ಮಾಡನ್ನೂರು ಮಖಾಂ ಉರೂಸ್‌ಗೆ ಚಾಲನೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಮಾಡನ್ನೂರು ಮಖಾಂ ಉರೂಸ್ ಸಮಾರಂಭಕ್ಕೆ ಫೆ.೧೩ರಂದು ಚಾಲನೆ ನೀಡಲಾಯಿತು. ಮಾಡನ್ನೂರು ಜುಮಾ ಮಸೀದಿ ಖತೀಬ್ ಸಿರಾಜುದ್ದೀನ್ ಫೈಝಿಯವರ ನೇತೃತ್ವದಲ್ಲಿ ಮಖಾಂ ಝಿಯಾರತ್ ನಡೆಯಿತು. ಮಾಡನ್ನೂರು ಜಮಾಅತ್ ಕಮಿಟಿ ಅಧ್ಯಕ್ಷ ಕೆ.ಕೆ ಇಬ್ರಾಹಿಂ ಹಾಜಿ ಧ್ವಜಾರೋಹಣ ನೆರವೇರಿಸಿದರು. ಮಾಡನ್ನೂರು ನೂರುಲ್ ಹುದಾದ ಪ್ರಿನ್ಸಿಪಾಲ್ ಅಡ್ವೊಕೇಟ್ ಹನೀಫ್ ಹುದವಿ ಶುಭ ಹಾರೈಸಿದರು. ಮಾಡನ್ನೂರು ಜಮಾಅತ್ ಕಮಿಟಿ ಉಪಾಧ್ಯಕ್ಷ ಸಿ.ಎಚ್ ಅಬ್ದುಲ್ ಅಝೀಝ್ ಅವರು ನೀಡಿದ ಚಾದರವನ್ನು ಬುರ್ಹಾನ್ ತಂಙಳ್ ನೇತೃತ್ವದಲ್ಲಿ ಮಖಾಂಗೆ ಸಮರ್ಪಿಸಲಾಯಿತು. ನೂರುಲ್ ಹುದಾದ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್, ಜಮಾಅತ್ ಕಮಿಟಿ ಉಪಾಧ್ಯಕ್ಷ ಬಿ.ಎಂ ಅಬ್ದುಲ್ಲ, ಪ್ರ.ಕಾರ್ಯದರ್ಶಿ ಅಬ್ದುಲ್ ಖಾದರ್ ಮುಸ್ಲಿಯಾರ್, ಕೋಶಾಧಿಕಾರಿ ಯೂಸುಫ್ ಹಾಜಿ ಅರೆಯಲಾಡಿ, ಎನ್‌ಎಚ್‌ಐಎ ಕೋಶಾಧಿಕಾರಿ ಇಸ್ಮಾಯಿಲ್ ಹಾಜಿ ನೆಕ್ಕರೆ, ಉದ್ಯಮಿ ಇಬ್ರಾಹಿಂ ಹಾಜಿ ಪುಷ್ಪಕ್, ಅಬೂಬಕ್ಕರ್ ಹಾಜಿ ಮಂಗಳ ಬೆಳ್ಳಾರೆ, ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ ಸೇರಿದಂತೆ ಹಲವು ಗಣ್ಯರು, ಮಾಡನ್ನೂರು ಜಮಾಅತರು, ನೂರುಲ್ ಹುದಾದ ವಿದ್ಯಾರ್ಥಿಗಳು, ಮಾಡನ್ನೂರು ಮೊಹಲ್ಲಾ ವ್ಯಾಪ್ತಿಯ ಮೂರು ಮದ್ರಸಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು, ಊರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here