ಕಲ್ಮಡ್ಕ : ನವೋದಯ ಸಂಘದ ಆಶ್ರಯದಲ್ಲಿ 44ನೇ ವರ್ಷದ ಶ್ರೀ ಗಣೇಶೋತ್ಸವ

0

 

 

ನವೋದಯ ಸಂಘ ಕಲ್ಮಡ್ಕ ಇದರ ಆಶ್ರಯದಲ್ಲಿ 44ನೇ ವರ್ಷದ ಶ್ರೀ ಗಣೇಶೋತ್ಸವವು ಕಲ್ಮಡ್ಕ ಶಾಲಾ ವಠಾರದಲ್ಲಿ ವೇದಮೂರ್ತಿ ಶ್ರೀ ವಿಘ್ನೇಶ್ವರ ಭಟ್ ಎಂ.ಎಸ್ ಇವರ ನೇತೃತ್ವದಲ್ಲಿ ನಡೆಯಿತು.
ಬೆಳಗ್ಗೆ ಗಣಹೋಮ ಮತ್ತು ಗಣಪತಿ ಪ್ರತಿಷ್ಠೆಯ ಬಳಿಕ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆಯ ನಂತರ ಪ್ರಸಾದ ವಿತರಣೆ ನಡೆಯಿತು.
ಅಪರಾಹ್ನ ಅಂಗನವಾಡಿ ಮಕ್ಕಳ ನೃತ್ಯ ವೈವಿಧ್ಯ, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅರವಿಂದ ಚೊಕ್ಕಾಡಿ ಇವರಿಂದ ಧಾರ್ಮಿಕ ಉಪನ್ಯಾಸ ಮತ್ತು ಸಂಘದಲ್ಲಿ ಸೇವೆ ಸಲ್ಲಿಸಿದ ಗೌರವಾನ್ವಿತರಿಗೆ ಗೌರವಾರ್ಪಣೆ ನಡೆಯಿತು. ಬಳಿಕ ಗಣೇಶ ವಿಗ್ರಹದ ಶೋಭಾಯಾತ್ರೆ ನಡೆಯಿತು. ಸಂಜೆ ಕಲ್ಮಡ್ಕ ಶಾಲಾ ವಿದ್ಯಾರ್ಥಿಗಳ ಕಾರ್ಯಕ್ರಮ ಮತ್ತು ಶಾಂಭವಿ ವಿಲಾಸ ಯಕ್ಷಗಾನ ಬಯಲಾಟ ನಡೆಯಿತು.

LEAVE A REPLY

Please enter your comment!
Please enter your name here