ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಸುರುಳಿ, ಪೆರಾಬೆ ಗ್ರಾಮ, ಪುತ್ತೂರು ತಾ., ದ.ಕ.-574 285
ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಸುರುಳಿ, ಪೆರಾಬೆ ಗ್ರಾಮ, ಪುತ್ತೂರು ತಾ., ದ.ಕ.-574 285
ಪುತ್ತೂರು ತಾಲೂಕು ಪೆರಾಬೆ ಗ್ರಾಮದ ಸುರುಳಿ ಬಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಸುಮಾರು ೬ ಶತಮಾನಗಳಷ್ಟು ಹಿಂದೆ ಋಷಿ ಮುನಿಗಳಿಂದ ಸ್ಥಾಪಿಸಲ್ಪಟ್ಟು ಪೂಜಿಸಿದ ಇತಿಹಾಸವಿದೆ. ಯಾವುದೋ ಕಾರಣದಿಂದ ಒಂದು ಶತಮಾನಗಳಿಂದೀಚೆಗೆ ದೇವಾಲಯವು ಪಾಳು ಬಿದ್ದು ಬನದ ಮಧ್ಯೆ ಶ್ರೀ ದೇವರು ಭಕ್ತಾದಿಗಳ ಪ್ರಾರ್ಥನೆ ಸ್ವೀಕರಿಸುತ್ತಿದ್ದರು. ಈ ಒಂದು ಶತಮಾನ ಸಂಪತ್ತಿನ ನಿಧಿಯಾಗಿರಬೇಕಾಗಿದ್ದ ಸುರುಳಿಯಲ್ಲಿ-ಜನರಿಗೆ ಸೂರಿಲ್ಲ, ಕುಡಿಯಲು ನೀರಿಲ್ಲ, ಸುತ್ತಲ ಗದ್ದೆಯಲ್ಲಿ ಬೆಳೆಯಿಲ್ಲ, ಬೆಳೆದ ಬೆಳೆ ಕೈಗಿಲ್ಲ, ಕೈಗೆ ಬಂದದ್ದು ಬಾಯ್ಗಿಲ್ಲ. ಸುಖ ಶಾಂತಿ ನೆಮ್ಮದಿಗಳಿಲ್ಲ-ಮನೆ ಮನೆಯಲ್ಲಿ ನಾಗಗಳ ದರ್ಶನ.
ಇಂತಹ ಪರಿಸ್ಥಿತಿಯಲ್ಲಿ ತಮ್ಮ ಬಡತನ ಲೆಕ್ಕಿಸದೆ ಊರ ಜನ ಸ್ವಾಮಿಗೆ ದೇವಸ್ಥಾನ ಕಟ್ಟಿ ನೆಲೆಗೊಡಬೇಕೆಂದು ಸಂಕಲ್ಪಿಸಿ, ಊರ ಪರವೂರ ಜನರ ಸಹಕಾರದೊಂದಿಗೆ ದೇವಸ್ಥಾನ ನಿರ್ಮಿಸಿ ೧೯೮೬ನೇ ಏಪ್ರಿಲ್ ೧೫ರಂದು ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವಿಜೃಂಭಣೆಯೊಂದಿಗೆ ನೆರವೇರಿತು. ಅಂದಿನಿಂದ ಊರಲ್ಲಿ, ಊರ ಜನರಲ್ಲಿ ಹೊಸ ಚೈತನ್ಯ ಮೂಡಿ, ಸೂರಿಲ್ಲದವರಿಗೆ ಸೂರು, ನೀರಿಲ್ಲದವರಿಗೆ ನೀರು, ಹಚ್ಚ ಹಸಿರಾದ ಪೈರು ಬಡತನದಿಂದ ಬೆಂದ ಜೀವಕ್ಕೆ ಹೊಸ ಉಸಿರು, ಎಲ್ಲಿ ನೋಡಿದರಲ್ಲಿ ಕಂಗು, ತೆಂಗು ಸಕಲ ಸಮೃದ್ಧಿಯನ್ನು ಶ್ರೀ ದೇವರು ಅನುಗ್ರಹಿಸಿದ. ಶ್ರೀ ಕುಡುಪು ನರಸಿಂಹ ತಂತ್ರಿಗಳವರ ಮಾರ್ಗದರ್ಶನದಂತೆ ದಿನಾಂಕ ೧೭-೦೨-೨೦೦೦ದಂದು ಶ್ರೀ ಸ್ವಾಮಿ ೨ನೇ ಬಾರಿಗೆ ಬ್ರಹ್ಮಕಲಶೋತ್ಸವವು ದೈವ ಸಂಕಲ್ಪದಂತೆ ವಿಜೃಂಭಣೆಯಿದ ನಡೆದಿರುತ್ತದೆ. ಮೊದಲೆಮಾರು ರಾಮಮೋಹನ ರೈಯವರು ಆನುವಂಶಿಕ ಮೊಕ್ತೇಸರರಾಗಿದ್ದು, ಕುಪ್ಲಾಜೆ ಸುಬ್ರಹ್ಮಣ್ಯ ಉಪಾಧ್ಯಾಯರು ಪ್ರಧಾನ ಅರ್ಚಕರಾಗಿ ಪೂಜಾ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕುಪ್ಲಾಜೆ ಉದಯಕುಮಾರ್ರವರು ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗಣೇಶ ಚತುರ್ಥಿ, ವಾರ್ಷಿಕ ಷಷ್ಠಿ ಮಹೋತ್ಸವ, ಶ್ರೀ ದೇವರ ವಾರ್ಷಿಕ ಬಲಿ ಉತ್ಸವ, ಪ್ರತಿಷ್ಠಾ ದಿನೋತ್ಸವ, ನಾಗರಪಂಚಮಿ, ದೀಪಾವಳಿಯಂತಹ ವಿಶೇಷ ಉತ್ಸವಗಳಲ್ಲದೆ ಪ್ರತಿನಿತ್ಯವೂ ಭಕ್ತಾದಿಗಳಿಂದ ಸೇವೆಯನ್ನು ಸ್ವೀಕರಿಸುತ್ತಿರುವ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಯು ‘ಭಕ್ತಾಭೀಷ್ಠದಾಯಕ ಸುಬ್ರಹ್ಮಣ್ಯನಾಗಿ ಕಾಪಾಡುತ್ತಿದ್ದಾನೆ.
ಅರ್ಚಕರು – ಕೆ. ಸುಬ್ರಹ್ಮಣ್ಯ ಉಪಾಧ್ಯಾಯ, ಮಧ್ವ ವಲ್ಲಭ, ಕುಪ್ಲಾಜೆ ಮನೆ (9480277877), ಅನುವಂಶಿಕ ಆಡಳ್ತೆ ಮೊಕ್ತೇಸರರು – ಮೊದಳೆಮಾರು ರಾಮಮೋಹನ್ ರೈ ಸುರುಳಿ (08251-263303, 9964357203)
ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ಅರಸು ಉಳ್ಳಾಯ ಮತ್ತು ಪರಿವಾರ ದೈವಗಳು ಪೂಂಜಸ್ಥಾನ ಪೆರಾಬೆ
* ಧರ್ಮದೈವ ದೂಮಾವತಿ ಮತ್ತು ಪರಿವಾರ ದೈವಗಳು ಹಾಗೂ ಬ್ರಹ್ಮಬೈದರ್ಕಳ ಗರಡಿ ಮನವಳಿಕೆ
* ಶ್ರೀ ಮಹಿಷಾಂದಾಯ ದೈವಸ್ಥಾನ
* ಶ್ರೀ ಬ್ರಹ್ಮಬೈದರ್ಕಳ ನೇತ್ರಾವತಿ ಪೇರಮುಂಡ ಗರಡಿ ಅಗತ್ತಾಡಿ
* ಶ್ರೀ ಕೋಟಿ ಚೆನ್ನಯ ಗರಡಿ ಮನವಳಿಕೆ ಪೆರಾಬೆ
* ಶ್ರೀ ಮುಡಿಪಿನಾರು ಉಳ್ಳಾಕ್ಲು ದೈವಸ್ಥಾನ ಮುಡಿಪಿನಡ್ಕ