ಶ್ರೀ ಉಮಾಮಹೇಶ್ವರ ದೇವಸ್ಥಾನ ಮಜಲುಮಾರು, ಮುಕ್ವೆ, ಮೊ: 9008942695, 9480301411
ಮಜಲುಮಾರು ಶ್ರೀ ಉಮಾಮಹೇಶ್ವರ ದೇವಾಲಯ ನರಿಮೊಗರು ಗ್ರಾಮದ ಮಜಲುಮಾರಿನಲ್ಲಿ ಉನ್ನತವಾದ ದಿಬ್ಬವೊಂದರ ಮೇಲೆ ಪೂರ್ವಾಭಿಮುಖವಾಗಿ ನಿರ್ಮಿತವಾಗಿದೆ. ಉಮಾಮಹೇಶ್ವರರು ಜತೆಯಾಗಿ ಅನುಗ್ರಹಿಸುವ ಅಪೂರ್ವ ಕ್ಷೇತ್ರ ಇದಾಗಿದೆ.
ದೊರಕಿರುವ ಆಧಾರಗಳ ಪ್ರಕಾರ ಈ ದೇವಾಲಯ ಹಲವು ಬಾರಿ ಪುನರ್ ನಿರ್ಮಿತವಾಗಿದೆ. ಶಿವಲಿಂಗ, ಪಾಣಿಪೀಠ, ಧ್ವಜಸ್ತಂಭ ಹಾಗೂ ಆನೆಕಲ್ಲುಗಳು ಬೇರೆ ಬೇರೆ ಕಾಲಘಟ್ಟದ್ದಾಗಿದೆ. ಆನೆಕಲ್ಲಿನಲ್ಲಿ ಕೆತ್ತಿರುವ ವ್ಯಾಲ ಮೃಗದ ಕೆತ್ತನೆ ಅಲಂಕಾರಿತವಾಗಿದ್ದು ಆಭರಣಗಳು ಹೊಯ್ಸಳ ಕಾಲದ ಕೆತ್ತನೆಯಾಗಿರುವುದರಿಂದ ಅಂದಾಜು ದೇವಾಲಯ ನಿರ್ಮಾಣದ ಕಾಲ ಕ್ರಿ.ಶ.೧೩ ಅಥವಾ ೧೧೪ನೇ ಶತಮಾನ ಎಂದು ಊಹಿಸಲಾಗಿದೆ. ದೇವಾಲಯ ೨೦೦೯ರಲ್ಲಿ ಎಪ್ರಿಲ್ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ನಡೆದಿದೆ.
ಪ್ರತಿ ತಿಂಗಳ ಸಂಕ್ರಮಣ ದಿನ ದುರ್ಗಾ ನಮಸ್ಕಾರ ಪೂಜೆ, ಗರಿಕೆ ಹೋಮ, ಅಪ್ಪ ಸೇವೆ, ಗಣಪತಿ ಹೋಮ, ದುರ್ಗಾ ನಮಸ್ಕಾರ ಪೂಜೆ, ಸ್ವಯಂವರ ಪೂಜೆ, ಮೃತ್ಯುಂಜಯ ಹೋಮ, ರಂಗಪೂಜೆ, ಏಕಾದಶ ರುದ್ರಾಭಿಷೇಕ ಮುಂತಾದ ವಿಶೇಷ ಸೇವೆ ನಡೆಯುತ್ತದೆ.
ಶ್ರೀ ಕ್ಷೇತ್ರದ ಕಾರಣಿಕ: ಉಮಾಮಹೇಶ್ವರರ ಮಹಿಮೆಯಿಂದ ಇಲ್ಲಿ ಹರಕೆ ಸಲ್ಲಿಸುವ ಭಕ್ತಾದಿಗಳಿಗೆ ಮಾಂಗಲ್ಯ ಭಾಗ್ಯ, ನಾಗ ಸಾನಿಧ್ಯದಿಂದ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆಯೆಂಬ ನಂಬಿಕೆಯಿದೆ.
ಸಭಾಭವನ: ದೇವಾಲಯದ ವಠಾರದಲ್ಲಿ ಶ್ರೀ ಉಮಾಮಹೇಶ್ವರ ಸಭಾಭವನವನ್ನು ನಿರ್ಮಿಸಲಾಗಿದೆ. ಸುಮಾರು ೪೦೦ ಜನರು ಕುಳಿತು ಕೊಳ್ಳಬಹುದಾದಷ್ಟು ಸ್ಥಳಾವಕಾಶ ಸಭಾಭವನದಲ್ಲಿದೆ.
ಗೌರವಾಧ್ಯಕ್ಷ – ಜಯರಾಮ ಕೆದಿಲಾಯ ಶಿಬರ, ಅಧ್ಯಕ್ಷ – ತಿರುಮಲೇಶ್ವರ ಭಟ್ ಮಜಲುಮಾರು, ಉಪಾಧ್ಯಕ್ಷ – ಕೆ. ಸುಬ್ರಮಣ್ಯ ತಂತ್ರಿ, ಕಾರ್ಯದರ್ಶಿ – ಯಂ.ವಿಶ್ವನಾಥ ಗೌಡ ಮತ್ತು ಕೋಶಾಧಿಕಾರಿ – ನವೀನ ರೈ ಶಿಬರ ಹಾಗೂ ಸದಸ್ಯರುಗಳು:ಕೆ. ಗಿರೀಶ್ ಮಣಿಯ, ಯಂ. ರವಿ ಮಣಿಯ, ಯಂ. ಸುಧೀರ್ ಹೆಬ್ಬಾರ್ ಮಣಿಯ, ಕೆ. ಯಂ. ಬೆಳಿಯಪ್ಪ ಗೌಡ ಕೆದ್ಕಾರ್ ಮತ್ತು ಯಂ. ಕೇಶವ ಪೂಜಾರಿ ಮುಕ್ವೆ, ಗುರುಪ್ರಸಾದ್ ರೈ ಬೆದ್ರಾಳ, ಪದ್ಮನಾಭ ಪೂಜಾರಿ ಬೆದ್ರಾಳ.
ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಕೈಪಂಗಳ ಬಾರಿಕೆ ಬ್ರಹ್ಮ ಬೈದರ್ಕಳ ಗರಡಿ ಉಳ್ಳಾಕುಲು ಮತ್ತು ಕೊಡಮಣಿತ್ತಾಯ ದೈವಸ್ಥಾನ
* ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳು ಇಂದಿರಾ ನಗರ
* ಶ್ರೀ ಚಂದ್ರನಾಥ ಬಸದಿ ನರಿಮೊಗರು
* ಶ್ರೀ ಶಾರದಾಂಭ ಭಜನಾ ಮಂದಿರ ಸೇರಾಜೆ
* ಶ್ರೀ ರಕ್ತೇಶ್ವರಿ ಸೇವಾ ಸಮಿತಿ ಸರ್ವೆ
* ಶ್ರೀ ಪೊಸಮೆನ್ಪದವು ಮುಗೇರಡ್ಕ
* ಶ್ರೀ ಕಲ್ಕುಡ-ಕಲ್ಲುರ್ಟಿ ದೈವಸ್ಥಾನ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಪುರುಷರಕಟ್ಟೆ
* ಶ್ರೀ ದೇವಿಕೃಪಾ ಭಜನಾ ಮಂಡಳಿ ಪುರುಷರಕಟ್ಟೆ