ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಪಡುಮಲೆ, ಫೋನ್: 289033
ಪುತ್ತೂರಿನಿಂದ ಸುಳ್ಯ ಮಡಿಕೇರಿ ಮಾರ್ಗದಲ್ಲಿ ಕೌಡಿಚ್ಚಾರ್ ಎಂಬಲ್ಲಿ ಪೆರಿಗೇರಿ ಮಾರ್ಗವಾಗಿ ಸಾಗಿದಾಗ ಸಿಗುವ ಬಡಗನ್ನೂರು ಗ್ರಾಮದ ಮೈಂದನಡ್ಕ ಎಂಬಲ್ಲಿ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನವಿದೆ.
ಇಲ್ಲಿ ದೇವಳ ಮತ್ತು ದೇವರು ಪಡು ದಿಕ್ಕಿಗೆ ಮುಖ ಮಾಡಿ ಪ್ರತಿಷ್ಠಾಪನೆಗೊಂಡಿವೆ. ಕೂವೆ ಶಾಸ್ತಾರ ಶ್ರೀ ವಿಷ್ಣುಮೂರ್ತಿ ಸ್ವಾಮಿ ಇಲ್ಲಿನ ಪ್ರಧಾನ ದೇವರು. ದೇವಳದ ಒಳಾಂಗಣದಲ್ಲಿ ಪೂಮಾಣಿ ಕಿನ್ನಿಮಾಣಿ ದೈವಗಳ ಭಂಡಾರ ಇರುವ ಗುಡಿ, ಹೊರಾಂಗಣದಲ್ಲಿ ಶಾಸ್ತಾರ ಗುಡಿ, ಈಶಾನ್ಯ ಮೂಲೆಯಲ್ಲಿ ಬ್ರಹ್ಮ ರಾಕ್ಷಸ (ಬುದ್ಧಿವಂತ)ನ ಗುಡಿ ಇವೆ. ದೇವಳದಿಂದ ೧೧/೨ ಕಿ.ಮೀ. ದೂರದಲ್ಲಿ ಬದಿನಾರು ಎಂಬಲ್ಲಿ ಪೂಮಾಣಿ-ಕಿನ್ನಿಮಾಣಿ ದೈವಸ್ಥಾನವಿದೆ.
ಪರ್ವದಿನಗಳಂದು ಪಂಚಕಜ್ಜಾಯ, ಬಲಿವಾಡು, ಕುಂಕುಮಾರ್ಚನೆ, ಕಾರ್ತಿಕ ಪೂಜೆಗಳಲ್ಲದೆ ಭಕ್ತಾದಿಗಳು ಅಪೇಕ್ಷಿಸಿದ ಇತರ ಸೇವಾ ವ್ಯವಸ್ಥೆಗಳೂ ಇವೆ. ಪ್ರತಿ ವರ್ಷ ಧನು ಮಾಸ ೨೮ರಿಂದ ಮಕರ ಮಾಸ ೫ರವರೆಗೆ (ಜನವರಿ ೧೨ರಿಂದ ೧೯ರ ತನಕ) ವರ್ಷಾವಧಿ ಜಾತ್ರೆ, ೧೨, ೧೩, ೧೪ರಂದು ದೇವಳದಲ್ಲಿ ಮತ್ತು ೧೫ರಿಂದ ೧೯ರವರೆಗೆ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಬಳಿ ನೇಮೋತ್ಸವ ನಡೆಯುತ್ತದೆ.
ವ್ಯವಸ್ಥಾಪನಾ ಸಮಿತಿ: ಮನೋಜ್ ರೈ ಪೇರಾಲು-ಗೌರವಾಧ್ಯಕ್ಷರು, ಕುದ್ಕಾಡಿ ನಾರಾಯಣ ರೈ ಮಾನಸ-ಅಧ್ಯಕ್ಷರು, ಕೆ.ಸಿ. ಪಾಟಾಳಿ ಪಡುಮಲೆ-ಸಂಚಾಲಕರು, ಶೇಖರ್ ನಾರಾವಿ ಪುತ್ತೂರು-ಉಪಾಧ್ಯಕ್ಷರು, ಲಕ್ಷ್ಮೀನಾರಾಯಣ ರಾವ್ ಪಡುಮಲೆ-ಕೋಶಾಧಿಕಾರಿ, ಉಲ್ಲಾಸ್ ಕೋಟ್ಯಾನ್ ಪುತ್ತೂರು-ಕಾರ್ಯದರ್ಶಿ, ಗುರುಪ್ರಸಾದ್ ರೈ ಕುದ್ಕಾಡಿ-ಜೊತೆ ಕಾರ್ಯದರ್ಶಿ, ವಿಶ್ವನಾಥ ಪೂಜಾರಿ ಪೂಜಾರಿಮೂಲೆ-ಸಂಘಟನಾ ಕಾರ್ಯದರ್ಶಿ, ಸತೀಶ್ ರೈ ಕಟ್ಟಾವು-ಜೊತೆ ಕಾರ್ಯದರ್ಶಿ, ಪ್ರಶಾತ್ ಕುಮಾರ್ ಚಂದುಕೂಡ್ಲು-ಕಾನೂನು ಸಲಹೆಗಾರರು, ಸದಸ್ಯರು-ರಘುನಾಥ ರೈ ನುಳಿಯಾಲು, ಕೆ. ಸುಬ್ಬಣ್ಣ ರೈ ಮೇಗಿನಮನೆ, ತಿಲೋತ್ತಮ ಎಸ್. ರೈ ಪಡುಮಲೆ, ನಾರಾಯಣ ಪೂಜಾರಿ ಸರೊಳಿಮೂಲೆ, ವಿಶ್ವನಾಥ ಗೌಡ ಅಡೀಲು, ನಾರಾಯಣ ಪಾಟಾಳಿ ಪಟ್ಟೆ, ನಾಗಪ್ಪ ಪರವ ಪಡುಮಲೆ, ಅಪ್ಪಯ ನಾಯ್ಕ ತಲೆಂಜಿ.