ಮಾಡ್ನೂರು ಗ್ರಾಮ

ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಕಾವು, ಅಂಚೆ : ಕಾವು – 574 223, ಪುತ್ತೂರು ದ.ಕ., ಫೋನ್: 283462, 9741669688

ಪುತ್ತೂರು-ಸುಳ್ಯ ರಸ್ತೆಯಲ್ಲಿ ಪುತ್ತೂರಿನಿಂದ 16 ಕಿ.ಮೀ. ದೂರ ಚಲಿಸಿ ಕಾವು ಪೇಟೆಯಿಂದ ೧ ಕಿ.ಮೀ. ಹಾಗೂ ಕಾವು ವಿಜಯಾ ಬ್ಯಾಂಕ್ ಬಳಿಯಿಂದ ಒಂದೂವರೆ ಫರ್ಲಾಂಗ್ ದೂರ ಚಲಿಸಿದಾಗ ಈ ಪುಣ್ಯಕ್ಷೇತ್ರ ಸಿಗುತ್ತದೆ.
ಇಲ್ಲಿ ಶ್ರೀ ಪಂಚಲಿಂಗೇಶ್ವರ ದೇವರು ಪ್ರಧಾನ ದೇವರು. ಮಹಾಗಣಪತಿ, ಪರಿವಾರ ದೈವಗಳಾದ ರಾಜಂ ದೈವ, ಉಳ್ಳಾಕುಲು, ಅಲ್ಲದೆ ಗುಳಿಗ ದೈವಗಳನ್ನು ಆರಾಧಿಸಲಾಗುತ್ತದೆ.
ರುದ್ರಾಭಿಷೇಕ, ಸೋಮವಾರ ಪೂಜೆ, ಗಣಹೋಮ, ಮಂಗಳಾರತಿ, ಶನಿಪೂಜೆ ಇತ್ಯಾದಿ ಪೂಜೆಗಳು ನಡೆಯುತ್ತವೆ. ವಿಶೇಷವಾಗಿ ಧನುಪೂಜೆ, ಶನಿಪೂಜೆ, ನವರಾತ್ರಿ ಪೂಜೆ, ಸೋಣ ಶನಿವಾರಗಳು, ಶಿವರಾತ್ರಿ, ಸತ್ಯನಾರಾಯಣ ಪೂಜೆ, ವರ್ಷಾವಧಿ ಜಾತ್ರೋತ್ಸವ ನೇಮ ನಡೆಯುತ್ತದೆ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ನಿತ್ಯಪೂಜೆ ನಡೆಯುತ್ತದೆ. ದೇವಳದಲ್ಲಿ ಶುಭಕಾರ್ಯಗಳಿಗಾಗಿ ಉತ್ತಮ ವ್ಯವಸ್ಥೆಯಿರುವ ಸಭಾಂಗಣವಿದೆ.
ವ್ಯವಸ್ಥಾಪನಾ ಸಮಿತಿ: ನನ್ಯ ಶ್ರೀಪತಿ ಮೂಡೆತ್ತಾಯ (ಅಧ್ಯಕ್ಷರು), ಶಿವಪ್ರಸಾದ ಕಡಮಣ್ಣಾಯ, ಕೆ. ಚಂದ್ರಶೇಖರ ರಾವ್ ನಿಧಿಮುಂಡ, ಶರತ್ ಕುಮಾರ್ ರೈ, ರಾಮಚಂದ್ರ ಭಟ್ ಮಳಿ, ರವೀಂದ್ರ ಪೂಜಾರಿ ಮಂಜಕೊಟ್ಯ, ಕೆ. ಪೂವಪ್ಪ ನಾಯ್ಕ ಕುಂಞಕುಮೇರು, ಶ್ರೀಮತಿ ಶ್ಯಾಮಲಾ ವೆಂಕಟ್ರಮಣ ಭಟ್ ಪಟ್ಟೆ, ಶ್ರೀಮತಿ ಪ್ರೇಮಾ ಗಂಗಾಧರ ಗೌಡ ಚಾಕೋಟೆ (ಸದಸ್ಯರು).


ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-

* ದರ್ಬೆತ್ತಡ್ಕ ನನ್ಯ ಉಳ್ಳಾಕ್ಲು ಮಾಡ, ಕಾವು ಅಂಚೆ, ಪುತ್ತೂರು ದ.ಕ. 574223
* ವಿಷ್ಣುಮೂರ್ತಿ ದೈವಸ್ಥಾನ ನೆಲ್ಲಿಮಜಲು (ಒತ್ತೆಕೋಲ ಸ್ಥಾನ), ಕಾವು ಅಂಚೆ, ಪುತ್ತೂರು ದ.ಕ. 574223, 9741703540 (ಬಾಲಕೃಷ್ಣ)
* ಅಯ್ಯಪ್ಪ ಭಜನಾ ಮಂದಿರ ಅಮ್ಚಿನಡ್ಕ, ಕಾವು ಪೋಸ್ಟ್, ಪುತ್ತೂರು ದ.ಕ. 574223, 9902196789  (ದಿವ್ಯನಾಥ ಶೆಟ್ಟಿ)
* ಗಣೇಶ ಭಜನಾ ಮಂದಿರ, ಅಮ್ಚಿನಡ್ಕ, ಕಾವು ಪೋಸ್ಟ್, ಪುತ್ತೂರು ದ.ಕ., 9902196789 (ದಿವ್ಯನಾಥ ಶೆಟ್ಟಿ)
* ಅಯ್ಯಪ್ಪ ಭಜನಾ ಮಂದಿರ ಕೆರೆಮಾರು, ಕಾವು ಪೋಸ್ಟ್, ಪುತ್ತೂರು ದ.ಕ. 574223
* ಮಾರಿಯಮ್ಮ ದೈವಸ್ಥಾನ, ಮಾಡ್ನೂರು, ಕಾವು ಪುತ್ತೂರು 574223
* ಮುತ್ತು ಮಾರಿಯಮ್ಮ ದೇವಸ್ಥಾನ ಕಾವು ಸಿ.ಆರ್.ಸಿ. ಕಾಲೊನಿ, ಕಾವು ಅಂಚೆ, ಪುತ್ತೂರು ದ.ಕ. -574223, 8971323341
* ರುದ್ರಚಾಮುಂಡಿ ದೈವಸ್ಥಾನ ಅಮ್ಚಿನಡ್ಕ ಟಶ್ರೀ ಮಹಾವಿಷ್ಣು ಕ್ಷೇತ್ರ ಮಾಯಿಲಕೊಚ್ಚಿ