ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವೀರಮಂಗಲ, ಸರ್ವೆ, ಪುತ್ತೂರು, ಫೋನ್: 08251-282290, 9449105790
ಸುಬ್ರಹ್ಮಣ್ಯದಲ್ಲಿ ಹುಟ್ಟಿ ಸಮೃದ್ಧವಾಗಿ ಹರಿಯುವ ಕುಮಾರಧಾರ ಹೊಳೆ ಹಾಗೂ ಸುಳ್ಯ ತಾಲೂಕು ಬಂಟಮಲೆ ಎಂಬಲ್ಲಿ ಹುಟ್ಟಿ ಹರಿಯುತ್ತಾ ಬರುವ ಗೌರಿಹೊಳೆ ಸಂಗಮವಾಗುವ ಸ್ಥಳವೇ ಇಡ್ಯಾಡಿ. ಪುತ್ತೂರು-ಸುಬ್ರಹ್ಮಣ್ಯ ರಾಜ ಮಾರ್ಗದ ಗಡಿಪಿಲ ಎಂಬಲ್ಲಿಂದ ಎರಡುವರೆ ಕಿ.ಮೀ. ದೂರದಲ್ಲಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನವಿದೆ.
ಬಲ್ಲಾಳ ರಾಜರಿಂದ ಆರಾಧಿಸುತ್ತಾ ಬಂದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಆಗಿನ ಕಾಲದಲ್ಲಿ ಶ್ರೀ ದೇವರ ಪೂಜೆಗೆ ಗೌರಿ ಹೊಳೆ ಆಚೆ ಬದಿಯಿಂದ ಬ್ರಾಹ್ಮಣರು ಬರುತ್ತಿದ್ದರೆಂಬ ನಂಬಿಕೆ. ೧೭೩೫ರ ಸುಮಾರಿಗೆ ವಿಜಯನಗರದಿಂದ ಲಿಂಗರಾಜ ಎಂಬ ಯಾದವರು ಬಂದು ಇಡ್ಯಾಡಿಯಲ್ಲಿ ಬೇಸಾಯ ಮಾಡುತ್ತಾ ಗೋಪಾಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಇರುತ್ತಿರುವ ಆ ಸಮಯದಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ಉತ್ಸವಕ್ಕೆ ಗೋಮೇಳ (ಗೋವುಗಳನ್ನು ಹೂ ಕಟ್ಟಿ ಪೂಜಿಸುವುದು)ವನ್ನು ಮಾಡುತ್ತಿದ್ದರು. ಕ್ರಮೇಣ ಇವರು ನಂತರ ಟಿಪ್ಪುಸುಲ್ತಾನನೊಡನೆ ಹೋರಾಡಿ ಯುದ್ಧದಲ್ಲಿ ಮಡಿಯಲು ಅಂದಿನ ಆ ಕಾಲದಲ್ಲಿ ದೇವರ ಪೂಜೆಗೆ ತೊಂದರೆ ಉಂಟಾದ್ದನ್ನು ಕಂಡು ಶಾಂತಿಗೋಡು ಗ್ರಾಮದ ನಿತ್ಯಮಂಗಲ ಎಂಬಲ್ಲಿ ಆಡಳಿತ ನಡೆಸುತ್ತಿದ್ದ ವೀರಮ್ಮ ಬಲ್ಲಾಳ್ತಿಯು ಇಡ್ಯಾಡಿಯ ಶ್ರೀ ವಿಷ್ಣುಮೂರ್ತಿ ದೇವರ ವಿಗ್ರಹವನ್ನು ನಿತ್ಯಮಂಗಲಕ್ಕೆ ತೆಗೆದುಕೊಂಡು ಹೋಗಿ ಪೂಜಿಸುತ್ತಿದ್ದಳೆಂಬ ನಂಬಿಕೆ ಇದೆ. ಹಾಗೆಯೇ ವೀರಮ್ಮ ಎಂಬ ಬಲ್ಲಾಳ್ತಿಯು ತಮ್ಮ ವಂಶದ ಶೌರ್ಯದ ಪ್ರತೀಕವಾಗಿ ಆ ಪ್ರದೇಶವನ್ನು ವೀರಮಂಗಲ ಎಂದು ಪರಿವರ್ತಿಸಿದ್ದಳೆಂದು ಇತಿಹಾಸವಿದೆ.
ಹಲವು ವರ್ಷಗಳಿಂದ ಮುಳಿಹುಲ್ಲಿನ ಚಾವಡಿಯಿಂದ ಕೇವಲ ಗರ್ಭಗುಡಿ ಮಾತ್ರ ಹೊಂದಿದ್ದ ಈ ದೇವಾಲಯ ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಭಗ್ನಾವಸ್ಥೆಯಲ್ಲಿತ್ತು. ೧೯೫೦ನೇ ಇಸವಿಯಲ್ಲಿ ದೇವಾಲಯಕ್ಕೆ ಹಂಚಿನ ಛಾವಣಿ ಮಾಡಿಸಲಾಯಿತು ಮತ್ತು ಕ್ರಮೇಣ ದೇವಳವನ್ನು ಜೀರ್ಣೋದ್ಧಾರ ಗೊಳಿಸಲಾಯಿತು.
ಅಧ್ಯಕ್ಷ – ಬಿ. ಶಿವರಾಮ ಭಟ್ ಬಾವ, ಸದಸ್ಯರುಗಳು: ರಾಧಾಕೃಷ್ಣ ಶಗ್ರಿತ್ತಾಯ (ಅರ್ಚಕರು), ವಿ. ವಿಶ್ವನಾಥ ನಾಯ್ಕ, ಶ್ರೀಮತಿ ಜಾನಕಿ ವಿ,ಶ್ರೀಮತಿ ಲೀಲಾವತಿ, ಕೆ.ಶೇಷಪ್ಪ ಗೌಡ, ಮೋನಪ್ಪ ಗೌಡ, ಬಿ.ಪದ್ಮನಾಭ ಮತ್ತು ವಿ. ಬೆಳಿಯಪ್ಪ ಗೌಡ ಪೆಲತ್ತಡಿ.
ವಿಶ್ವಸ್ಥ ಮಂಡಳಿ- ವಾಸುದೇವ ಇಡ್ಯಾಡಿ (ಅಧ್ಯಕ್ಷರು), ವೆಂಕಟಸುಬ್ರಾಯ ಮರಡಿತ್ತಾಯ (ಗೌರವಾಧ್ಯಕ್ಷರು), ಲಕ್ಷ್ಮೀಶ ತಂತ್ರಿ, ರಘುನಾಥ ನಾಕ್, ಶೀನಪ್ಪ ಮೂಲ್ಯ, ನಾರಾಯಣ, ಮಾರಪ್ಪ ಗೌಡ, ಬಾಳಪ್ಪ ಗೌಡ, ಶೀನಪ್ಪ ಪೂಜಾರಿ (ಸದಸ್ಯರು).
ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮರಕ್ಕೂರು ಆನಡ್ಕ
* ಶ್ರೀ ಶಾಸ್ತಾರ ದೇವಸ್ಥಾನ ಕೆಂಬ್ಲಾಜೆ ಶಾಂತಿಗೋಡು 08251-280606, 280665
* ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಶಾಂತಿಗೋಡು
* ಶ್ರೀ ಹೊಸಲಕ್ಕೆತ್ತಾಯ ರಕ್ತೇಶ್ವರಿ ದೈವ ದೇವರ ಸೇವಾ ಸಮಿತಿ ಮರಕ್ಕೂರು
* ಶ್ರೀ ಆದಿ ಮೊಗೆರ್ಕಳ ಗರಡಿ ಆನಡ್ಕ
* ಶ್ರೀ ಆದಿ ಮೊಗೆರ್ಕಳ ಗರಡಿ ಪಜಿರೋಡಿ ಶಾಂತಿಗೋಡು
* ಶ್ರೀ ಆದಿ ಮೊಗೆರ್ಕಳ ಗರಡಿ ವೀರಮಂಗಲ
* ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಕೈಂದಾಡಿ ಶಾಂತಿಗೋಡು