ಶ್ರೀ ಉಮಾಮಹೇಶ್ವರಿ ದೇವಸ್ಥಾನ
ಬಲ್ಯ ಅಂಚೆ ಪುತ್ತೂರು ದ.ಕ.-೫೭೪ ೨೨೧, ಫೋ: ೦೮೨೫೧-೨೬೫೨೪೬
ಪುತ್ತೂರು ತಾಲೂಕಿನ ಬಲ್ಯ ಗ್ರಾಮದಲ್ಲಿ ಯಾವುದೇ ದೇವಾಲಯವಿದ್ದಿರಲಿಲ್ಲ. ಭಕ್ತ ಜನರಿಗೆ ಆರಾಧಿಸಿಕೊಂಡು ಬರಲು ಬಲ್ಯ ಗ್ರಾಮಸ್ಥರಿಗೊಂದು ದೇವಾಲಯದ ಅಗತ್ಯವಿದೆಯೆಂಬುದನ್ನು ಮನಗಂಡು ಅಷ್ಟಮಂಗಲ ಪ್ರಶ್ನೆಯನ್ನಿರಿಸಿದರು. ಪ್ರಶ್ನೆಯಲ್ಲಿ ಕಂಡುಬಂದಂತೆ ಸುಮಾರು ೫೦೦ ವರ್ಷಗಳ ಹಿಂದೆ ಗ್ರಾಮದಲ್ಲಿ ದೇವಾಲಯ ಇತ್ತೆಂದೂ, ಅದು ಕಾರಣಾಂತರಗಳಿಂದ ಸರ್ವನಾಶ ಹೊಂದಿತು ಎಂದು ತಿಳಿದುಬಂದಿದೆ. ಬಲ್ಯ ಗ್ರಾಮಸ್ಥ ದಿ. ಪ್ರಪುಲ್ಲಚಂದ್ರ ರೈ ಮಾಣಿಗ ಹಾಗೂ ಸುಬ್ಬಣ್ಣ ಭಟ್ ಗೋವಿಂದ ಕಟ್ಟೆ ನೇತೃತ್ವದಲ್ಲಿ ನೂತನ ದೇವಾಲಯ ನಿರ್ಮಾಣಕ್ಕಾಗಿ ಶ್ರೀ ಉಮಾಮಹೇಶ್ವರ ಸೇವಾ ಸಮಿತಿ ರಚಿಸಿ ಕಾರ್ಯೋನ್ಮುಖರಾದರು, ೨೦೦೭ರ ಫೆಬ್ರವರಿಯಲ್ಲಿ ಪ್ರತಿಷ್ಠಾ ಬ್ರಹ್ಮಕಲಶ ನಡೆದು ಇದೀಗ ದೇವಳದಲ್ಲಿ ತ್ರಿಕಾಲ ಪೂಜೆ ನಡೆಯುತ್ತಿದೆ. ಮಕರ ಮಾಸದಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಜಾತ್ರೋತ್ಸವ
ನಡೆಯುತ್ತದೆ. ನವರಾತ್ರಿ ಪೂಜೆ ಇಲ್ಲಿನ ವಿಶೇಷ. ದೀಪಾವಳಿ, ಚೌತಿ, ವರಮಹಾಲಕ್ಷಿ ಪೂಜೆ ನೆರವೇರುತ್ತದೆ. ಶ್ರೀ ಕ್ಷೇತ್ರದ ವಿಶೇಷ ಎಂಬಂತೆ ಸ್ವಯಂಪಾರ್ವತಿ ಪೂಜೆ ಭಕ್ತರ ಅಭೀಷ್ಟೆಯಂತೆ ನಡೆಯುತ್ತಿದೆ. ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ನ ಅಧ್ಯಕ್ಷರಾಗಿ ಚಿತ್ತರಂಜನ್ ರೈ ಮಾಣಿಗ, ಕಾರ್ಯದರ್ಶಿಯಾಗಿ ನಾರಾಯಣ ಎನ್. ಬಲ್ಯ ಕೊಲ್ಲಿಮಾರು, ಕೋಶಾಧಿಕಾರಿಯಾಗಿ ರಾಜಾರಾಮ ಭಟ್ ಹೊಸಮಠ ಹಾಗೂ ಸದಸ್ಯರಿದ್ದಾರೆ. ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ಉತ್ಸವ ಸಮಿತಿ, ವರಮಹಾಲಕ್ಷ್ಮೀ ವೃತ ಪೂಜಾ ಸಮಿತಿ, ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಸಕ್ರಿಯವಾಗಿ ಇದೆ.
ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ಅಯ್ಯಪ್ಪ ಭಜನಾ ಮಂದಿರ ಹೊಸ್ಮಠ ಬಲ್ಯ