ಶ್ರೀ ಮದಗ ಜನಾರ್ದನ ದೇವಸ್ಥಾನ ಕುಂಜಾರು ಪಡ್ನೂರು, ಪುತ್ತೂರು ದ.ಕ.-574 220, ಫೋನ್: 235999
ಪುತ್ತೂರು-ಮಂಗಳೂರು ರಸ್ತೆಯಲ್ಲಿ ಮುರದಿಂದ ಅಂದಾಜು 2 ಕಿ.ಮೀ. ದೂರದಲ್ಲಿ ಇರುವ ಶ್ರೀ ಜನಾರ್ದನ ದೇವಸ್ಥಾನ ಸುಮಾರು ೫೦೦ ವರ್ಷಗಳ ಇತಿಹಾಸವುಳ್ಳದ್ದಾಗಿದೆ. ಇಲ್ಲಿನ ಪ್ರಧಾನ ದೇವರ ಮೂರ್ತಿ ಕೆರೆಯಲ್ಲಿ ಸಿಕ್ಕಿರುವುದರಿಂದ ಮದಗ ಶ್ರೀ ಜನಾರ್ದನ ದೇವರು ಎಂದು ಹೆಸರು ಬಂದಿದೆ ಎಂಬ ಪ್ರತೀತಿ ಇದೆ.
ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಸಂಜೆ ಭಜನೆ, ಶ್ರೀ ದೇವರಿಗೆ ವಿಶೇಷವಾಗಿ ಕಾರ್ತಿಕ ಪೂಜೆ ನಡೆಯುತ್ತದೆ. ಪ್ರತಿ ದಿನ ಬೆಳಿಗ್ಗೆ ೭ ಗಂಟೆ, ಮಧ್ಯಾಹ್ನ ೧೨ ಮತ್ತು ಸಂಜೆ ೭ಕ್ಕೆ ಪೂಜಾ ಕಾರ್ಯ ನಡೆಯುತ್ತಿದ್ದು, ಅರ್ಚಕ ಚಂದ್ರಶೇಖರ ಮಯ್ಯ ಸುಮಾರು ೧೬ ವರ್ಷಗಳಿಂದ ಈ ಕೈಂಕರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಸಭಾ ಮಂಟಪದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವರ್ಷ ದೇವಾಲಯದಲ್ಲಿ ವರಮಹಾಲಕ್ಷ್ಮೀ ವೃತ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಗಣೇಶೋತ್ಸವ ನಡೆಯುತ್ತಿದೆ. ಪ್ರತಿ ವರ್ಷ ಜನವರಿ ೬ರಂದು ಪ್ರತಿಷ್ಠಾ ದಿನೋತ್ಸವ, ಧನುರ್ಮಾಸದ ೨೪ರಂದು ಜಾತ್ರೋತ್ಸವ ನಡೆಯುತ್ತದೆ.
ಬೈಲುವಾರು ಸಮಿತಿ: ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ೧೫ ಬೈಲುವಾರು ಸಮಿತಿಯನ್ನು ರಚನೆ ಮಾಡಲಾಗಿದ್ದು, ದೇವಸ್ಥಾನದ ಅಭಿವೃದ್ಧಿ ಮತ್ತು ಇತರ ಕೆಲಸ ಕಾರ್ಯದಲ್ಲಿ ಸಹಕರಿಸುತ್ತಿದ್ದಾರೆ.
ಇಲ್ಲಿಯವರೆಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ-ಪಿ. ವೆಂಕಟ್ರಮಣ ಭಟ್ ಹಾರಕರೆ, ಸದಸ್ಯರುಗಳು: ಅರ್ಚಕ ಚಂದ್ರಶೇಖರ ಮಯ್ಯ ಕುಂಜಾರು, ಚೈತ್ರ ನಾರಾಯಣ ಸೇಡಿಯಾಪು, ಯಶೋಧರ ನಾಯ್ಕ, ಡೀಕಯ್ಯ ಪೆರ್ವೋಡಿ, ರಾಧಾಕೃಷ್ಣ ಗೌಡ ಕುಂಜಾರು, ಜಯಶ್ರೀ ಸೇಡಿಯಾಪು, ಭವ್ಯ ಮಾಲ್ತೊಟ್ಟು, ಶ್ರೀಧರ ಸಪಲ್ಯ ಕುಂಜಾರು ಸೇವೆ ಸಲ್ಲಿಸಿದ್ದು, ಪ್ರಸ್ತುತ ಸಮಿತಿಯ ಆಡಳಿತಾವಧಿ ಮುಕ್ತಾಯವಾದುದರಿಂದ ಬನ್ನೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎನ್. ಶಾಂತರಾಮ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು:
* ಶ್ರೀ ಧೂಮಾವತಿ ದೈವಸ್ಥಾನ ಎರ್ಮುಂಜ ಪಳ್ಳ
* ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂದಿರ ಪಡ್ಡಾಯೂರು
* ಶ್ರೀ ಪಡ್ನೂರು ಕಡವ ಶಿರಾಡಿ ದೈವಸ್ಥಾನ, ಮೊ: 9611637667
* ಶ್ರೀ ರುದ್ರಾಂಡಿ, ನೇತ್ರಾಂಡಿ ದೈವಸ್ಥಾನ ಪಡ್ಡಾಯೂರು