ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನ ನರಿಮೊಗರು, ಮುಂಡೂರು ಗ್ರಾಮ, ಪುತ್ತೂರು, ಮೊ: 9632654870
ಮುಂಡೂರು ಗ್ರಾಮದ ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನವು ಪ್ರಾಚೀನ ಶಿಲಾಶಾಸನದ ಪ್ರಕಾರ ಸುಮಾರು ೯೫೦ ವರ್ಷಗಳ ಇತಿಹಾಸ ಹೊಂದಿದ್ದು ಶ್ರೀ ಮೃತ್ಯುಂಜಯೇಶ್ವರ, ಶ್ರೀ ಗಣಪತಿ ದೇವರು, ಶ್ರೀ ದುರ್ಗೆ, ಶ್ರೀ ಶಾಸ್ತಾವು, ಶ್ರೀ ನಾಗದೇವತೆ, ದೈವಗಳ ದಿವ್ಯ ಸಾನಿಧ್ಯವುಳ್ಳ, ಶ್ರೀ ದೇವರ ಪವಿತ್ರ ಕೆರೆಯಿರುವ ಪ್ರಾಚೀನ ಕಾರಣಿಕ ಕ್ಷೇತ್ರವಾಗಿದೆ. ಈ ದೇವಾಲಯವು ಹಲವು ಗ್ರಾಮಗಳನ್ನೊಳಗೊಂಡ ಮಾಗಣೆ ದೇವಸ್ಥಾನ ಕೂಡ ಆಗಿದೆ.
ಶ್ರೀ ದೇವಾಲಯದ ವೈಶಿಷ್ಟ್ಯ: ಶ್ರೀ ದೇವಾಲಯವು ರಾಜ್ಯದ ಮುಜರಾಯಿ ಇಲಾಖೆಗೆ ಒಳಪಟ್ಟ “ಏಕೈಕ ಮೃತ್ಯುಂಜಯೇಶ್ವರ ದೇವಸ್ಥಾನ”ವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಶ್ರೀ ಕ್ಷೇತ್ರದಲ್ಲಿ ಶ್ರೀ ಮೃತ್ಯುಂಜಯೇಶ್ವರ ದೇವರಿಗೆ ರುದ್ರಾಭಿಷೇಕ, ಮೃತ್ಯುಂಜಯ ಜಪ, ಮೃತ್ಯುಂಜಯ ಹೋಮ ನೆರವೇರಿಸಿ ಪೂಜೆ, ಪ್ರಾರ್ಥನೆ ಸಲ್ಲಿಸಿದರೆ ಶ್ರೀ ದೇವರು ಸಂತೃಪ್ತಗೊಂಡು ಮೃತ್ಯು ದೋಷ, ಮೃತ್ಯು ಕಂಟಕ, ಮೃತ್ಯು ಭಯ ನಿವಾರಣೆಯಾಗಿ ಭಕ್ತರ ಆಯುಷ್ಯ ವೃದ್ಧಿಯಾಗುವುದು ಕಾರಣಿಕ ಸತ್ಯ. ಮೃತ್ಯುವನ್ನೇ ಜಯಿಸಿ ಜಗತ್ತಿಗೇ ಮಹಾದೇವನಾದ ಶ್ರೀ ಮೃತ್ಯುಂಜಯೇಶ್ವರನು ಶ್ರೀ ಕ್ಷೇತ್ರದಲ್ಲಿ ನೆಲೆ ನಿಂತಿರುವುದು ನಮ್ಮೆಲ್ಲರ ಪರಮ ಭಾಗ್ಯ.
ಈ ಕ್ಷೇತ್ರದಲ್ಲಿ ಮೃತ್ಯುಂಜಯ ಜಪ, ಮೃತ್ಯುಂಜಯ ಹೋಮ ನಡೆಸಿದರೆ ಶ್ರೀ ಮೃತ್ಯುಂಜಯೇಶ್ವರನು ಭಕ್ತರ ಸಂಕಷ್ಟಗಳನ್ನು ದೂರ ಮಾಡುತ್ತಾನೆ. ಇದು ಈ ಕ್ಷೇತ್ರದ ಮಹಿಮೆ. ಶ್ರೀ ಕ್ಷೇತ್ರದಲ್ಲಿ ಮೃತ್ಯುಂಜಯ ಜಪ, ಮೃತ್ಯುಂಜಯ ಹೋಮವನ್ನು ಭಕ್ತಿ ಶ್ರದ್ಧೆ ನಿಷ್ಠೆಯಿಂದ ನೆರವೇರಿಸಿದವರು ಮೃತ್ಯು ಭಯದಿಂದ ಮುಕ್ತವಾಗಿರುವ ನಿದರ್ಶನಗಳು ಸಾಕಷ್ಟು ಇದೆ. ಶ್ರೀ ದೇವಳದಲ್ಲಿ ನಿತ್ಯ ಬೆಳಿಗ್ಗೆ ಮತ್ತು ರಾತ್ರಿ ಹೊತ್ತು ಶ್ರೀ ದೇವರಿಗೆ ಪೂಜೆ ನಡೆಯುತ್ತದೆ. ಶ್ರೀ ದೇವಳದಲ್ಲಿ ಶ್ರೀ ಮೃತ್ಯುಂಜಯೇಶ್ವರ ದೇವರ ಸನ್ನಿಧಿಯಲ್ಲಿ ಶ್ರೀ ದೇವಳದ ವತಿಯಿಂದ ಭಕ್ತರು ಇಚ್ಚಿಸುವ ದಿನದಂದು ಮೃತ್ಯುಂಜಯ ಹೋಮ ನಡೆಸಿಕೊಡಲಾಗುವುದು. ಈ ಬಾಬ್ತು ರೂ. ೬,೫೦೦ ದರ ನಿಗದಿಪಡಿಸಲಾಗಿದೆ. (ಹೂವು, ಹಣ್ಣು ಹೊರತುಪಡಿಸಿ), ಮೃತ್ಯುಂಜಯ ಜಪವನ್ನೂ ಮಾಡಲಾಗುವುದು.
ಶ್ರೀ ದೇವಳವು ೨೦೦೮ನೇ ಇಸವಿಯಲ್ಲಿ ಕೆರೆಮನೆ ಶ್ರೀಮತಿ ನಳಿನಿ ಲೋಕಪ್ಪ ಗೌಡರ ನೇತೃತ್ವದಲ್ಲಿ, ಊರ-ಪರವೂರ ಭಕ್ತಾದಿಗಳ ಸಹಭಾಗಿತ್ವದಲ್ಲಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆದ ನಂತರ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಾ ಬಂದಿದೆ.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ – ಜಯಂತ ಎನ್. ನಡುಬೈಲು, ಅರ್ಚಕ – ರಮೇಶ ಬೈಪಡಿತ್ತಾಯ, ಸದಸ್ಯರುಗಳು – ಕೆ. ಕೊರಗಪ್ಪ ನಾಯ್ಕ, ವೀಣಾ ಲಕ್ಷ್ಮೀಶ ರಾವ್ ಪುತ್ತಿಲ, ಪುಷ್ಪಾವತಿ ದೇರಣ್ಣ ಶೆಟ್ಟಿ, ಕೆ. ಗುರುರಾಜ ಪುತ್ತೂರಾಯ, ಹಿರಣ್ಯ ಗಣಪತಿ ಭಟ್, ಜಯಂತ ನಡುಬೈಲು, ನಾಗೇಶ್ ನಾಕ್ ಎಸ್.ಕೆ., ಸುಂದರ ಗೌಡ ನಡುಬೈಲು.
ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು:
* ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮುಂಡೂರು
* ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ (ರಿ) ಉದಯಗಿರಿ ಮುಂಡೂರು ಪುತ್ತೂರು ದ.ಕ-574202
* ಶ್ರೀ ಸದಾಶಿವ ದೇವಸ್ಥಾನ ಆಲಡ್ಕ ಮೊ: 271643, 9449165821, 9448126273
* ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನ ಮುಂಡೂರು