ಮಗುವಿನ ಪರಿಪೂರ್ಣ ಬೌದ್ಧಿಕ ವಿಕಸನವೇ ಲಕ್ಷ್ಯ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ

0


ಸಾಂಸ್ಕೃತಿಕ ನಗರಿ ಮೈಸೂರಿನಿಂದ ಮಂಗಳೂರು ಬರುವ ರಾಜ್ಯ ಹೆದ್ದಾರಿ ಹಾಗೂ ರಾಜ್ಯ ರಾಜಧಾನಿ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಂಗಮ ಸ್ಥಳ ಎಂದು ಗುರುತಿಸಲ್ಪಟ್ಟ ಬಂಟ್ವಾಳ ತಾಲೂಕಿನ ಮಾಣಿ ಸರ್ವ ರೀತಿಯಲ್ಲಿ ವೇಗವಾಗಿ ವಿಕಸನ ಹೊಂದುತ್ತಿರುವ ಪ್ರದೇಶವಾಗಿದೆ. ಇಂತಹ ಗ್ರಾಮೀಣ ಪ್ರದೇಶದಲ್ಲಿ ಸಮಾನ ಮನಸ್ಕ ಹಿರಿಯರ ಸತ್ ಚಿಂತನೆಯ ಫಲವಾಗಿ ಜೂನ್ 01 , 1989 ರಂದು ಮಾಣಿಯ ಹೃದಯ ಭಾಗದಲ್ಲಿ, ರಾಷ್ಟ್ರೀಯ ಹೆದ್ದಾರಿ 75 ರ ಮಗ್ಗುಲಲ್ಲಿ ಶ್ರೀ ವಿದ್ಯಾ ಎಂಬ ನಾಮಧೇಯದೊಂದಿಗೆ ಬಾಲವಿಕಾಸ ವಿದ್ಯಾಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭಗೊಂಡವು. ಗುಣಮಟ್ಟದ ಶಿಕ್ಷಣವನ್ನು ಮೂಲಮಂತ್ರವಾಗಿಸಿಕೊಂಡು ದಾಪುಗಾಲು ಇಡುತ್ತಿದ್ದ ಈ ಸಂಸ್ಥೆ ಬಾಲವಿಕಾಸ ಎಂಬ ಅನ್ವರ್ಥ ನಾಮದೊಂದಿಗೆ ನಿಜಾರ್ಥದಲ್ಲಿ ವಿದ್ಯಾರ್ಥಿಗಳ ಪರಿಪೂರ್ಣ ಬೆಳವಣಿಗೆಗೆ ಕಂಕಣ ಬದ್ಧವಾಗಿದೆ. ಕನಿಷ್ಠ ಬಂಡವಾಳದೊಂದಿಗೆ ಕೇವಲ 13 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಈ ಸಂಸ್ಥೆ ಮೂಲ ಸೌಕರ್ಯವನ್ನು ಹೆಚ್ಚಿಸುತ್ತಾ ಗುಣಾತ್ಮಕವಾಗಿ ಹಾಗೂ ಸಂಖ್ಯಾತ್ಮಕವಾಗಿ ಬೆಳೆಯುತ್ತಾ ಇಂದು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿ ಸಮುದಾಯದೊಂದಿಗೆ ತಾಲೂಕು, ಜಿಲ್ಲೆ ಹಾಗೂ ರಾಜ್ಯದ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವುದು ಸ್ತುತ್ಯರ್ಹ.

ಶೈಕ್ಷಣಿಕ ಚಟುವಟಿಕೆಗಳ ಪರಿಪೂರ್ಣ ಸಂಪನ್ನ: ಹತ್ತನೇ ತರಗತಿಯಲ್ಲಿ ನೂರು ಶೇಕಡಾ ಫಲಿತಾಂಶವನ್ನು ದಾಖಲಿಸುವಲ್ಲಿ ತ್ರಿಕರಣ ಪೂರ್ವಕ ಪ್ರಯತ್ನ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಸ್ಪರ್ಧಿಸಿದ ಅನುಭವ, ಜಿಮ್ ಕೊಠಡಿ ನಿರ್ಮಾಣ , ನಿರಂತರ ಚಟುವಟಿಕೆಗಳಿಂದ ಕೂಡಿದ ಸ್ಕೌಟ್-ಗೈಡ್, ಕ್ಲಬ್ ಬುಲ್ ಬುಲ್ ವಿಭಾಗಗಳು, ಕಂಪ್ಯೂಟರ್ ಶಿಕ್ಷಣ , ಸುಸಜ್ಜಿತ ಒಳಾಂಗಣ ಹಾಗೂ ಹೊರಾಂಗಣ ಸಭಾಭವನದ, ಪ್ರಯೋಗಾಲಯ, ವಾಚನಾಲಯ, ವಿಜ್ಞಾನ ನಾಟಕ ಸ್ಪರ್ಧೆಗಳಲ್ಲಿ ವಿಭಾಗೀಯ ಮಟ್ಟಕ್ಕೆ ಆಯ್ಕೆ, ಸ್ವಾದಿಷ್ಠ ಹಾಗೂ ಪೌಷ್ಠಿಕ ಬಿಸಿಯೂಟದ ವ್ಯವಸ್ಥೆ , ಹೀಗೆ ಮೂಲ ಸೌಕರ್ಯಗಳೊಂದಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಸಂಪನ್ನಗೊಳಿಸಿದ ಕೀರ್ತಿ ಸಂಸ್ಥೆಗಿದೆ. ಸೀಮಿತವಾದ ಸ್ಥಳಾವಕಾಶವಿದ್ದರೂ ಶಾಲೆಗೆ ದಾಖಲಾತಿ ಬಯಸಿದ ಬಾಲಕ ಬಾಲಕಿಯರ ವಿಕಾಸವನ್ನೇ ಪ್ರಮುಖ ಲಕ್ಷ್ಯವಾಗಿಸಿ, ಯಾವುದೇ ಫಲಾಪೇಕ್ಷೆಗಳನ್ನು ಬಯಸದೇ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಪ್ರಾಜ್ಞರ ನುಡಿಯಂತೆ ಸಾಗಿದುದರ ಫಲವಾಗಿ ಸಂಸ್ಥೆ ಏರುಗತಿಯಲ್ಲಿ ಸಾಗುತ್ತಾ ಸುತ್ತಮುತ್ತಲ ಜನವಸತಿ ಪ್ರದೇಶದಲ್ಲಿ ಗುರುತಿಸಲ್ಪಟ್ಟಿದೆ. ಅನುಭವಿ ಬೋಧಕ-ಬೋಧಕೇತರ ಸಿಬ್ಬಂದಿಗಳ ತಂಡದೊಂದಿಗೆ ಸಂಸ್ಥೆ ಶೈಕ್ಷಣಿಕವಾಗಿ ಪರಿಪೂರ್ಣತೆಯೊಂದಿಗೆ ದಾಪುಗಾಲು ಇಡುತ್ತಿದೆ.

ವಿನೂತನ ಬಾಲವಿಕಾಸ ವಿದ್ಯಾಸಂಸ್ಥೆ ಸ್ಥಾಪನೆ: ಈ ಸಂಸ್ಥೆಯ ನಾಗಾಲೋಟಕ್ಕೆ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣದ ಅಧಿಕಾರಿಗಳಿಂದ ಕಟ್ಟಡ ತೆರವುಗೊಳಿಸುವ ಸುದ್ದಿ ಬಹುದೊಡ್ಡ ಅಘಾತವನ್ನೇ ನೀಡಿತ್ತು. ಪರಿಸ್ಥಿತಿಯ ತ್ರೀವ್ರತೆಯನ್ನು ಅರಿತುಕೊಂಡ ಶಾಲಾಡಳಿತ ಮಂಡಳಿ ಕೂಡಲೇ ಕೂಗಳತೆಯ ದೂರದಲ್ಲಿ ಸುಮಾರು ೬ ಎಕ್ರೆ ಜಾಗವನ್ನು ಶಾಲೆಗಾಗಿ ಖರೀದಿ ಮಾಡಿದ್ದು ಕಟ್ಟಡ ಕಾಮಗಾರಿಯ ಕೆಲಸಗಳನ್ನು ಪ್ರಾರಂಭಿಸಿದ್ದು, ಆಡಳಿತ ಮಂಡಳಿಯ ಅದಮ್ಯ ಸಂಕಲ್ಪ ಶಕ್ತಿಗೆ ಹಿಡಿದ ಕೈಗನ್ನಡಿ. ಮಾಣಿ ಪೇಟೆಯಿಂದ ಪುತ್ತೂರು-ಮೈಸೂರು ರಸ್ತೆಯ ೫೦೦ ಮೀಟರ್ ದೂರದಲ್ಲಿ ವಿದ್ಯಾನಗರ ಪಾಳ್ಯ ಎಂಬ ಸ್ಥಳದಲ್ಲಿ ನೂತನ ಬಾಲವಿಕಾಸ ವಿದ್ಯಾಮಂದಿರ ಸ್ಥಾಪನೆಗೊಳ್ಳಲಿದೆ.
ಕಳೆದ ೩೩ ವರ್ಷಗಳ ಸುಧೀರ್ಘ ಶೈಕ್ಷಣಿಕ ಅನುಭವಗಳನ್ನು ಹೊಂದಿದ ಬಾಲವಿಕಾಸ ಟ್ರಸ್ಟ್ ಪ್ರಸ್ತುತ ಕಾಲಘಟ್ಟದ ವಿದ್ಯಾದೇಗುಲದ ಅಗತ್ಯತೆಗಳನ್ನು ಮನಗಂಡು ಸುಸಜ್ಜಿತ ಮೂಲ ಸೌಕರ್ಯ ಪರಿಕಲ್ಪನೆಯಲ್ಲಿ ಬಾಲವಿಕಾಸವೆಂಬ ವಿನೂತನ ಶಾಲಾ ಪರಿಸರವನ್ನು ಸಮಾಜಕ್ಕೆ ಅರ್ಪಣೆ ಮಾಡಲು ಮಾನಸಿಕವಾಗಿ ಸಿದ್ಧತೆ ನಡೆಸುತ್ತಿರುವುದು ಮಾಣಿ ಹಾಗೂ ಆಸುಪಾಸಿನ ಎಲ್ಲಾ ಜನರ ಸೌಭಾಗ್ಯವೇ ಸರಿ. ವಿಸ್ತಾರವಾದ ಕ್ರೀಡಾಂಗಣ, ಈಜುಕೊಳದ ವ್ಯವಸ್ಥೆ , ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಪ್ರಯೋಗಾಲಯಗಳು, ಗುಣಮಟ್ಟದ ವಾಚನಾಲಯ, ಕನಿಷ್ಠ ದರದಲ್ಲಿ ಸ್ವಾದಿಷ್ಟ ಪೌಷ್ಠಿಕ ಬಿಸಿಯೂಟದ ಯೋಜನೆ, ಪ್ರತಿ ತರಗತಿಗಳಿಗೂ ಡಿಜಿಟಲ್ ಬೋರ್ಡ್, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸಿಸಿ ಕ್ಯಾಮರ ಅಳವಡಿಕೆ, ಸುರಕ್ಷತೆಗೆ ಸಂಬಂಧಿಸಿದ ಆಧುನಿಕ ತಂತ್ರಜ್ಞಾನ, ಸ್ಕೂಲ್ ಆಪ್, ಪಾಲಕರ ಮೊಬೈಲ್ ಆಪ್, ಪಠ್ಯೇತರ ಚಟುವಟಿಕೆಗಳ ಪರಿಣಾಮಕಾರಿ ಕಲಿಕೆಗಾಗಿ ಪ್ರತ್ಯೇಕ ಕೊಠಡಿಗಳು, ಆಧುನಿಕ ಸಂವಹನ ತಂತ್ರಜ್ಞಾನ ವಿಸ್ತಾರವಾದ ಒಳಾಂಗಣ ಸಭಾಭವನ ಹೀಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಬಾಲವಿಕಾಸ ಮಾಣಿ ಎಂಬ ವಿದ್ಯಾಸಂಸ್ಥೆ ಹೊಸ ಲಾಲಿತ್ಯದೊಂದಿಗೆ ಬರುವ ಶೈಕ್ಷಣಿಕ ವರ್ಷದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಭಾರತೀಯ ಶಿಕ್ಷಣ ಪದ್ಧತಿಯನ್ನು ಜೀವಾಳವನ್ನಾಗಿಸಿ ರಾಷ್ಟ್ರ್ರೀಯ ಹೊಸ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಅಳವಡಿಸುತ್ತಾ ಮುಂದಿನ ದಿನಗಳಲ್ಲಿ ಇನ್ನಷ್ಟು ಚೈತನ್ಯಪೂರ್ಣವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಈ ಭಾಗದ ಆರಾಧ್ಯಶಕ್ತಿ ಶ್ರೀ ಉಳ್ಳಾಲ್ತಿ ಅಮ್ಮನವರ ಪೂರ್ಣಾನುಗ್ರಹ ಸಂಸ್ಥೆಯ ಮೇಲಿದೆ ಎನ್ನುವ ಭಕ್ತಿ ವಿಶ್ವಾಸದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಾ ಕ್ರಿಯಾಶೀಲತೆಯಿಂದ ಶಾಲೆಯ ಬೆಳವಣಿಗೆಯ ಯೋಚನೆ ಯೋಜನೆಯಲ್ಲಿ ತೊಡಗಿಸಿಕೊಂಡಿದೆ.
ಶಾಲಾ ವಾಹನ ವ್ಯವಸ್ಥೆ: ಉಪ್ಪಿನಂಗಡಿ, ಕಡೇಶಿವಾಲಯ, ದಿಂಡಿಕೆರೆ, ಮಿತ್ತೂರು ಮತ್ತು ಬಿಸಿರೋಡ್ ನ ಪ್ರದೇಶಗಳಿಂದ ಬರುವ ಮಕ್ಕಳಿಗಾಗಿ ಶಾಲಾ ಬಸ್‌ನ ವ್ಯವಸ್ಥೆ ಮಾಡಲಾಗಿದೆ.

ಪೇಟೆಪಟ್ಟಣಗಳಲ್ಲಿ ಸಿಗುವ ಶಿಕ್ಷಣ – ತರಗತಿಗಳಿಗೆ ಸಂಪೂರ್ಣ ಡಿಜಿಟಲ್ ಟಚ್
ಕಳೆದ ಹಲವಾರು ವರುಷಗಳಿಂದ ಈ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿ ಅದೆಷ್ಟೋ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ನಮ್ಮ ಸಂಸ್ಥೆಯನ್ನು ಮುಂದಿನ ಶೈಕ್ಷಣಿಕ ವರುಷದಿಂದ ನೂತನ ಕಟ್ಟಡದಲ್ಲಿ ಆರಂಭಿಸಲಿದ್ದೇವೆ. ದೊಡ್ಡದೊಡ್ಡ ಪೇಟೆ ಪಟ್ಟಣಗಳಲ್ಲಿ ಸಿಗುವ ಸವಲತ್ತುಗಳು ಗ್ರಾಮೀಣ ಭಾಗದಲ್ಲಿರುವ ನಮ್ಮ ಮಕ್ಕಳಿಗೂ ಸಿಗಬೇಕೆನ್ನುವ ನಿಟ್ಟಿನಲ್ಲಿ ನೂತನ ಕಟ್ಟಡದಲ್ಲಿ ಹೊಸಹೊಸ ಯೋಜನೆಗಳನ್ನು ಅಳವಡಿಸಿಕೊಂಡು ಮಿತದರದಲ್ಲಿ ಶಿಕ್ಷಣ ನೀಡಲು ಮುಂದಾಗಿದ್ದೇವೆ. ನೂತನ ಕಟ್ಟದಲ್ಲಿ ಆರಂಭವಾಗಲಿರುವ ನಮ್ಮ ಶಾಲೆಯ ಪ್ರತಿಯೊಂದು ತರಗತಿಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡಲಾಗಿದೆ. ಇಂತಹ ಗ್ರಾಮೀಣ ಭಾಗದಲ್ಲಿ ದೊಡ್ಡದೊಡ್ಡ ಪೇಟೆಯಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂದಾಗ ಇದೀಗಾಗಲೇ ಈ ಭಾಗದ ವಿದ್ಯಾರ್ಥಿಗಳ ಪೋಷಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಹೆಚ್ಚಿನ ಭಾಗಗಳಿಗೆ ಶಾಲಾ ವಾಹನದ ವ್ಯವಸ್ಥೆಯನ್ನು ಇದೀಗಾಗಲೇ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಉಳಿದ ಕಡೆಗಳಿಗೂ ವಾಹನದ ವ್ಯವಸ್ಥೆಯನ್ನು ಮಾಡಲಾಗುವುದು. ಈ ವರೆಗೆ ಎಲ್ಲಾ ಭಾಗದ ಜನರು ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದಾರೆ ಅವರೆಲ್ಲರಿಗೂ ನಾವು ಅಭಾರಿಯಾಗಿzವೆ. ಮುಂದಿನ ದಿನಗಳಲ್ಲಿಯೂ ತಮ್ಮೆಲ್ಲರ ಸಹಕಾರವನ್ನು ಯಾಚಿಸುತ್ತಿದ್ದೇವೆ-ಪ್ರಹ್ಲಾದ ಶೆಟ್ಟಿ ಜೆ., ಸಂಚಾಲಕರು, ಬಾಲವಿಕಾಸ ಟ್ರಸ್ಟ್ ಮಾಣಿ

ನರ್ಸರಿಯಿಂದ ಹತ್ತನೇ ತರಗತಿಯವರೆಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ದಾಖಲಾತಿ ಪ್ರಕ್ರಿಯೆ ಆರಂಭಗೊಂಡಿದ್ದು, ಶಾಲಾ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಮಾಹಿತಿಗಾಗಿ 0824-6666687, Mob: 9902236466 Email-bvemsmani@gmail.com ಸಂಪರ್ಕಿಸಬಹುದಾಗಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

ಆಧುನಿಕತೆಯ ಹೊಸ್ತಿಲಲ್ಲಿ ಭಾರತೀಯ ಶಿಕ್ಷಣ ಪದ್ದತಿ – ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿನೂತನ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಬಾಲವಿಕಾಸ ವಿದ್ಯಾಸಂಸ್ಥೆ ಮುಂದಾಗಿದೆ.

LEAVE A REPLY

Please enter your comment!
Please enter your name here