ಸುಳ್ಯ : ಶಿವಳ್ಳಿ ಸಂಪನ್ನ ಆಯೋಜನೆಯಲ್ಲಿ ತಿಂಡಿ ಮೇಳ

0

 

 

ಸುಳ್ಯ ತಾಲೂಕು ಶಿವಳ್ಳಿ ಸಂಪನ್ನ ವತಿಯಿಂದ ಕಳೆದ 15 ವರ್ಷಗಳಿಂದ ಸುಳ್ಯದಲ್ಲಿ ಆಯೋಜಿಸಲ್ಪಡುವ ವಿಶೇಷ ಆಹಾರ ಖಾದ್ಯಗಳ ತಿಂಡಿ ಮೇಳವು ಸುಳ್ಯದ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಅ. 9 ರಂದು ನಡೆಯಿತು.
ತಿಂಡಿ ಮೇಳವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರಿನ ವಿ.ವಿ.ಪ್ರಾಂಶುಪಾಲೆ ಶ್ರೀಮತಿ ಸುಭಾಷಿಣಿ ಶ್ರೀ ವತ್ಸ ರವರು ಉದ್ಘಾಟಿಸಿದರು. ಶಿವಳ್ಳಿ ಸಂಪನ್ನ ದ ಅಧ್ಯಕ್ಷ ಪ್ರವೀಣ್ ಎಸ್.ರಾವ್ ಅಧ್ಯಕ್ಷತೆ ವಹಿಸಿದ್ದರು. ಶ್ರೀವತ್ಸ ಭಟ್ ಮಂಗಳೂರು,ಬೃಂದಾವನ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಎನ್. ಶ್ರೀಕೃಷ್ಣ ಸೋಮಯಾಗಿ,ನವೀನ್ ಸೋಮಯಾಗಿ, ಶ್ರೀಮತಿ ಮಮತಾ ಮೂಡಿತ್ತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.
ಸಂಘದ ಸದಸ್ಯರು ಮನೆಯಲ್ಲಿ ತಯಾರಿಸಿ ತಂದ ಸುಮಾರು 16 ಬಗೆಯ ವಿವಿದ ಖಾದ್ಯಗಳು ಇದ್ದವು.ಆಗಮಿಸಿದ ಎಲ್ಲರೂ ತಿಂಡಿಯ ಸವಿಯನ್ನು ಸವಿದರು.

LEAVE A REPLY

Please enter your comment!
Please enter your name here