ಪುತ್ತೂರು: ಸಮಸ್ತ ಕೇರಳ ಇಸ್ಲಾಂ ಮದ ವಿಧ್ಯಾಭ್ಯಾಸ ಪರೀಕ್ಷಾ ಬೋರ್ಡ್ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ತಿಂಗಳಾಡಿ ಜಿಸ್ತಿಯಾ ಮದ್ರಸದ 5 ಮತ್ತು 7ನೇ ತರಗತಿಯಿಂದ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100ಫಲಿತಾಂಶ ಪಡೆದುಕೊಂಡಿದೆ. 7ನೇ ತರಗತಿಯಲ್ಲಿ ಆಮೀನತ್ ಮಸ್ನಾ ಹಾಗೂ ಫಾತಿಮತ್ ತಸ್ನೀಂ ಪ್ರಥಮ ಸ್ಧಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಮದ್ರಸ ಅಧ್ಯಾಪಕರಾದ ಅಬ್ದುಲ್ ಸತ್ತಾರ್ ಕೌಸರಿ, ಜಿಸ್ತಿಯಾ ಮದ್ರಸ ಸಮಿತಿ ಅದ್ಯಕ್ಷರಾದ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಹಾಜಿ ಹಾಗು ಪದಾಧಿಕಾರಿಗಳು, ಪೋಷಕರು ಅಭಿನಂದಿಸಿದರು.