ಶ್ರೀ ಗುರುರಾಘವೇಂದ್ರ ಮಠ, ಕಲ್ಲಮ, ಸರ್ವೆ ಅಂಚೆ, ಫೋನ್: 271522, ಮೊ:8722614493
ಪ್ರಕೃತ ಕಲ್ಲಮ ಶ್ರೀ ಗುರುರಾಘವೇಂದ್ರ ಮಠದ ಅಧ್ಯಕ್ಷ ರಾಗಿರುವ ಡಾ| ಕೆ. ಸೀತಾರಾಮ ಭಟ್ ರವರಿಗೆ ವಿವಾಹವಾಗಿ 4 ವರ್ಷಗಳಾದರೂ ಅವರಿಗೆ ಸಂತಾನ ಭಾಗ್ಯವಾಗದೇ ಇದ್ದಾಗ ಸಂತಾನಭಾಗ್ಯ ಕರುಣಿಸುವಂತೆ ಶ್ರೀ ಗುರುರಾಘವೇಂದ್ರ ಸ್ವಾಮಿಯನ್ನು ಪ್ರಾರ್ಥಿಸಿ, ಕಲ್ಲಮದಲ್ಲೇ ಶ್ರೀ ಗುರುಗಳಿಗೆ ಗುಡಿಯನ್ನು ನಿರ್ಮಿಸುವುದಾಗಿ ಸಂಕಲ್ಪ ಮಾಡಿದ್ದರು.
ಪ್ರಾರ್ಥನೆ ಈಡೇರಿದಾಗ ಅವರು ಮಾಡಿದ್ದ ಸಂಕಲ್ಪ ದಂತೆ ಮಠವನ್ನು ನಿರ್ಮಿಸಿ ೨೭-೧೧-೧೯೮೭ರಂದು ಮಂತ್ರಾಲಯದ ಶ್ರೀ ಗುರುಗಳ ಮೂಲ ಮೃತ್ತಿಕೆಯ ಸಹಿತ ಶಿಲಾಮಯ ಬೃಂದಾವನವನ್ನು ಪ್ರತಿಷ್ಠಾಪಿಸಲಾಯಿತು. ತೌಡಿಂಜ ಗುರುರಾಜ ಪಡ್ಡಿಲ್ಲಾಯರ ಅಪೇಕ್ಷೆಯಂತೆ ೧೮-೧೨-೨೦೦೪ ರಲ್ಲಿ ಶ್ರೀ ಗುರುಗಳಿಗೆ ರಥ ಸಮರ್ಪಣೆ ಕಾರ್ಯ ನಡೆದಿದೆ. ೧೯೯೪ರಲ್ಲಿ ಸುಸಜ್ಜಿತ ಶ್ರೀ ರಾಘವೇಂದ್ರ ಕಲಾ ಮಂದಿರದ ಸ್ಥಾಪನೆ, ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಮನೆ ದೇವರಾದ ಶ್ರೀ ನಂದಿಕೇಶ್ವರನಿಗೆ ಮಠದ ಆವರಣದಲ್ಲಿ ಗುಡಿಯನ್ನು ನಿರ್ಮಿಸಲಾಗಿದೆ. ಪ್ರತಿ ವರ್ಷವೂ ಪ್ರತಿಷ್ಠಾಪನೆಯ ದಿನದಂದು ವಾರ್ಷಿಕೋತ್ಸವ ಮತ್ತು ಶ್ರೀ ಗುರುಗಳ ಆರಾಧನಾ ಮಹೋತ್ಸವ ಅರ್ಥಪೂರ್ಣವಾಗಿ ನಡೆಯುತ್ತಾ ಬರುತ್ತಿದೆ.
ಶ್ರೀ ಸುಬ್ರಾಯ ದೇವಸ್ಥಾನ ಸರ್ವೆ ಮೊ: 9740934790
ದರ್ಬೆ-ಸುಬ್ರಹ್ಮಣ್ಯ ರಸ್ತೆಯಲ್ಲಿ ಪುತ್ತೂರಿನಿಂದ 11 ಕಿ.ಮೀ. ದೂರದ ಸರ್ವೆಯ ಬಲ ಬದಿಗೆ ಸರ್ವೆ-ಸೊರಕೆ ರಸ್ತೆಯಲ್ಲಿ ೨೦೦ ಮೀಟರ್ ದೂರದಲ್ಲಿ ಈ ದೇವಸ್ಥಾನವಿದೆ. ಸುಬ್ರಹ್ಮಣ್ಯ ದೇವರು ಇಲ್ಲಿಯ ಆರಾಧ್ಯ ದೇವರು. ಅಲ್ಲದೆ ಹುಲಿಭೂತ, ಶಿರಾಡಿ, ಕಲ್ಕುಡ, ಪಂಜುರ್ಲಿ, ಕಲ್ಲುರ್ಟಿ, ಗುಳಿಗ ದೈವಗಳ ಸಾನಿಧ್ಯವೂ ಇದೆ.
ಸುಬ್ರಾಯ ದೇವಸ್ಥಾನ, ಸರ್ವೆ, ಅಂಚೆ: ಸರ್ವೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು; ಸುರೇಶ್ ಕುಮಾರ್ ಸೊರಕೆ, ರಾಮಕೃಷ್ಣ ರೈ (ಉಪಾಧ್ಯಕ್ಷರು), ಶ್ರೀರಾಮ ಕಲ್ಲೂರಾಯ (ಅರ್ಚಕರು), ಎಸ್.ಡಿ.ಉಮೇಶ್ (ಕಾರ್ಯದರ್ಶಿ), ಮಹಾಬಲ ರೈ (ಜತೆಕಾರ್ಯದರ್ಶಿ), ಸದಸ್ಯರು: ಗುರುರಾಜ್ ಪಡ್ಡಿಲ್ಲಾಯ, ಕಮಲ, ಎಸ್.ದೀಪಾ, ಕುಕ್ಕ.
ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು:
* ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಎಲಿಯ, ಅಂಚೆ ಸರ್ವೆ-574202
* ಶ್ರೀ ರಾಜರಾಜೇಶ್ವರಿ ದೇವಸ್ಥಾನ ಕಲ್ಪಣೆ ಸರ್ವೆ ಅಂಚೆ & ಗ್ರಾಮ ಪುತ್ತೂರು ದ.ಕ-574202, 271336
* ಬೊಟ್ಯಾಡಿ ಗುತ್ತು ದೈವಸ್ಥಾನ