್ಟಿ ನಿಂತವು. ಇದರಿಂದ ದೇವಾಲಯವು ಅಭಿವೃದ್ಧಿ ಪಥದೆಡೆಗೆ ಸಾಗಿತು. ದೇವಾಲಯದ ಪಶ್ಚಿಮ ಉತ್ತರ ಭಾಗಗಳಲ್ಲಿ ನೆಲೆಸಿದ್ದ ೮ ಬ್ರಾಹ್ಮಣ ಮನೆತನದವರು ಗರ್ಭಗುಡಿಯನ್ನು, ಮಾಪಾಲ ಮನೆತನದವರು ತೀರ್ಥ ಮಂಟಪವನ್ನೂ, ಕುರಿಯ ಏಳ್ನಾಡುಗುತ್ತು ಮತ್ತು ಬಳ್ಳಮಜಲು ಗುತ್ತಿನವರು ಪೂರ್ವ ಗೋಪುರವನ್ನೂ, ಬೂಡಿಯಾರು ಅಡ್ಯೆತ್ತಿಮಾರು ನಡುಬೈಲು ಮನೆತನದವರು ದಕ್ಷಿಣ ಪೌಳಿಯನ್ನೂ, ಡಿಂಬ್ರಿ ಗುತ್ತಿನವರು ಪಶ್ಚಿಮ ಪೌಳಿಯನ್ನೂ, ಕೊಡ್ಲಾರು ಮನೆತನ ದವರು ಉತ್ತರ ಪೌಳಿಯನ್ನೂ, ಕೈಂತಿಲ ಮನೆತನದವರು ವಸಂತ ಕಟ್ಟೆಯನ್ನು ಕಟ್ಟಿಸಿ ಅವುಗಳ ನಿರ್ವಹಣೆಯನ್ನು ತಾವೇ ವಹಿಸಿ ಕೊಂಡರು.
ಕುರಿಯ ಗ್ರಾಮದಲ್ಲಿ ಈ ದೇವಸ್ಥಾನವಿದ್ದರೂ ಈ ದೇವಸ್ಥಾನ ಇರುವ ಜಾಗಕ್ಕೆ ಮಾತ್ರ `ಉಳ್ಳಾಲ’ ಅಂತ ಕರೆಯುತ್ತಾರೆ. ಬಹುಶಃ ಇಲ್ಲಿ ಉಳ್ಳಾಲ್ತಿಯ ಒಂದು ಆರಾಧನಾ ಕ್ಷೇತ್ರ ಕೂಡ ಇದ್ದಿರಲೂಬಹುದು. ವಿಷ್ಣುಮೂರ್ತಿಯ ಜೊತೆಯಾಗಿ ಉಳ್ಳಾಲ್ತಿ ಕೂಡ ತಮ್ಮ ಶಕ್ತಿಯನ್ನು ಇಲ್ಲಿ ಪಸರಿಸಿರಬಹುದು. ಒಟ್ಟಿನಲ್ಲಿ ಉಳ್ಳಾಲ ಅನ್ನೋ ಹೆಸರು `ಉಳ್ಳಾಲ್ತಿ’ಯಿಂದ ಬಂದಿರುವ ಸಾಧ್ಯತೆ ಅಧಿಕವಾಗಿದೆ ಎನ್ನುವುದು ಭಕ್ತಾದಿಗಳ ಅಭಿಪ್ರಾಯ. ಊರ ಹಾಗೂ ಪರವೂರ ಭಗವದ್ಭಕ್ತರ ಸಹಕಾರದಿಂದ ದೇವಾಲಯವು ಜೀರ್ಣೋ ದ್ಧಾರ ಗೊಂಡು ೨೦೦೯ರಲ್ಲಿ ಬ್ರಹ್ಮಕಲಶೋತ್ಸವ ಜರಗಿದೆ. ಸದ್ರಿ ದೇವಸ್ಥಾನಕ್ಕೆ ಭೋಜನ ಶಾಲೆ ಹಾಗೂ ಪಾಕಶಾಲೆಯ ಅವಶ್ಯಕತೆ ಇರುವುದರಿಂದ ಇದರ ನಿರ್ಮಾಣ ಕಾರ್ಯ ಭಕ್ತ ಜನ ಸಂಕಲ್ಪದಂತೆ ಈಗಾಗಲೇ ಪ್ರಾರಂಭಗೊಂಡು ಈ ಕಟ್ಟಡದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡು
ಕಡೆಯ ಹಂತದ ಕಾಮಗಾರಿಯು ನಡೆಯಬೇಕಾಗಿದೆ. ಈ ಕಟ್ಟಡದ ಕಾಮಗಾರಿಗೆ ಅಂದಾಜು ವೆಚ್ಚಕ್ಕಿಂತ ಹೆಚ್ಚು ಅಂದರೆ ರೂ. ೩೫ ಲಕ್ಷ ಆಗಬಹುದೆಂದು ಅಂದಾಜಿಸಲಾಗಿದೆ. ಧನಸಹಾಯ ನೀಡುವ ಭಕ್ತಾಭಿಮಾನಿಗಳು ದೇವಸ್ಥಾನವನ್ನು ಸಂಪರ್ಕಿಸಬಹುದಾಗಿದೆ.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ – ಕೆ.ಎಸ್. ರವೀಂದ್ರನಾಥ್ ರೈ ಬಳ್ಳಮಜಲು ಗುತ್ತು. ಸದಸ್ಯರುಗಳು- ರಾಧಾಕೃಷ್ಣ ರೈ ಕುರಿಯ ಏಳ್ನಾಡುಗುತ್ತು, ಗಣೇಶ್ ರೈ ಬೂಡಿಯಾರು, ಸತೀಶ್ ರೈ ಡಿಂಬ್ರಿಗುತ್ತು, ಆನಂದ ಕುಮಾರ್ ಉಳ್ಳಾಲ, ಮಧು ನರಿಯೂರು, ಅರುಣಾ ಸಿ. ರೈ ಕುರಿಯ ಏಳ್ನಾಡುಗುತ್ತು, ಪಿ. ಇಂದಿರಾವತಿ, ವಿಷ್ಣುನಗರ ಕುರಿಯ, ಪ್ರಕಾಶ್ ರಾವ್ ಕೊಡ್ಲಾರು (ಅರ್ಚಕ).
ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಕುರಿಯ, ಪುತ್ತೂರು ದ.ಕ. ಮೊ: 9481345205
ಮೊಟ್ಟೆತ್ತಡ್ಕದಿಂದ ಸುಮಾರು ೧೧/೨ ಕಿ.ಮೀ. ಕ್ರಮಿಸಿದಾಗ ಸಿಗುವ ಕ್ಷೇತ್ರವೇ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ. ಪೂರ್ವದಲ್ಲಿ ಈ ದೇವಸ್ಥಾನವು ಕುರಿಯ ಗ್ರಾಮದ ಪಾಲಿಂಜೆ ಅಂಗಿಂತಾಯ ಕುಟುಂಬಕ್ಕೆ ಸೇರಿದ ದೇವಸ್ಥಾನವಾಗಿತ್ತು. ಬಹು ವರ್ಷದಿಂದ ಪಾಳು ಬಿದ್ದಿದ್ದ ಈ ದೇವಸ್ಥಾನವನ್ನು ಊರಿನ ಭಕ್ತಾದಿಗಳು ಸೇರಿಸಿ ಜೀರ್ಣೋದ್ಧಾರಗೊಳಿಸಿ ಬ್ರಹ್ಮಕಲಶ ನಡೆದಿರುತ್ತದೆ. ಪ್ರತಿ ತಿಂಗಳ ಮೊದಲ ಆದಿತ್ಯವಾರ ಬಲಿವಾಡು ಕೂಟ, ಹುಣ್ಣಿಮೆಯಂದು ದುರ್ಗಾಪೂಜೆ, ನಾಗರಪಂಚಮಿ, ವರಮಹಾಲಕ್ಷ್ಮಿ ಪೂಜೆ, ಸಾರ್ವಜನಿಕ ಸತ್ಯನಾರಾಯಣ ಪೂಜೆ ಪ್ರತಿ ವರ್ಷ ನಡೆಯುತ್ತದೆ. ಎರಡು ದಿವಸದ ಜಾತ್ರೆ, ಮಿಶನ್ಮೂಲೆ ತನಕ ದೇವರ ಸವಾರಿ, ಕಟ್ಟೆ ಪೂಜೆ ನಡೆಯುತ್ತದೆ.
ವ್ಯವಸ್ಥಾಪನಾ ಸಮಿತಿ: ಜಯರಾಮ ರೈ ನುಳಿಯಾಲು – ಅಧ್ಯಕ್ಷರು, ಸೂರ್ಯಪ್ರಕಾಶ್ ಅಂಗಿಂತಾಯ, ರಾಮಣ್ಣ ನಾಯ್ಕ, ಯೋಗೀಶ ಪ್ರಭು, ನಾರಾಯಣ ನಾಯ್ಕ, ಶ್ರೀಮತಿ ಸುಜಾತ, ಶ್ರೀಮತಿ ಜ್ಯೋತಿ, ರಘುರಾಮ ಕಲ್ಲೂರಾಯ – ಸದಸ್ಯರು.
ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಬ್ರಹ್ಮ ಬೈದರ್ಕಳ ಗರಡಿ ಕಿನ್ನಿಮಜಲು ಕುರಿಯ, ಕೆ.ಗಿರಿಯಪ್ಪ ಪೂಜಾರಿ 285363, 8861493808 ಸತೀಶ್ ಕಿನ್ನಿಮಜಲು
* ಏಳ್ನಾಡುಗುತ್ತು ದೈವಸ್ಥಾನ ಕುರಿಯ (ಪಿಲಿ ಚಾಮುಂಡಿ), 285246
* ರಕ್ತೇಶ್ವರಿ ದೈವಸ್ಥಾನ ಕುರಿಯ ಡಿಂಬ್ರಿ
* ಬೈಲಾಡಿ ಕೊರಗಜ್ಜ ದೈವಸ್ಥಾನ
* ಬಳ್ಳಮಜಲು ಪಂಜುರ್ಲಿ ದೈವಸ್ಥಾನ
* ಮಹಾಮಾಯಾ ನಾಗಸನ್ನಿಧಿ ಬಳ್ಳಮಜಲು ಕುರಿಯ
* ಮಾರಿಯಮ್ಮ ದೈವಸ್ಥಾನ ಡಿಂಬ್ರಿ
* ರಕ್ತೇಶ್ವರಿ ದೈವಸ್ಥಾನ ಅಡೈಲ್ತೆಮಾರ್, 285489
* ಧೂಮಾವತಿ ದೈವಸ್ಥಾನ ಕೊಡ್ಲಾರು, 203156
* ಹುಲಿಭೂತ ದೈವಸ್ಥಾನ ಬೂಡಿಯಾರು, 9448494809 (ರಾಧಾಕೃಷ್ಣ ರೈ)
* ಡಿಂಬ್ರಿ ಪಿಲಿಭೂತ ದೈವಸ್ಥಾನ
* ಕೊರಗತನಿಯ ಗುಡಿ ಮಾವಿನಕಟ್ಟೆ
* ಕೊರಗಜ್ಜ ದೈವಸ್ಥಾನ ಒಡೆತ್ತಿಮಾರ್
* ಧೂಮಾವತಿ ದೈವಸ್ಥಾನ, ಕೈಂತಿಲ