ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನ, ಬನ್ನೂರು ಗ್ರಾಮ, ಪುತ್ತೂರು, ದ.ಕ. ಫೋನ್: 08251-203060, 9480528101
ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ಕೃಷ್ಣನಗರದಿಂದ ಬನ್ನೂರು ಶಾಲೆಯಾಗಿ ಪೆರ್ನೆಗೆ ಹೋಗುವ ದಾರಿಯಲ್ಲಿ ಕೃಷ್ಣನಗರ ದಿಂದ ಒಂದು ಕಿ.ಮೀ. ದೂರದಲ್ಲಿ ಈ ದೇವಸ್ಥಾನವಿದೆ. ಸದಾಶಿವ, ಗಣಪತಿ, ದೈವಗಳಾದ ಜೂಮಾವತಿ, ಬಿರ್ಮೆರ್, ಕಲ್ಕುಡ ಮತ್ತು ಪರಿವಾರ ದೈವಗಳಿವೆ. ಈ ದೇವಸ್ಥಾನವು ಸುಮಾರು ೧೬೦೦ ವರ್ಷ ಹಳೆಯದಾಗಿದೆ. ವರ್ಷಾವಧಿಯಾಗಿ ಸುಗ್ಗಿ ತಿಂಗಳ ಹುಣ್ಣಿಮೆ ಎರಡು ದಿನಕ್ಕೆ ಮೊದಲು ರಂಗಪೂಜೆ, ಮಹಾಪೂಜೆ, ಭಕ್ತರಿಂದ ಕಾರ್ತಿಕ ಪೂಜೆ, ಗಣಹೋಮ, ರುದ್ರಾಭಿಷೇಕ, ವರ್ಷಕ್ಕೊಮ್ಮೆ ಸಾರ್ವಜನಿಕ ಸತ್ಯನಾರಾಯಣ ಪೂಜೆ ಇತ್ಯಾದಿಗಳು ನಡೆಯುತ್ತವೆ. ಪ್ರತಿದಿನ ಬೆಳಿಗ್ಗೆ ೯-೩೦ರಿಂದ ಪೂಜೆ ನಡೆಯುತ್ತದೆ.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ – ಹೆಚ್. ರಾಮಣ್ಣ ಗೌಡ, ಸದಸ್ಯರುಗಳು: ಶಿವಪ್ರಸಾದ್ ಭಟ್, ರಮೇಶ್ ಅಡೆಂಚಿಲಡ್ಕ, ಮೇಲ್ಮಜಲು ಪಿ. ಪ್ರೇಮ ಬಾಸ್ಕರ, ಯು. ಹೇಮಲತಾ ಹೆಗ್ಡೆ ನೆಕ್ಕಿಲ, ರತ್ನಾಕರ ಬಿ. ರೈ ಕೆಳಗಿನಮನೆ ಸೇಡಿಯಾಪು, ಬಿ. ಶೀನಪ್ಪ ಬದಿಯಡ್ಕ, ರಾಮಣ್ಣ ಗೌಡ ಗೋಳ್ತಿಲ, ಕೆ. ರಾಮಣ್ಣ ಗೌಡ ಕಂಜೂರು.
ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನ, ಬನ್ನೂರು, ಪುತ್ತೂರು. ಮೊ: 9449164602 (ಶಿವಶಂಕರ್ ಭಟ್), 9480016036 (ರಾಮಕೃಷ್ಣ ಭಟ್)
ಪುತ್ತೂರು ಬಸ್ ನಿಲ್ದಾಣದಿಂದ ೩ ಕಿ.ಮೀ. ದೂರದ ಬನ್ನೂರು ಕರ್ಮಲ ಸಮೀಪದ ಭಾರತೀ ನಗರದಲ್ಲಿ ಅಪೂರ್ಣವಾದ ಶಕ್ತಿ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನವಿದೆ. ೨೦೦೭ರ ಮಾರ್ಚ್ ೫ರಂದು ಹೊಸನಗರ ಶ್ರೀ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರ ಅಮೃತ ಹಸ್ತದಿಂದ ಶ್ರೀ ಬಲಮುರಿ ವಿದ್ಯಾಗಣಪತಿ ದೇವರ ಪ್ರತಿಷ್ಠಾಪನೆ ನೆರವೇರಿತು. ದೇವಳದಲ್ಲಿ ಗಣೇಶೋತ್ಸವದಂದು ಗಣಪತಿ ಹವನ, ರಾತ್ರಿ ರಂಗಪೂಜೆ, ಕಾರ್ತಿಕ ಮಾಸದಲ್ಲಿ ಒಂದು ತಿಂಗಳು ನಿರಂತರ ರಾತ್ರಿ ಕಾರ್ತಿಕ ಪೂಜೆ ನಡೆಯುತ್ತದೆ. ಪ್ರತಿ ವರ್ಷ ಮಾ.೫ರಂದು ಪ್ರತಿಷ್ಠಾವರ್ಧಂತ್ಯುತ್ಸವ ನಡೆಯುತ್ತಿದ್ದು ೨೦೦೯ರ ಮಾರ್ಚ್ ೩ರಂದು ಶ್ರೀ ದೇವರಿಗೆ ‘ಮೂಡಪ್ಪ ಸೇವೆ’ ನಡೆಸಲಾಗಿದೆ. ಅಲ್ಲದೆ ಶಾಂತಿ ಹೋಮಗಳು, ಸತ್ಯನಾರಾಯಣ ಪೂಜೆ, ಮೃತ್ಯುಂಜಯ ಹೋಮ ಇಲ್ಲಿ ನಡೆಯುತ್ತಿದೆ.
ಪ್ರಸ್ತುತ ಈ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಶಿವಶಂಕರ ಬೋನಂತಾಯ, ಉಪಾಧ್ಯಕ್ಷರಾಗಿ ಪುಳು ಈಶ್ವರ ಭಟ್, ರವಿಶಂಕರ ಭಟ್ ಉಪ್ಪಂಗಳ, ಮಾಂಬಾಡಿ ಗಣಪತಿ ಭಟ್, ಕಾಡೂರು ಶಿವ ಕುಮಾರ್, ಡಿ.ಕೇಶವ ಮೂರ್ತಿ, ಎಚ್. ಶಾಮ ಭಟ್, ಕೆ.ಎನ್ ಶಾಸ್ತ್ರೀ, ಕೆ.ಬಿ ದಿವಾಕರ್, ವಿಶ್ವನಾಥ, ಕೃಷ್ಣಪ್ಪ ಗೌಡ, ಕೆ. ಚಂದ್ರಶೇಖರ ಭಟ್, ಕರಿಯಾಲ ರಾಮ ಪ್ರಸಾದ್, ಡಿ.ಕೃಷ್ಣ ಭಟ್, ಬಾಲ ಸುಭ್ರಹ್ಮಣ್ಯ ಭಟ್, ಎಂ.ಜೆ ಜಯರಾಮ ಭಟ್, ಸತೀಶ್, ಗಣೇಶ್ ಕರ್ಮಲ ಶ್ರೀಕೃಷ್ಣ ಶಾಸ್ತ್ರೀ ಆಡಳಿತ ಮಂಡಳಿ ಸದಸ್ಯರಾಗಿ ಹಾಗೂ ದೇವಸ್ಥಾನದ ಮ್ಯಾನೇಜರ್ ಆಗಿ ಕೆ. ರಾಮಕೃಷ್ಣ ಭಟ್ ಸೇವೆ ಸಲ್ಲಿಸುತ್ತಿದ್ದಾರೆ.
ಕರ್ಮಲ ಶ್ರೀ ಮಹಮ್ಮಾಯಿ ಮಾರಿಯಮ್ಮ ದೇವಸ್ಥಾನ, ಕರ್ಮಲ, ಬನ್ನೂರು, ಪುತ್ತೂರು, ದ.ಕ. ಮೊ: 9480119404
ಬನ್ನೂರು ಸಮೀಪದಲ್ಲಿ ಶ್ರೀ ಮಹಮ್ಮಾಯಿ ಮಾರಿ ಯಮ್ಮ ದೇವಿಯ ದೇವಸ್ಥಾನ ವಿದೆ. ದೇವಸ್ಥಾನಕ್ಕೆ ಸಂಬಂಧಿಸಿ ಸಮೀಪ ದಲ್ಲಿ ಭಂಡಾರದ ಚಾವಡಿಯಿದೆ. ದೇವಸ್ಥಾನ ಹಾಗೂ ಭಂಡಾರದ ಚಾವಡಿ ಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ಮಾರಿ ಪೂಜೆ, ಪತ್ತನಾಜೆ, ನಾಗರ ಪಂಚಮಿ, ನವರಾತ್ರಿ ಉತ್ಸವಗಳು ನಡೆಯುತ್ತಿವೆ. ತಿಂಗಳ ಸಂಕ್ರಮಣ ಸೇವೆ ಹಾಗೂ ಪ್ರತಿ ಶುಕ್ರವಾರದಂದು ವಿಶೇಷ ಪೂಜೆಗಳು ನಡೆಯುತ್ತವೆ. ದೇವಸ್ಥಾನದ ಆಡಳಿತ ಮಂಡಳಿಯ ಗೌರವಾಧ್ಯಕ್ಷರಾಗಿ ಡಾ. ಎಂ.ಕೆ. ಪ್ರಸಾದ್ ಭಂಡಾರಿ, ಅಧ್ಯಕ್ಷರಾಗಿ ಗಣೇಶ್ ಕರ್ಮಲ, ಉಪಾಧ್ಯಕ್ಷರಾಗಿ ರಾಜಣ್ಣ, ಕಾರ್ಯದರ್ಶಿಯಾಗಿ ಚಂದ್ರಶೇಖರ್ ಕೆ.ಬಿ., ಜತೆ ಕಾರ್ಯದರ್ಶಿಯಾಗಿ ಕಿಟ್ಟು ಕೆ., ಕೋಶಾಧಿಕಾರಿಯಾಗಿ ಹರೀಶ್ ಕರ್ಮಲ ಹಾಗೂ ಟ್ರಸ್ಟಿಗಳಾಗಿ ಕೆ.ಎಸ್. ಸುರೇಶ್, ಬಿ.ಕೆ. ರಾಮಚಂದ್ರ, ಅಶೋಕ ಮತ್ತು ಶ್ರೀಮತಿ ಸುಜಾತ ಸುಂದರ್ ಸೇವೆ ಸಲ್ಲಿಸುತ್ತಿದ್ದಾರೆ.
ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ಕಂಜೂರು ಧೂಮಾವತಿ ದೈವಸ್ಥಾನ, ಕುಂಟ್ಯಾನ, ಬನ್ನೂರು ಪುತ್ತೂರು ದ.ಕ.
* ಶ್ರೀ ಶಿವಪಾರ್ವತಿ ಮಂದಿರ ಬನ್ನೂರು
* ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬನ್ನೂರು, ಕರ್ಮಲ